ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ
ರೋಣ: ಹಾವೇರಿ ಲೋಕಸಭೆ ಮತಕ್ಷೇತ್ರ ವ್ಯಾಪ್ತಿಗೆ ಬರುವ ರೋಣ ವಿಧಾನಸಭೆ ಮತಕ್ಷೇತ್ರದ 258 ಮತಗಟ್ಟೆಗಳ ಅಧ್ಯಕ್ಷ, ಅಧಿಕಾರಿಗಳು ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಮೊದಲ ಹಂತದ ತರಬೇತಿ ಕಾರ್ಯಾಗಾರವು ಪಟ್ಟಣದ ಸ್ವತಂತ್ರ ಪ.ಪೂ ಕಾಲೇಜ್ನ ವಿವಿಧ ಹಾಲ್ಗಳಲ್ಲಿ ಭಾನುವಾರ ನಡೆಯಿತು.
ಕಾರ್ಯಾಗಾರದಲ್ಲಿ 309 ಮತಗಟ್ಟೆ ಅಧ್ಯಕ್ಷ, ಅಧಿಕಾರಿಗಳು ಮತ್ತು 330 ಸಹಾಯಕ ಮತಗಟ್ಟೆ ಅಧಿಕಾರಿಗಳು ಭಾಗವಹಿಸಿ, ಇವಿಎಂ ಮತಯಂತ್ರದ ವಿವಿಧ ಭಾಗಗಳ ಕುರಿತು ತಿಳಿವಳಿಕೆ ಮತ್ತು ಮತದಾನ ವೇಳೆ ಮತದಾರರೊಂದಿಗೆ ಯಾವ ರೀತಿ ವರ್ತಿಸಬೇಕು ಹಾಗೂ ತಮ್ಮ ಚುನಾವಣೆ ಕರ್ತವ್ಯಗಳೇನು? ಅವುಗಳನ್ನು ಯಾವ ರೀತಿ ನಿಭಾಯಿಸಬೇಕು? ಮತದಾನ ಪ್ರಕ್ರಿಯೆಯಲ್ಲಿ ಮತಗಟ್ಟೆ ಅಧಿಕಾರಿಗಳ ಪಾತ್ರವೇನು? ಮತಯಂತ್ರದಲ್ಲಿ ನೂತನವಾಗಿ ಅಳವಡಿಸಲಾದ ಃಕಖಿಆ (ಮೇಲಿನ ಅಬ್ಯರ್ಥಿಗಳು ಯಾರು ಬೇಡ) ಅಂಶದ ಕುರಿತು ಅನುಭವಿಕ ತರಬೇತಿದಾರಿಂದ ಮತಗಟ್ಟೆ ಅಧಿಕಾರಿಗಳು ಅನೇಕ ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ತರಬೇತಿದಾರರಾಗಿ ಎಸ್.ಟಿ. ಬೈರಪ್ಪನವರ, ತಾಲೂಕು ತೋಟಗಾರಿಕೆ ಸಹಾಯಕ ನಿರ್ದೇಶಕ ಎಂ.ಎಂ. ತಾಂಬೋಟಿ, ತಾಲೂಕು ಕೃಷಿ ಸಹಾಯ ನಿರ್ದೇಶಕ ಎಸ್.ಎ. ಸೂಡಿಶೆಟ್ಟರ್, ಜಿಪಂ ಎಇಇ ಕೆ.ಎಲ್. ಕಟ್ಟಮನಿ, ತಾಪಂ ಇಒ ಎಸ್.ಎಂ. ಪಿಡಶೆಟ್ಟಿ, ಉಪನ್ಯಾಸಕ ಬಿ.ಎಸ್. ಮಾನೆದ, ಜಿ.ಬಿ. ಕಲ್ಲನಗೌಡ್ರ, ಬಿ.ಇಒ ಡಿ.ಐ. ಅಸುಂಡಿ ಸೇರಿದಂತೆ ಮುಂತಾದವರು ತರಬೇತಿ ನೀಡಿದರು.
ಈ ವೇಳೆ ರೋಣ ವಿಧಾನಸಭೆ ಮತಕ್ಷೇತ್ರದ ಸಹಾಯಕ ಚುನಾವಣೆ ಅಧಿಕಾರಿ ಷಡಾಕ್ಷರಪ್ಪ, ತಹಸೀಲ್ದಾರ್ ಎ. ಪಂಡಿತ, ಉಪತಹಸೀಲ್ದಾರ್ ಎನ್.ಎಸ್. ಕೂಡಲ, ಚುನಾವಣೆ ಸಿಬ್ಬಂದಿ ಆರ್.ಎನ್. ಜೋಶಿ, ಕಂದಾಯ ನಿರೀಕ್ಷಕ ಕೊಪ್ಪದ ಸೇರಿದಂತೆ ಮುಂತಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

