ಆರೋಗ್ಯ ಕೇಂದ್ರಕ್ಕೆ ವೈದ್ಯ, ಸಿಬ್ಬಂದಿ ಕೊರತೆ
ಗಜೇಂದ್ರಗಡ: ಸಮೀಪದ ಮುಶಿಗೇರಿ ಗ್ರಾಮದಲ್ಲಿ ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆಯಾಗಿ ವರ್ಷವಾದರೂ ವೈದ್ಯರು ಸೇರಿ ಅಗತ್ಯ ಸಿಬ್ಬಂದಿ ಕೊರತೆ ಇದ್ದು, ಈ ಆರೋಗ್ಯ ಕೇಂದ್ರ ಇದ್ದು ಇಲ್ಲದಂತಾಗಿದೆ.
ರಾಜ್ಯ ಆರೋಗ್ಯ ಪದ್ಧತಿ, ಅಭಿವೃದ್ಧಿ ಮತ್ತು ಸುಧಾರಣೆ ಯೋಜನೆಯ ಅಡಿಯಲ್ಲಿ ಸರ್ಕಾರ ರು. 1 ಕೋಟಿ ಅನುದಾನ ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಿಸಲಾಗಿದೆ. ಆದರೆ, ಅದಕ್ಕೆ ಬೇಕಾದ ವೈದ್ಯರು, ಸಿಬ್ಬಂದಿ ಇಲ್ಲದೇ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಚಿಕಿತ್ಸೆ ಮರಿಚಿಕೆಯಾಗಿದೆ.
ಸರ್ಕಾರಿ ಆಸ್ಪತ್ರೆ ನಿಷ್ಪ್ರಯೋಜಕ: ಮುಶಿಗೇರಿ ಸೇರಿದಂತೆ ಸುತ್ತಲಿನ ಗ್ರಾಮಸ್ಥರ ಆರೋಗ್ಯ ಕಾಪಾಡುವ ಉದ್ದೇಶದಿಂದ ನಿರ್ಮಿಸಿರುವ ಈ ಸರ್ಕಾರಿ ಆಸ್ಪತ್ರೆ ನಿಷ್ಪ್ರಯೋಜಕವಾಗಿದೆ. ಸುಸಜ್ಜಿತ ಕಟ್ಟಡ, 6 ಹಾಸಿಗೆ ಕೊಠಡಿ, ಅಗತ್ಯ ಔಷಧಿ ಸಾಮಗ್ರಿಗಳಿವೆ. ನಿತ್ಯ ನೂರಾರು ರೋಗಿಗಳ ಬರುತ್ತಾರೆ. ಆದರೆ, ಕಳೆದೊಂದು ವರ್ಷದಿಂದ ವೈದ್ಯ ಸಿಬ್ಬಂದಿ ಕೊರತೆಯಿಂದಾಗಿ ಎಲ್ಲ ಸೌಕರ್ಯವಿದ್ದೂ ಇಲ್ಲದಂತಾಗಿದೆ.
ಒಬ್ಬರೇ ವೈದ್ಯರು: ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ಸೂಪರ ಸ್ಪೆಷಾಲಿಟಿ ಹೈಟೆಕ್ ತಂತ್ರಜ್ಞಾನ ಅಳವಡಿಕೆ ಇದೆ ಎಂಬುದು ಬಿಟ್ಟರೆ ಯಾವುದೂ ಪ್ರಯೋಜನವಾಗಿಲ್ಲ. ಇಬ್ಬರು ವೈದರು ಬದಲಾಗಿ ಒಬ್ಬರೇ ಇದ್ದು ಅವರು ಸಹ ವಾರದಲ್ಲಿ 2-3 ದಿನ ಮಾತ್ರ ಇಲ್ಲಿ ಸೇವೆ ಸಲ್ಲಿಸುತ್ತಾರೆ.
ಆಸ್ಪತ್ರೆ ಕಚೇರಿ ಅಧೀಕ್ಷಿಕ, ಕಿರಿಯ ಫಾರ್ಮಾಸಿಸ್ಟ, ಕ್ಲರ್ಕ, ದ್ವಿತೀಯ ದರ್ಜೆ ಸಹಾಯಕರು ಜತೆ ಆಸ್ಪತ್ರೆಯಲ್ಲಿ 14 ಮಂದಿ ಸಿಬ್ಬಂದಿ ಇರಬೇಕು. ಆದರೆ, ಇಲ್ಲಿ ಕೇವಲ ಇಬ್ಬರೇ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಾತ್ರಿ ಪಾಳೆಯದಲ್ಲಿ ತುರ್ತು ಚಿಕಿತ್ಸೆ ಸಂದರ್ಭದಲ್ಲಿ ರೋಗಿಗಳ ಪರದಾಟ ಹೇಳುತೀರದು. ಇಬ್ಬರು ಔಷಧಿ ವಿತರಕರು ಇರಬೇಕು. ಆದರೆ, ಇಲ್ಲಿ ಇಲ್ಲ.
ಜಿಲ್ಲಾ ವೈದ್ಯಾಧಿಕಾರಿ ನಿರ್ಲಕ್ಷ್ಯ: ಜಿಲ್ಲಾ ವೈದ್ಯಾಧಿಕಾರಿಗಳು ಮುಶಿಗೇರಿ ಆಸ್ಪತ್ರೆ ಬಗೆಗೆ ನಿರ್ಲಕ್ಷ್ಯ ತೋರಿದ್ದಾರೆ. ಚಿಕಿತ್ಸೆಗೆ ಬರುವ ರೋಗಿಗಳು ಗಂಟೆಗಟ್ಟಲೇ ವೈದ್ಯರಿಗಾಗಿ ಕಾಯಬೇಕಿದೆ. ಏಕೆಂದರೆ ಎಲ್ಲ ಕಾರ್ಯಗಳನ್ನು ಇರುವ ಒಬ್ಬರೇ ವೈದ್ಯರು ನಿರ್ವಹಿಸಿ ಚಿಕಿತ್ಸೆ ನೀಡಬೇಕು. ಆಸ್ಪತ್ರೆಯಲ್ಲಿ 14 ಸಿಬ್ಬಂದಿ ಇರಬೇಕು. ಆದರೆ, ಇಲ್ಲಿ ಕೇವಲ ಇಬ್ಬರೇ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳು ಸರ್ಕಾರ ಇತ್ತ ಒಮ್ಮೆ ಕಣ್ತೆರೆದು ನೋಡಿ ಅಗತ್ಯ ವೈದ್ಯರು, ಸಿಬ್ಬಂದಿ ಕೂಡಲೇ ನೇಮಿಸಿ ಮೂಲ ಸೌಕರ್ಯ ಕಲ್ಪಿಸಿ ರೋಗಿಗಳ ಪರದಾಟಕ್ಕೆ ಮುಕ್ತಿ ಕಲ್ಪಿಸಲು ಮುಂದಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಡಿ.ಜಿ. ಮೊಮಿನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

