ಗದಗ

ಶಾಸಕರ ಹೇಳಿಕೆ ಖಂಡಿಸಿ ಮನವಿ

Published On :

ಗದಗ: ಶ್ರೀನಿವಾಸಪುರದ ಶಾಸಕರೋರ್ವರು ಕೆಇಬಿ ಇಲಾಖೆಯ ಅಧಿಕಾರಿ ನೌಕರರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ ಗುರುವಾರ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನೌಕರರ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಶ್ರೀನಿವಾಸಪುರದ ಶಾಸಕ ರಮೇಶಕುಮಾ ಈಚೆಗೆ ಕೋಲಾರದ ಜಿಪಂ ಸಭಾಂಗಣದಲ್ಲಿ ನಡೆದ ಬರಪರಿಹಾರ ಸಮೀಕ್ಷಾ ಸಭೆಯಲ್ಲಿ ಬೆಸ್ಕಾಂ ಅಧಿಕಾರಿಗಳನ್ನು ಕಟ್ಟಿಹಾಕಿ, ಮೂರು ದಿನ ಊಟ ಕೊಡಬೇಡಿ, ನಿಲ್ಲಿಸಿ ಶಿರಚ್ಛೇದನ ಮಾಡಿ ಹಾಗೂ ಕೈಕಾಲು ಮುರಿಯಿರಿ ಎಂದು ಮಾತನಾಡಿರುವುದನ್ನು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನೌಕರರ ಸಂಘ ತೀವ್ರವಾಗಿ ಖಂಡಿಸುತ್ತದೆ. ಒಬ್ಬ ಜವಾಬ್ದಾರಿಯುತ ಶಾಸಕರಾಗಿ ಈ ರೀತಿ ವಿದ್ಯುತ್ ಇಲಾಖೆ ನೌಕರರ ಬಗ್ಗೆ ಅವಹೇಳನಕಾರಿ ಮಾತನಾಡಿರುವುದು ಒಬ್ಬ ಶಾಸಕರಿಗೆ ಶೋಭೆ ತರುವಂಥದ್ದಲ್ಲ.
ನಿಗಮದಲ್ಲಿ ಶೇ. 50ರಷ್ಟು ಅಧಿಕಾರಿ, ಸಿಬ್ಬಂದಿ ವರ್ಗದ ಕೊರತೆ ಇದ್ದರೂ, ನಮ್ಮ ವರ್ಗದವರು ಹಗಲು ರಾತ್ರಿ ಎನ್ನದೇ ಗ್ರಾಹಕರಿಗೆ ಉತ್ತಮ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ. ಇದಾವುದನ್ನು ಲೆಕ್ಕಿಸದೇ ಅವರ ನೈತಿಕ ಸ್ಥೈರ್ಯ ಹೆಚ್ಚಿಸಿ, ರಕ್ಷಣೆ ಕೊಡುವ ಬದಲು ಶಾಸಕರು ಈ ರೀತಿಯಾಗಿ ಮಾಧ್ಯಮದ ಮುಂದೆ ಮಾತನಾಡಿರುವುದರಿಂದ ಸಾರ್ವಜನಿಕರಲ್ಲಿ ವ್ಯತಿರಿಕ್ತ ಪರಿಣಾಮ ಉಂಟಾಗಲು ಪ್ರಚೋದನೆ ನೀಡಿದಂತಾಗಿದೆ. ಇದರಿಂದ ನಮ್ಮ ನೌಕರರು, ಅಧಿಕಾರಿಗಳು ಭಯಭೀತರಾಗಿದ್ದಾರೆ.
ಕಾರಣ ಶಾಸಕರು ತಮ್ಮ ಹೇಳಿಕೆಯನ್ನು ಮಾಧ್ಯಮದ ಮೂಲಕ ಹಿಂದಕ್ಕೆ ಪಡೆದು ಬೇಷರತ್ತಾಗಿ ಕ್ಷಮಾಪಣೆ ಕೋರಬೇಕು ಮತ್ತು ತಕ್ಷಣವೇ ರಾಜೀನಾಮೆ ನೀಡಬೇಕೆಂದು ಸ್ಥಳಿಯ ಸಮಿತಿ ಕವಿಪ್ರನಿ ನೌಕರರ ಸಂಘ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಕೇಂದ್ರ ಸಮಿತಿ ಸದಸ್ಯ ಆರ್.ಎಸ್. ಅಣ್ಣಿಗೇರಿ, ಸಿ.ಎಚ್. ಬಾಗಲಕೋಟ, ಆರ್.ವೈ. ಮ್ಯಾಗೇರಿ, ಎಸ್.ಬಿ. ಮಡಿವಾಳರ, ಸಿ.ಜಿ. ಹಳ್ಳಿಕೇರಿ, ಎನ್.ಬಿ. ಹರಪ್ಪನಳ್ಳಿ, ಆರ್.ವೈ. ಕಟ್ಟಿಮನಿ, ಕೆ.ಎಸ್. ಮುಕ್ಕಣ್ಣಯ್ಯ, ಬಿ.ಜಿ. ಶಿವರಾಮ, ಎಂ.ಬಿ. ಗೌರೋಜಿ, ನಾಗರಾಜ ಪೂಜಾರ, ಕೆ.ಡಿ. ಅಕ್ಕಿ, ಎಸ್.ಬಿ. ಕಲ್ಲೂರ, ಎಂ.ಡಿ. ಮುಲ್ಲಾ, ಸಿ.ಬಿ. ಅಂಗಡಿ, ವಿ.ಆರ್. ಸಾವೂಕಾರ, ಬಿ.ಎಂ. ವೆಂಕಟಪೂರ, ಬಿ.ಎನ್. ತಳವಾರ, ಎಸ್.ವೈ. ಕ್ಷತ್ರಿಯ, ಬಿ.ಎಸ್. ಪೂಜಾರ, ಎಸ್.ಎಂ. ಕೊಣ್ಣೂರ, ಎಸ್.ಆರ್. ಜಲರೆಡ್ಡಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.