ಖಾಸಗಿ ಕಂಪನಿಯಿಂದ ಜಮೀನಿಗೆ ಹಾನಿ
ನರಗುಂದ: ತಾಲೂಕಿನ ಹುಬ್ಬಳ್ಳಿ-ಸೋಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಹುಬ್ಬಳ್ಳಿಯಿಂದ ಬಿಜಾಪುರವರೆಗೆ ಖಾಸಗಿ ಕಂಪನಿಯೊಂದು ದೂರವಾಣಿ ಸಂಪರ್ಕ ಕಲ್ಪಿಸುವ ದೃಷ್ಟಿಯಿಂದ ಹೆದ್ದಾರಿ ಪಕ್ಕದಲ್ಲಿರುವ ರೈತರ ಜಮೀನುಗಳಲ್ಲಿ ಜೆಸಿಬಿ ಯಂತ್ರಗಳ ಮೂಲಕ ಭೂಮಿ ಅಗೆದು ಕೇಬಲ್‌ಗಳನ್ನು ಅಳವಡಿಸುತ್ತಿದೆ. ವಿಚಿತ್ರವೆಂದರೆ ಆ ಹೊಲದ ಮಾಲೀಕರೇ ಹೋಗಿ ಅವರನ್ನು ಪ್ರಶ್ನಿಸಿದರೆ ಇದನ್ನು ಕೇಳಲು ನಿವ್ಯಾರು? ನಮಗೆ ಸರ್ಕಾರ ಅನುಮತಿ ನೀಡಿದೆ ಎನ್ನುವ ಮೂಲಕ ಧಮಕಿ ಮಾತು ರೈತರಿಗೆ ಹೇಳುತ್ತಿರುವುದು ಹಲವು ಸಂಶಯಕ್ಕೆ ಕಾರಣವಾಗಿದೆ.
ರೈತರಿಗೆ ತೊಂದರೆ: ಕಾಮಗಾರಿ ಕಳೆದೊಂದು ವರ್ಷದಿಂದ ಚಾಲನೆಯಲ್ಲಿದೆ. ಕಳೆದ ಬಾರಿ ಮುಂಗಾರು ಹಂಗಾಮಿನಲ್ಲಿಯೇ ಕಾಮಗಾರಿ ಪ್ರಾರಂಭಿಸಿದ್ದು, ಇಂದಿಗೂ ಮುಗಿಸುತ್ತಿಲ್ಲ. ಅಂದು ರೈತರು ಸಂಬಂಧಪಟ್ಟವರನ್ನು ಪ್ರಶ್ನಿಸಿದ ವೇಳೆ ಇದನ್ನು ಕೇಳುವ ಹಕ್ಕು ನಿಮಗಿಲ್ಲ, ಇದು ಸರ್ಕಾರದಿಂದ ಶಿಫಾರಸ್ಸಾಗಿದೆ ಎಂದು ಹೇಳಿದ್ದರಿಂದ ಹಲವಾರು ರೈತರು ಸುಮ್ಮನ್ನಾದರು. ಮತ್ತೆ ಕೆಲವರು ಈಗ ಹೊಲದಲ್ಲಿ ಬೆಳೆಗಳಿಗೆ, ಬೆಳೆ ಕಟಾವು ಮಾಡಿದ ನಂತರ ಹಾಕುವುದು ಸೂಕ್ತ ಎಂದು ಕಂಪನಿಗೆ ತಿಳಿಸಿದರು.
ನಿಂತ ಕಾಮಗಾರಿ, ಉಳುಮೆ ಸ್ಥಗಿತ: ಅಂದು ಕಂಪನಿ ಅಧಿಕಾರಿಗಳು ಇದು ರಾಷ್ಟ್ರೀಯ ಮಟ್ಟದ ಯೋಜನೆ ಅದಕ್ಕೆ ತಮ್ಮ ಜಮೀನಗಳಲ್ಲಿರುವ ಬೆಳೆಗಳು ನಷ್ಟವಾದರೆ ಪರಿಹಾರ ಕೊಡುತ್ತೇವೆಂದು ಹೇಳಿ ಬೆಳೆಯ ನಷ್ಟದ ವಿವರ ತೆಗೆದುಕೊಂಡು ಅದರಲ್ಲಿ ಸ್ವಲ್ಪ ಪರಿಹಾರ ನೀಡಿದರು. ಉಳಿದದ್ದನ್ನು ನಂತರ ಕೊಡುತ್ತೇವೆ ಎಂದು ಹೇಳಿ ತಮ್ಮ ಕೆಲಸ ಅರ್ಧಕ್ಕೆ ನಿಲ್ಲಿಸಿ ಹೋದವರು ಇಂದಿಗೂ ರೈತರ ಹೊಲಗಳತ್ತ ಮುಖ ಮಾಡಿಲ್ಲ. ಇದು ತಾಲೂಕಿನ ರೈತರಿಗೆ ಕಂಪನಿ ಮಾಡುತ್ತಿರುವ ಮೋಸ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಉಳಮೆಗೆ ತೊಂದರೆ: ರೈತರ ಜಮೀನುಗಳಲ್ಲಿ ಕೆಲವು ಕಡೆ ಪೈಪ್‌ಗಳ ಬೃಹತ್ ಬಂಡಲ್‌ಗಳನ್ನು ಹಾಕಿದ್ದಾರೆ. ಕೆಲವು ಕಡೆ ಜೆಸಿಬಿಗಳ ಮೂಲಕ ಗುಂಡಿ ತೆಗೆದು ಬಿಟ್ಟಿದ್ದಾರೆ. ಮತ್ತೆ ಕೆಲವೆಡೆ ಪ್ಲಾಸ್ಟಿಕ್ ಪೈಪ್‌ಗಳನ್ನು ಅಳವಡಿಸಿ, ಬಿಟ್ಟಿರುವುದರಿಂದ ರೈತರು ಆ ಸ್ಥಳ ಬಿಟ್ಟು ಉಳುಮೆ ಮಾಡುವಂತಾಗಿದೆ. ಕಾಮಗಾರಿ ಸ್ಥಳದಲ್ಲಿ ಕಸ ಬಿದ್ದು, ಕಂಠಿ ಬೆಳೆಯುವಂತಾಗಿದ್ದು, ರೈತರು ಜಮೀನು ಉಳುಮೆಗೆ ಸಮಸ್ಯೆ ಎದುರಿಸುವಂತಾಗಿದೆ. ಈ ಸಮಸ್ಯೆ ಮುಖ್ಯವಾಗಿ ತಾಲೂಕಿನ ಕಲಕೇರಿ, ನರಗುಂದ, ಭೈರನಹಟ್ಟಿ, ಕೊಣ್ಣೂರು ಗ್ರಾಮಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ.
ಎನ್.ಜಿ. ತೆಗ್ಗಿನಮನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

