ಲಿಖಿತ ಭರವಸೆ: ಧರಣಿ ಹಿಂತೆಗೆತ
ಗಜೇಂದ್ರಗಡ: ಸ್ಥಳೀಯ ಪುರಸಭೆ ಆಡಳಿತ ಅಧಿಕಾರ ದುರುಪಯೋಗಪಡಿಸಿಕೊಂಡು ಸರ್ಕಾರಿ ಸ್ವತ್ತನ್ನು ತಮಗೆ ಬೇಕಾದವರ ಹೆಸರಿಗೆ ನೋಂದಾಯಿಸಿ ಜತೆಗೆ ಸಾರ್ವಜನಿಕ ತೆರಿಗೆ ಹಣ ದುರ್ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ ವಿಪಕ್ಷ ನಾಯಕ ಶಿವರಾಜ ಘೋರ್ಪಡೆ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಕೈಗೊಂಡ ಧರಣಿ ಸತ್ಯಾಗ್ರಹಕ್ಕೆ ಕೊನೆಗೂ ಮಣಿದ ಪುರಸಭೆ ಅಧಿಕಾರಿಗಳು ನೀಡಿದ ಲಿಖಿತ ಭರವಸೆ ಅನ್ವಯ ಧರಣಿ ನಿರತರು ಸತ್ಯಾಗ್ರಹ ಹಿಂಪಡೆದರು.
ಸಮಸ್ಯೆಗಳ ಪರಿಹಾರಕ್ಕೆ ಚಿಂತಿಸದೆ ತಮಗೆ ಬೇಕಾದವರಿಗೆ ಲಕ್ಷಾಂತರ ಹಣ, ಮನಸೊ ಇಚ್ಚೆ ದಾನ ಮಾಡುತ್ತಿರುವ ಪುರಸಭೆ ಆಡಳಿತಕ್ಕೆ ಜನತೆ ಛೀಮಾರಿ ಹಾಕುತ್ತಿದ್ದಾರೆ.
ಕೂಡಲೇ ಜಿಲ್ಲಾಡಳಿತ ಎಚ್ಚೆತ್ತು ಪುರಸಭೆಯಲ್ಲಿ ನಡೆದಿರುವ ಎಲ್ಲ ಹಗರಣಗಳನ್ನು ಬಯಲಿಗೆಳೆಯುತ್ತಿವೆ. ಈಗಾಗಲೇ ಪುರಸಭೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಕುರಿತು ತನಿಖೆ ಕೈಗೊಳ್ಳುವಂತೆ ಜಿಲ್ಲಾಡಳಿತ, ಲೋಕಾಯುಕ್ತ ಹಾಗೂ ಸಾರ್ವಜನಿಕ ಹಿತಾಸಕ್ತಿ ಅನ್ವಯ ಹೈಕೋರ್ಟ್ನಲ್ಲಿ ಆಧಾರ ಸಮೇತ ದೂರು ಸಲ್ಲಿಸಲಾಗಿದೆ ಎಂದರು.
ಧರಣಿ ನಿರತರ ಸ್ಥಳಕ್ಕೆ ಪ್ರಭಾರಿ ಮುಖ್ಯಾಧಿಕಾರಿ ಬಿ.ಟಿ. ಬಂಡಿವಡ್ಡರ ಆಗಮಿಸಿ ಪುರಸಭೆ ವ್ಯಾಪ್ತಿಯ 21ನೇ ವಾರ್ಡ್ನ ಚೌಕಿಮಠ ರಸ್ತೆ ಬಳಿಯ ಪುರಸಭೆ ಜಾಗೆಯಲ್ಲಿ ಯಲ್ಲಮ್ಮ ಅರಳಿಗಿಡದ ಎಂಬವರು ಟಿಎಂಸಿ ನಂ. 575 ಎ ಎಂದು ಕೊಟ್ಟಿ ದಾಖಲೆ ಸೃಷ್ಟಿಸಿ ಅನಧಿಕೃತವಾಗಿ ಕಟ್ಟಡ ಕಾಮಗಾರಿ ಕುರಿತು ಅಧಿಕೃತ ಮೂಲ ಕಾಗದ ಪತ್ರಗಳನ್ನು ಹಾಜರುಪಡಿಸಲು ತಿಳಿಸಲಾಗಿದ್ದು, ಇದುವರೆಗೂ ಅವರಿಂದ ಸ್ಪಷ್ಟ ಮಾಹಿತಿ ದೊರೆತಿಲ್ಲ. ಈ ಹಿನ್ನಲೆಯಲ್ಲಿ ಸದರಿ ಆಸ್ತಿಯೂ ಪುರಸಭೆ ಕರ ರಜಿಸ್ಟರಿನಲ್ಲಿ ನಮೂದಾದ ಬಗ್ಗೆ ಯಾವುದೇ ಆದೇಶಗಳು ಕಂಡು ಬಂದಿರುವುದಿಲ್ಲ. ಹೀಗಾಗಿ ಪುರಸಭೆ ಕಾಯ್ದೆ 1964 ಕಲಂ 98 ಹಾಗೂ 187 ಮತ್ತು 188, 189ರ ನಿಯಮಾನೂಸಾರ ಸದರಿ ಆಸ್ತಿ ನಂ 575 ಎ ರದ್ದುಪಡಿಸಲಾಗಿದೆ ಎಂದು ಲಿಖಿತ ಪತ್ರ ನೀಡಿದ ಬಳಿಕ ಧರಣಿ ಹಿಂಪಡೆದರು.
ಸದಸ್ಯರಾದ ಸುಜಾತಾ ಚುಂಚಾ, ಶಾರದಾ ರಾಠೋಡ, ಶಾರಮ್ಮ ತಳವಾರ, ಚಂಬಣ್ಣ ಚವಡಿ, ಎಸ್.ಎಂ ಆರಗಿದ್ದಿ, ಪ್ರಶಾಂತ ರಾಠೋಡ್, ಎಂ.ಎಚ್. ಕೋಲಕಾರ, ಶ್ರೀಧರ ಗಂಜಿಗೌಡರ, ಹಸನ್ ತಟಗಾರ, ಉಮೇಶ ರಾಠೋಡ, ಕೊಟ್ರೇಶ ಚಿಲಕಾ, ರವಿ ಗಡೇದವರ, ದಾದೇಸಾಬ ಹಣಗಿ, ಎಫ್.ಎಸ್. ಕರಿದುರಗನ್ನವರ, ಷಣ್ಮುಕಪ್ಪ ನಿಡಗುಂದಿ, ಶಶಿಧರ ಹೂಗಾರ, ಮೋಹನಸಾ ರಾಯಬಾಗಿ, ವೆಂಕಟೇಶ ಮುದಗಲ್, ಮುರ್ತುಜಾ ಡಾಲಾಯತ್, ಭೀಮಣ್ಣ ತಳವಾರ, ಸಿದ್ದಪ್ಪ ಚಲವಾದಿ ಪಾಲ್ಗೊಂಡಿದ್ದರು.
ವರ್ಷದಿಂದ ಪುರಸಭೆ ಚುಕ್ಕಾಣಿ ಹಿಡಿದ ಬಿಜೆಪಿ, ಆಡಳಿತ ಸರ್ಕಾರ ನೀಡಿದ ಅನುದಾನ ಬೇಕಾಬಿಟ್ಟಿಯಾಗಿ ಖರ್ಚು ಮಾಡಿ ಪಟ್ಟಣದ ಅಭಿವೃದ್ಧಿ ಬದಲಿಗೆ ಭ್ರಷ್ಟಾಚಾರದಲ್ಲೆ ಮಿಂದೆದ್ದ ಪರಿಣಾಮ ಪಟ್ಟಣದ 23 ವಾರ್ಡ್ಗಳಲ್ಲಿ ಮೂಲ ಸಮಸ್ಯೆಗಳು ಜನರನ್ನು ಕಾಡುತ್ತಿವೆ.
- ಶಿವರಾಜ ಘೋರ್ಪಡೆ, ಪುರಸಭೆ ವಿಪಕ್ಷ ನಾಯಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

