ಮಕ್ಕಳು ಬಿಡಿಸುವ ಚಿತ್ರ ಅದ್ಭುತ
ಗದಗ: ಮಕ್ಕಳನ್ನು ಅವರ ಪಾಡಿಗೆ ಅವರು ಚಿತ್ರ ಬಿಡಿಸಲು ಬಿಟ್ಟರೆ, ಅಲ್ಲಿ ಮೂಡುವ ಒಂದೊಂದು ಚಿತ್ರಗಳು ಅದ್ಭುತ ಚಿತ್ರಗಳಾಗುತ್ತವೆ ಎಂದು ಗದಗ ಲಯನ್ಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜೆ.ಡಿ. ಉತ್ತರಕರ್ ಹೇಳಿದರು.
ಭಾನುವಾರ ನಗರದ ವಿಜಯ ಕಲಾಮಂದಿರದಲ್ಲಿ ಗದಗ ಭಾವಸಾರ ವ್ಹಿಜನ್ ಇಂಡಿಯಾ ಹಾಗೂ ವಿಜಯ ಕಲಾಮಂದಿರದ ಆಶ್ರಯದಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆಯ ಬಹುಮಾನ ವಿತರಿಸಿ ಮಾತನಾಡಿದರು. ರಾಜೇಶ್ವರಿ ಕಲಾ ಕುಟೀರ ವ್ಯವಸ್ಥಾಪಕ ಗಜಾನನ ವೇರ್ಣೆಕರ, ಎಸ್.ವಿ. ಗುಂಜಾಳ, ನಗರಸಭೆ ಅಧ್ಯಕ್ಷೆ ರುದ್ರವ್ವ ಕೆರಕಲಮಟ್ಟಿ, ಸದಸ್ಯೆ ಶಿವಲೀಲಾ ಅಕ್ಕಿ, ಜಯಶ್ರೀ ಮಹೇಂದ್ರಕರ, ಪ್ರಕಾಶ ಅಕ್ಕಿ, ಭಾವಸಾರ ವ್ಹಿಜನ್ ಇಂಡಿಯಾದ ಅಧ್ಯಕ್ಷ ದತ್ತಾತ್ರೇಯ ವೈಕುಂಠೆ ಪಾಲ್ಗೊಂಡಿದ್ದರು. ರಾಜು ಕಪಟಕರ, ಮಹೇಶ ಸಂದಿಗೋಡ, ಸುನೀಲ ದಾಮೋದರ, ವೀರಣ್ಣ ಬೆಳಮಕರ, ಷಣ್ಮುಖ ಸುಲಾಖೆ ಉಪಸ್ಥಿತರಿದ್ದರು. ಅನುರಾಧಾ ವೈಕುಂಠೆ ಪ್ರಾರ್ಥಿಸಿದರು. ಪಿ.ಬಿ. ಕರದಾನಿ ಸ್ವಾಗತಿಸಿದರು. ಬಸವರಾಜ ನೆಲವೇರಿ ನಿರ್ವಹಿಸಿ, ವಂದಿಸಿದರು.
ದೈಹಿಕ ಸದೃಢತೆಗೆ ಕ್ರೀಡೆ ಅವಶ್ಯ
ನರೇಗಲ್ಲ: ಕ್ರೀಡೆಗಳು ದೈಹಿಕ, ಮಾನಸಿಕ ಸದೃಢತೆಗೆ ಸಹಕಾರಿಯಾಗುತ್ತವೆ ಎಂದು ಕುಮಾರ ಅಮಾತಿಗೌಡ್ರ ಹೇಳಿದರು.
ಅವರು ಈಚೆಗೆ ಸಮೀಪದ ಕೊಚಲಾಪುರ ಗ್ರಾಮದ ಬನಶಂಕರಿ ದೇವಿ ಕ್ರಿಕೆಟ್ ಕ್ಲಬ್ ಆಯೋಜಿಸಿದ್ದ ಸಿಕ್ಸ್ ಎ ಸೈಡ್ ಕ್ರಿಕೆಟ್ ಟೂರ್ನ್ಮೆಂಟ್ನ ಮುಕ್ತಾಯ ಸಮಾರಂಭದ ಅಧ್ಯಕ್ಷತೆ ವಹಿಸಿ ಬಹುಮಾನ ವಿತರಿಸಿ ಮಾತನಾಡಿದರು. ಟಿವಿ, ಮೊಬೈಲ್ ಬಂದಾಗಿನಿಂದ ಯುವ ಜನತೆ ದೇಹ ದಣಿಸುವ ಕಸರತ್ತಿನ ಕಾರ್ಯದತ್ತ ಮುಖ ಮಾಡುತ್ತಿಲ್ಲ. ಕ್ರೀಡೆಯ ರುಚಿ ಇದ್ದವನು ದೈಹಿಕವಾಗಿ ಸದೃಢನಾಗಿರುತ್ತಾನೆ. ಮನೋಬಲ ವೃದ್ಧಿಸುತ್ತದೆ. ಹೀಗಾಗಿ ಯುವಜನತೆ ಮುಂದಿನ ಪೀಳಿಗೆಗೆ ಕ್ರೀಡೆಯ ಬಗೆಗೆ ಉಲ್ಲಾಸ ತುಂಬಿ ಪ್ರೋತ್ಸಾಹಿಸಬೇಕಾದ ಆವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಇಲ್ಲಿ ಆಯೋಜಿಸಿದ್ದ ಪಂದ್ಯಾವಳಿಯಲ್ಲಿ ಸೋಲು-ಗೆಲವು ಮುಖ್ಯವಲ್ಲ. ಸ್ಪರ್ಧಿಸುವುದು ಮುಖ್ಯ ಎಂದರು. ಕೊಚಲಾಪುರ ಗ್ರಾಮದ ಬನಶಂಕರಿದೇವಿ ಕ್ರಿಕೆಟ್ ತಂಡ ಪ್ರಥಮ ಬಹುಮಾನ, ನರೇಗಲ್ಲಿನ ತಂಡ ದ್ವಿತೀಯ ಬಹುಮಾನ ಹಾಗೂ ಇಟಗಿಯ ತಂಡ ತೃತೀಯ ಬಹುಮಾನ ಪಡೆಯಿತು. ಈ ಸಂದರ್ಭದಲ್ಲಿ ಮುತ್ತು ಕಡಗದ, ಸ್ಥಳೀಯ ಮುಖಂಡರು, ಕ್ರೀಡಾಪಟುಗಳು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

