ಗದಗ

ಸಾಮಾಜಿಕ, ಧಾರ್ಮಿಕ ಕೌಶಲ್ಯ ಬೆಳೆಸಿಕೊಳ್ಳಿ: ಡಿ.ಆರ್. ಪಾಟೀಲ

Published On :

ಕನ್ನಡಪ್ರಭ ವಾರ್ತೆ, ಗದಗ, ಮೇ 11
ಇಂದಿನ ಸಂಕೀರ್ಣ ಸ್ಥಿತಿಯಲ್ಲಿ ಸಾಮಾಜಿಕ, ಧಾರ್ಮಿಕ, ಕೌಟುಂಬಿಕ ಮೌಲ್ಯ ಬೆಳೆಸುವ ನಿರಂತರ ಪ್ರಕ್ರಿಯೆ ಮಠಗಳಿಂದ ನಡೆದಿರುವುದು ಶ್ಲಾಘನೀಯ ಎಂದು ಮಾಜಿ ಶಾಸಕ ಡಿ.ಆರ್. ಪಾಟೀಲ ಹೇಳಿದರು.
ನಗರದಲ್ಲಿ ಭಾನುವಾರ ರಜಪೂತ ಸಮಾಜದಿಂದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಹನುಮಂತ, ಗಣಪತಿ, ನವಗ್ರಹಗಳ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾತಿ-ಮತ, ಮೇಲು-ಕೀಳು ಎನ್ನದೆ ಹನುಮಂತ ದೇವರನ್ನು ಸ್ಮರಿಸಿ ನಗರದಲ್ಲಿ ಕೋಮು ಸೌಹಾರ್ದ ವಾತಾವರಣ ನಿರ್ಮಿಸಲು ಇಂಥ ಕಾರ್ಯಕ್ರಮಗಳು ಪ್ರೇರೇಪಿಸುತ್ತವೆ. ಸಮಾಜದಲ್ಲಿರುವ ಭಿನ್ನಮತ ಮರೆತು ಎಲ್ಲರನ್ನೂ ಒಗ್ಗೂಡಿಸಲು ಧಾರ್ಮಿಕ ಕೆಲಸಗಳಿಗೆ ಸ್ಫೂರ್ತಿಯಾಗಲಿವೆ. ಹಿಂದೂ ಸಂಸ್ಕೃತಿಯಲ್ಲಿ ಮಠ-ಮಂದಿರಗಳಿಗೆ ವೀಶೇಷ ಸ್ಥಾನವಿದೆ ಎಂದರು. ಈ ಧಾರ್ಮಿಕ ಕೇಂದ್ರಗಳಿಗೆ ದಾನ, ಶ್ರಮದಾನ ಮಾಡಿದ ಅಮರಸಿಂಗ ತಾಳಿಕೋಟಿ, ಪೀತಾಂಬರಸಿಂಗ ಸಮೋರೆಕರ, ಮುರಳೀಧರ ಮದಿ, ಸಾಹಿತಿ ಆರ್.ಕೆ. ಜಮಾದಾರ ಶೇಡುಸಿಂಗ್ ದೊಡ್ಡಮನಿ, ವಿಜಯಸಿಂಗ್ ಬೆಂಗಳೂರ, ಬಾಲಾಜಿಸಿಂಗ ಹಜೇರಿ, ಪ್ರತಾಪಸಿಂಗ ದಢೇಕರ, ನಂದಾಬಾಯಿ ಪಟಪಟೆ, ರಾಜಾರಾಮಸಿಂಗ ಕಾಟೇವಾಲ, ಜನಕರಾಜಸಿಂಗ ಬ್ಯಾಳಿ, ಪ್ರಲ್ಹಾದಸಿಂಗ ಪುಲಾನೇಕರ, ಅಂದಾನೆಪ್ಪ ಪಟ್ಟಣಶೆಟ್ಟಿ, ಸಂಶಿಮಠ ಬಣ್ಣದ ವ್ಯಾಪಾರಿಗಳು, ಆರ್.ಎನ್. ಪಾಂಡ್ರೆ, ಕಿಶೋರಸಿಂಗ ದೊಡ್ಡಮನಿ, ಕೃಷ್ಣಾ ಬೇಕರಿ, ದೇವಿಸಿಂಗ ಬ್ಯಾಳಿ, ಅರ್ಜುನಸಿಂಗ ಪುಲಾನೇಕರ, ವಿಜಯ ಕಬಾಡಿ, ಆನಂದಸಿಂಗ ದೊಡ್ಡಮನಿ, ಗನ್ನುಸಿಂಗ್ ತಾಳಿಕೋಟಿ, ರಾಧಾಬಾಯಿ ಫಗೆ, ಎಸ್.ಆರ್. ಮಾಂಡ್ರೆ ಮುಂತಾದವರು ಶ್ರೀಗಳು, ಸಮಾಜದ ಗಣ್ಯರು ಗೌರವಿಸಿ ಸತ್ಕರಿಸಿದರು.
ಗಣೇಶಸಿಂಗ್ ಬ್ಯಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂದೀವೇರಿ ಕಪೋತಗಿರಿ ಮಠದ ಶಿವಕುಮಾರ ಸ್ವಾಮೀಜಿ, ನರಸಾಪುರ ಶಾಖಾಮಠದ ಗುರು ವೀರೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಜಪೂತ ಸಮಾಜದ ಅಧ್ಯಕ್ಷ ಶಂಕರಸಿಂಗ ಬ್ಯಾಳಿ ಸ್ವಾಗತಿಸಿದರು. ಶಂಕರಸಿಂಗ ರಜಪೂತ ಸನ್ಮಾನಿತರನ್ನು ಪರಿಚಯಿಸಿದರು. ಟಿ.ಜಿ. ಕಾಟೀವಾಲ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.