ವಿವಿಧೆಡೆ ಹೋಳಿ ಸಡಗರ
ಹಿರೇಕೆರೂರು: ಪಟ್ಟಣದಲ್ಲಿ ಗುರುವಾರ ಹೋಳಿ ಹಬ್ಬದ ಸಂಭ್ರಮ ಮುಗಿಲುಮುಟ್ಟಿತ್ತು. ಬಾಲಕರು, ಯುವಕರು ಮಹಿಳೆಯರು ಎಲ್ಲರೂ ಹೋಳಿ ರಂಗಿನಾಟದಲ್ಲಿ ಪರಸ್ಪರ ಬಣ್ಣ ಹಚ್ಚುತ್ತಾ ಸಂಭ್ರಮಸಿದರು. ಪಟ್ಟಣದ ಬಯಲು ಬಸವೇಶ್ವರ ದೇವಸ್ಥಾನದ ಸಮೀಪದಲ್ಲಿ ಪ್ರತಿಷ್ಠಾಪಿಸಿದ ರತಿ-ಕಾಮಣ್ಣರನ್ನು ಟ್ರ್ಯಾಕ್ಟರ್ ಮೇಲೆ ಇಟ್ಟು ಮೆರವಣಿಗೆ ಮಾಡಲಾಯಿತು. ಬೆಳಗ್ಗೆ 10ಕ್ಕೆ ಆರಂಭಗೊಂಡ ಸೋಗಿನ ಬಂಡಿ ಮೆರವಣಿಗೆ ಕಾಳಿದಾಸ ನಗರ, ಚೌಡೇಶ್ವರಿ ನಗರ, ದುರ್ಗಾನಗರ, ಚಾವಡಿ ವೃತ್ತ, ಜಾವಿದ ವೃತ್ತ, ಬಸ್ ನಿಲ್ದಾಣ, ಸರ್ವಜ್ಞ ವೃತ್ತದ ಮೂಲಕ ಹಾದು ವಿದ್ಯಾನಗರದ ಗಣಪತಿ ದೇವಸ್ಥಾನದಿಂದ ಮತ್ತೆ ಮುಖ್ಯ ಬೀದಿಯ ಮೂಲಕ ಪೇಟೆ ಬಸವೇಶ್ವರ ದೇವಸ್ಥಾನ ತಲುಪಿತು. ಮಧ್ಯಾಹ್ನ 3 ಗಂಟೆಗೆ ಕಾಮಣ್ಣನ ಮೂರ್ತಿಯನ್ನು ಹರಿಜನ ಕೇರಿಯಿಂದ ಬೆಂಕಿ ತಂದು ದಹಿಸುವ ಮೂಲಕ ರಂಗಿನಾಟಕ್ಕೆ ತೆರೆ ಬಿದ್ದಿತು.
ಶಾಂತಿಯುತ ಹೋಳಿ ಆಚರಣೆಗೆ ನಿರ್ಣಯ
ಹಾನಗಲ್ಲ: ಪೊಲೀಸ್ ಇಲಾಖೆಯಿಂದ ಒಂದು ಬಾರಿ, ಸಾರ್ವಜನಿಕ ನೇತೃತ್ವದ ಎರಡು ಬಾರಿಯ ಸಭೆಗಳು ಯಾವುದೇ ನಿರ್ಣಯಕ್ಕೆ ಬಾರದೇ ಹೋದ ಹಿನ್ನೆಲೆಯಲ್ಲಿ ಬುಧವಾರ ನಡೆದ ಶಾಂತಿಸಭೆಯಲ್ಲಿ ಮಾ. 23ರಂದು ನಡೆಯುವ ರಂಗಪಂಚಮಿಯನ್ನು ಶಾಂತಿಯುತವಾಗಿ ಆಚರಿಸುವ ನಿರ್ಣಯ ಕೈಗೊಳ್ಳಲಾಯಿತು.
ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅರ್ಥಪೂರ್ಣವಾಗಿ ಹೋಳಿ ಹಬ್ಬ ಆಚರಿಸಲು ಸಮ್ಮತಿಸಿತು. ಶಾಂತಿ ಸಭೆಯಲ್ಲಿ ಹಿರಿಯ ನಾಗರಿಕರಾದ ಹನುಮಂತಪ್ಪ ನಾಗಜ್ಜನವರ, ವೈ.ಎಫ್. ಕಿತ್ತೂರ, ಎಂ.ಬಿ. ಕಲಾಲ, ಎ.ಎಸ್. ಬಳ್ಳಾರಿ, ಬಿ.ಎಸ್. ಅಕ್ಕಿವಳ್ಳಿ, ಮಹೇಶ ಕಾಗಿನೆಲ್ಲಿ, ನಾಗೇಂದ್ರ ತುಮರಿಕೊಪ್ಪ, ಎನ್.ಎಸ್. ಚಿನ್ನಮುಳಗುಂದ, ನಾಗೇಂದ್ರ ಬಂಕಾಪುರ, ಪ್ರಭು ಕಬ್ಬೂರ, ಚೇತನ ಬೆಂಡಿಗೇರಿ, ಪುರಸಭೆ ಸದಸ್ಯ ಫಾರೂಕ್ ಅಹ್ಮದ ಅಕ್ಕಿವಳ್ಳಿ, ಮಾರುತಿ ಹರಿಹರ, ಮನೋಹರ ಬಮ್ಮನಹಳ್ಳಿ, ಮಾರ್ತಾಂಡ ಪಾರಗಾಂಕರ, ಹನುಮಂತಪ್ಪ ಯಳ್ಳೂರ, ರವಿಚಂದ್ರ ಪುರೋಹಿತ, ಪ್ರಶಾಂತ ಮುಚ್ಚಂಡಿ, ಪ್ರವೀಣ ಸುಲಾಖೆ, ಮಾರುತಿ ತಾಂದಳೆ, ಮನೋಜ ಕಲಾಲ ಮುಂತಾದವರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

