ಗದಗ

ಅಕ್ಕಮಹಾದೇವಿ ಸಮಾಜಕ್ಕೆ ಮಾದರಿ

Published On :

ಗದಗ: ವೈರಾಗ್ಯ ನಿಧಿಯಾಗಿ ಮಹಿಳೆಯರೂ ಅಧ್ಯಾತ್ಮಿಕ ಮಾರ್ಗದಲ್ಲಿ ನಡೆದು ಸಾಧನೆ ಮಾಡಿ ದೇವರಲ್ಲಿ ಒಂದಾಗುವ ದಾರಿ ತೋರಿಸಿಕೊಟ್ಟಿರುವ ಅಕ್ಕಮಹಾದೇವಿ ಸ್ತ್ರೀಕುಲಕ್ಕೆ ಮಾದರಿ ಎಂದು ಕದಳಿ ವೇದಿಕೆಯ ಸುಲೋಚನಾ ಐಹೊಳ್ಳಿ ಹೇಳಿದರು.
ಅವರು ಬಸವದಳದಲ್ಲಿ ಗದಗ ತಾಲೂಕಿನ ಶರಣ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಅಕ್ಕಮಹಾದೇವಿ ಜಯಂತಿ ನಿಮಿತ್ತ ಈಚೆಗೆ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಸಜ್ಜನ ಸದ್ಭಕ್ತರ ಸಂಘದಲ್ಲಿ ಅರಿವು-ಆಚಾರ-ಅನುಭಾವವನ್ನು ಪಡೆದುಕೊಂಡು, ಬಸವಾದಿ ಶರಣರ ಸರಳ-ಸಹಜವಾದ ಬದುಕನ್ನು ತಮ್ಮ ವಚನ ಸಾಹಿತ್ಯದ ಮೂಲಕ ಎಲ್ಲ ಮಾನವರಿಗೂ ದಾರಿದೀಪವಾಗುವಂತೆ ರಚಿಸಿದ್ದಾರೆ. ಇಂತಹ ತತ್ವಗಳನ್ನು ಮಹಿಳೆಯರು ಅರಿತು ಆಚರಿಸಿದ್ದೆಯಾದರೆ ಜೀವನದಲ್ಲಿ ಧೈರ್ಯ, ಸಾಹಸ, ನೆಮ್ಮದಿ ಪಡೆಯಬಹುದು ಎಂಬುದಕ್ಕೆ 12ನೇ ಶತಮಾನದಲ್ಲಿ ಆಗಿ ಹೋದ ಬಸವಾದಿ ಶರಣ-ಶರಣೆಯರೇ ಸಾಕ್ಷಿಯಾಗಿದ್ದಾರೆ ಎಂದರು. ಅಧ್ಯಕ್ಷತೆ ವಹಿಸಿದ್ದ ರೇಣುಕಾ ಕರೇಗೌಡ್ರ ಮಾತನಾಡಿ, ಅಕ್ಕಮಹಾದೇವಿ ಜಯಂತಿಯನ್ನು ಹಲವಾರು ಸಂಘ-ಸಂಸ್ಥೆಗಳು ಆಚರಿಸುತ್ತವೆ. ಆದರೆ, ಅಕ್ಕನ ತತ್ವಗಳಿಗೆ ವಿರುದ್ಧವಾದ ಆಚರಣೆ ಕಂಡು ಬರುತ್ತಿರುವುದು ವಿಷಾದನೀಯ ಎಂದರು.
ಜ. ತೋಂಟದಾರ್ಯ ಜಾತ್ರಾ ಸಮಿತಿ ಅಧ್ಯಕ್ಷ ವಿರೂಪಾಕ್ಷಪ್ಪ ಬಳ್ಳೊಳ್ಳಿ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಪ್ರಭುದೇವ ಹಿರೇಮಠ ಹಾಗೂ ತೋಟಗೇರಿ ಮುಂತಾದವರು ಮಾತನಾಡಿದರು. ಎಸ್.ಬಿ. ಸುಂಕದ, ವೀರಭದ್ರಯ್ಯ ಕೆಂಭಾವಿ, ಕೆ.ವಿ. ಗೋಣಿ, ಎಸ್.ಎನ್. ಹಕಾರಿ, ದಾನಯ್ಯ ಗಣಾಚಾರಿ, ಎಂ.ಸಿ. ಐಲಿ, ಕೆ.ಪಿ. ಗುಳಗೌಡ್ರ, ಡಾ. ಬಸವಪ್ರಭು ದೊಡ್ಡಮನಿ, ರೇಣಮ್ಮ ರಾಮನಗೌಡ್ರ, ಈರಮ್ಮ ಮಾನ್ವಿ, ಎನ್.ಎಸ್. ಹಿರೇಸಕ್ರಗೌಡ, ನಾಗಭೂಷಣ ಬಡಿಗಣ್ಣನವರ ಮುಂತಾದವರು ಭಾಗವಹಿಸಿದ್ದರು. ವಿ.ಕೆ. ಕರಿಗೌಡ್ರ ಸ್ವಾಗತಿಸಿದರು. ಪ್ರಕಾಶ ಅಸುಂಡಿ ನಿರೂಪಿಸಿದರು. ಗಂಗಕ್ಕ ಹೂಗಾರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.