ಬಸವಣ್ಣನಿಂದ ಮೌಲ್ಯಗಳಿಗೆ ಬೆಳಕು
ಗದಗ: ಸಮಾನತೆಯ ಹರಿಕಾರ, ವಿಶ್ವಗುರು ಬಸವಣ್ಣನವರ ಸಾಮಾಜಿಕ ಸಮಾನತೆಯ ಚಿಂತನೆಗಳು 12ನೇ ಶತಮಾನದಲ್ಲಿಯೇ ಮಾನವೀಯ ಮೌಲ್ಯಗಳಿಗೆ ಬೆಳಕು ಚೆಲ್ಲಿದ್ದು ಇಂದಿಗೂ ಸಾಮಾಜಿಕ ಸ್ವಸ್ಥ ಕಾಪಾಡುವಲ್ಲಿ ಪ್ರಸ್ತುತವಾಗಿವೆ ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಎಸ್.ಎನ್. ಬಳ್ಳಾರಿ ಹೇಳಿದರು.
ಅವರು ಈಚೆಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಶಾಖೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಜಗಜ್ಯೋತಿ ಬಸವೇಶ್ವರರ ಜಯಂತ್ಯುತ್ಸವದಲ್ಲಿ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕಾರ್ಮಿಕ ನಾಯಕ ಚಿನ್ನಾ ಶೌರಿ ಮಾತನಾಡಿ, ಬಸವಣ್ಣನವರ ಹೋರಾಟ ಮಾನವತೆ ಉಳಿವಿಗಾಗಿ ಮಾಡಿದ ತ್ಯಾಗ ನಮಗೆಲ್ಲ ದಾರಿದೀಪವಿದ್ದಂತೆ ಎಂದರು. ಚಂದ್ರಶೇಖರ ಮೇಲಿನಮನಿ, ಜೈ ಭೀಮ ಅಟೋರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಪರಶುರಾಮ ಪೂಜಾರ, ರಾಮಣ್ಣ ಬಳ್ಳಾರಿ, ಸಂತೋಷ ಬಳ್ಳಾರಿ, ವಿರೂಪಾಕ್ಷಗೌಡ ಮುಳಗುಂದ, ಮಂಜು ಪೂಜಾರ ಮುಂತಾದವರು ಇದ್ದರು. ಪ್ರಾರಂಭದಲ್ಲಿ ದಲಿತ ಕಲಾಮಂಡಳಿ ಸಂಚಾಲಕ ನಾಗರಾಜ ಗುತ್ತಿ ಕ್ರಾಂತಿಗೀತೆ ಹಾಡಿದರು. ಶಹರ ಸಂಚಾಲಕ ಯುವರಾಜ ಬಳ್ಳಾರಿ ಸ್ವಾಗತಿಸಿದರು. ಜಿಲ್ಲಾ ಸಂಚಾಲಕ ವಿನಾಯಕ ಬಳ್ಳಾರಿ ನಿರ್ವಹಿಸಿದರು. ಸಂಚಾಲಕ ಮಾರುತಿ ಗುಡಿಮನಿ ಪ್ರಾಸ್ತಾವಿಕ ಮಾತನಾಡಿದರು. ರವಿ ಹಾದಿಮನಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

