ಮತದಾರ ಜಾಗೃತಿಗೆ ಬೀದಿ ನಾಟಕ
ಗದಗ: ಜಿಲ್ಲೆಯ 5 ತಾಲೂಕುಗಳ 40 ಗ್ರಾಮಗಳಲ್ಲಿ ವಾರ್ತಾ ಇಲಾಖೆಯು ಗದಗ ಜಿಲ್ಲಾ ಸ್ವೀಪ್ ಸಮಿತಿ ಸಹಯೋಗದಲ್ಲಿ ಅರ್ಹ ಮತದಾರರು ತಪ್ಪದೇ ಮತ ಚಲಾಯಿಸುವಂತೆ ಪ್ರೇರೇಪಿಸುವ ಬೀದಿ ನಾಟಕಗಳ ಕಾರ್ಯಕ್ರಮ ಏರ್ಪಡಿಸಿದೆ.
ಈ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಗದಗ ಶಹರದ ಟಾಂಗಾ ಕೂಟದಲ್ಲಿ ಏ. 1ರಂದು ಸಂಜೆ 4ಕ್ಕೆ ಉದ್ಘಾಟಿಸುವರು. ನಗರಸಭೆ ಹಾಗೂ ಗದಗ ಟಾಂಗಾ ಕೂಟ ಸ್ವೀಪ್ ಸಮಿತಿಗಳ ಸಹಯೋಗದಲ್ಲಿ ಈ ಸಮಾರಂಭ ಜರುಗಲಿದೆ.
ಏ. 1ರಿಂದ 13ರ ವರೆಗೆ ಈ ಕಾರ್ಯಕ್ರಮ ಜರುಗಲಿದ್ದು, ಮತದಾರ ಜಾಗೃತಿ ಕುರಿತು ಇಲಾಖೆ ತರಬೇತಿ ಪಡೆದ ಕೊತಬಾಳದ ಅರುಣೋದಯ ತಂಡ ಹಾಗೂ ಕೊಣ್ಣೂರಿನ ಜೈ ಕಿಸಾನ್ ಕಲಾ ತಂಡಗಳು ಮತದಾರ ಜಾಗೃತಿ ಕಾರ್ಯಕ್ರಮ ನಡೆಸಲಿವೆ.
ಪ್ರತಿ ದಿನ ಮೂರು ಗ್ರಾಮಗಳಲ್ಲಿ ಬೆಳಗ್ಗೆ 9 ಗಂಟೆಗೆ ಮಧ್ಯಾಹ್ನ 4ಕ್ಕೆ ಹಾಗೂ ಸಂಜೆ 7ಕ್ಕೆ ನಾಟಕ ಕಾರ್ಯಕ್ರಮ ನಡೆಯಲಿವೆ. ಏ. 1ರಂದು ಬೆಟಗೇರಿ, ಗದಗ, ಲಕ್ಕುಂಡಿಯಲ್ಲಿ, 2ರಂದು ಹರ್ಲಾಪುರ, ಬೆಳದಡಿ, ನಾಗಾವಿ, 3ರಂದು ಹರ್ತಿ, ಮುಳಗುಂದ ಹಾಗೂ ಚಿಂಚಲಿ ಗ್ರಾಮಗಳಲ್ಲಿ ಕಾರ್ಯಕ್ರಮ ನಡೆಯಲಿವೆ. ಮುಂಡರಗಿ ತಾಲೂಕಿನಲ್ಲಿ ಏ. 4ರಂದು ಕದಾಂಪುರ, ಡಂಬಳ, ಹಿರೇವಡ್ಡಟ್ಟಿ, 5ರಂದು ಬರದೂರು, ಮುಂಡರಗಿ, ಹೆಸರೂರು ಶಿರಹಟ್ಟಿ ತಾಲೂಕಿನಲ್ಲಿ 6ರಂದು ಶಿರಹಟ್ಟಿ, ಮಾಗಡಿ, ಗೋಜನೂರು, 7ರಂದು ಲಕ್ಷ್ಮೇಶ್ವರದಲ್ಲಿ ಎರಡು ಕಡೆ ಹಾಗೂ ಶಿಗ್ಲಿ 8ರಂದು ಸೂರಣಗಿ, ಬೆಳ್ಳಟ್ಟಿ, ರಣತೂರು ಹಾಗೂ 9ರಂದು ಕಡಕೋಳ, ಕೊಂಚಿಗೇರಿ ಮತ್ತು ಕೋಗನೂರಿನಲ್ಲಿ ಕಾರ್ಯಕ್ರಮ ಜರುಗಲಿವೆ.
ನರಗುಂದ ತಾಲೂಕಿನಲ್ಲಿ ಏ. 10ರಂದು ನರಗುಂದ, ಕೊಣ್ಣೂರು, ಬೆಳಗ್ಗೆ 11ಕ್ಕೆ ಶಿರೋಳ, ಹದ್ಲಿ, ರೋಣ ತಾಲೂಕಿನಲ್ಲಿ ಏ. 11ರಂದು ಮಲ್ಲಾಪುರ, ಬೆಳವಣಕಿ, ಅಸೂಟಿ, 12ರಂದು ಹೊಳೆ ಮಣ್ಣೂರು, ಹೊಳೆ ಆಲೂರು, ರೋಣ ಹಾಗೂ 13ರಂದು ಸೂಡಿ, ಗಜೇಂದ್ರಗಡ ಮತ್ತು ನರೇಗಲ್ಲಗಳಲ್ಲಿ ಬೀದಿ ನಾಟಕ ಕಾರ್ಯಕ್ರಮಗಳು ಜರುಗಲಿವೆ. ಸಂಬಂಧಿತ ನಗರಸಭೆ, ತಾಲೂಕು ಸ್ವೀಪ್ ಸಮಿತಿಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ವಾರ್ತಾ ಇಲಾಖೆ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಈ ತಂಡದೊಂದಿಗೆ ಸಹಕರಿಸಿ ಕಾರ್ಯಕ್ರಮದ ಉದ್ದೇಶ ಈಡೇರಿಕೆ ಅನುಕೂಲ ಕಲ್ಪಿಸಲು ಜಿಪಂ ಸಿಇಓ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ವೀರಣ್ಣ ತುರಮರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

