ಗದಗ

ಆಶೋತ್ತರಗಳಿಗೆ ಸ್ಪಂದಿಸಿ ಭಾರತದ ಚಿತ್ರಣ ಬದಲಿಸಲಿದ್ದಾರೆ ಮೋದಿ

Published On :

ಮುಂಡರಗಿ: ಭಾರತೀಯರ ಭರವಸೆಯ ತಾರೆ ನರೇಂದ್ರ ದಾಮೋದರ ಮೋದಿ 15ನೇ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಕ್ಕಾಗಿ ಸೋಮವಾರ ಸಂಜೆ ಬಿಜೆಪಿ ಕಾರ್ಯಕರ್ತರು ಮುಂಡರಗಿ ಪಟ್ಟಣದ ಕೊಪ್ಪಳ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಬಿಜೆಪಿ ಮುಖಂಡ ಕರಬಸಪ್ಪ ಹಂಚಿನಾಳ, ಜಿಪಂ ಸದಸ್ಯ ಹೇಮಗಿರೀಶ ಹಾವಿನಾಳ ಮಾತನಾಡಿ, ಮುಂಬರುವ ದಿನಗಳಲ್ಲಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಜನತೆಯ ಆಶೋತ್ತರಗಳಿಗೆ ಸ್ಪಂದಿಸುವ ಮೂಲಕ ಭಾರತದ ಚಿತ್ರಣ ಬದಲಿಸುವ ಮೂಲಕ ಉತ್ತಮ ಆಡಳಿತ ನೀಡಲಿದೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಅಧಿಕಾರ ನಡೆಸಲು ಎಲ್ಲರೂ ಕೈಜೋಡಿಸೋಣ ಎಂದರು.
ಕೆ.ವಿ. ಹಂಚಿನಾಳ, ದೇವಪ್ಪ ಕಂಬಳಿ, ರಜನೀಕಾಂತ ದೇಸಾಯಿ, ಎಸ್.ವಿ. ಪಾಟೀಲ, ಬಸವರಾಜ ಸಸಿಮಠ, ಶಿವನಗೌಡ ಗೌಡ್ರ, ಮಂಜುನಾಥ ಇಟಗಿ, ಪ್ರಭು ಅಬ್ಬೀಗೇರಿ, ಶ್ರೀನಿವಾಸ ಅಬ್ಬೀಗೇರಿ, ಮೋಹನ್ ದೇಸಾಯಿ, ಶಂಕರಗೌಡ ಪಾಟೀಲ, ಪರುಷುರಾಮ ಕರಡಿಕೊಳ್ಳ, ಸುರೇಶ ಮಾಳೆಕೊಪ್ಪ, ಅಂದಪ್ಪ ಉಳ್ಳಾಗಡ್ಡಿ, ಶಿವು ನಾಡಗೌಡ್ರ, ಮಹಾದೇವಪ್ಪ ಬಳ್ಳಾರಿ, ಚಿನ್ನಪ್ಪ ವಡ್ಡಟ್ಟಿ, ಬಿ.ಕೆ. ಪಾಟೀಲ, ವಿ.ಎಸ್. ಘಟ್ಟಿ, ಮಂಜುನಾಥ ಕಾಗನೂರ, ಮಂಜುನಾಥ ಮುಧೋಳ, ಮೌನೇಶ ಬಡಿಗೇರ, ರುದ್ರಪ್ಪ ಕೊರ್ಲಗಟ್ಟಿ, ರವಿಗೌಡ ಪಾಟೀಲ, ಶಿವಪ್ಪ ಚಿಕ್ಕಣ್ಣವರ ಪಾಲ್ಗೊಂಡಿದ್ದರು.
ಪಟ್ಟಣದ ಹೊಸ ಬಸ್ ನಿಲ್ದಾಣದ ಹತ್ತಿರ ಕಬಲಾಸಾಬ್ ಆಲೂರ ಹಾಗೂ ಉಮೇಶ ಕುಂಬಾರ ಮತ್ತು ಇತರರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಇಲ್ಲಿನ ಅಂಬಾಭವಾನಿ ದೇವಸ್ಥಾನದಲ್ಲಿ ನಮೋ ಬ್ರಿಗೇಡ್ ಕಾರ್ಯಕರ್ತರು ಪ್ರಮಾಣ ವಚನದ ಚಿತ್ರಣವನ್ನು ದೊಡ್ಡ ಸ್ಕ್ರೀನ್ ಮೂಲಕ ವೀಕ್ಷಿಸಲು ಅವಕಾಶ ಒದಗಿಸಲಾಗಿತ್ತು.
ಮೋದಿ ಪ್ರಧಾನಿ: ಸಂಭ್ರಮ
ಗದಗ: ಸೋಮವಾರ ನರೇಂದ್ರ ಮೋದಿ ದೇಶದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ, ಗದಗ ನಗರದ ಟಾಂಗಾ ಕೂಟದಲ್ಲಿ ಸೇರಿದ್ದ ನೂರಾರು ಸಂಖ್ಯೆ ಬಿಜೆಪಿ ಕಾರ್ಯಕರ್ತರು ಪರಸ್ಪರ ಸಿಹಿ ಹಂಚಿ, ವಿಜಯೋತ್ಸವ ಆಚರಿಸಿದರು. ಅವರ ಪ್ರಮಾಣ ವಚನ ಪೂರ್ಣಗೊಳ್ಳುತ್ತಿದ್ದಂತೆ ಕಿವಿಗಡಚಿಡುವಂತೆ ಪಟಾಕಿ ಸಿಡಿಲಾಯಿತು. ಆನಂತರ ಮೋದಿ ಕುರಿತ ಹಾಡುಗಳಿಗೆ ಕಾರ್ಯಕರ್ತರು ಕುಣಿದು ಕುಪ್ಪಳಿಸಿದರು. ಕೆಲವರು ಬಣ್ಣ ಎರೆಚಿ ಸಂಭ್ರಮಿಸಿದರು. ಸಂಜೆ 5ಕ್ಕೆ ಬಿಜೆಪಿ ಕಾರ್ಯಕರ್ತರು ಜಮಾಯಿಸಲು ಆರಂಭಿಸಿ ಸಾರ್ವಜನಿಕರ ಅನುಕೂಲಕ್ಕಾಗಿ ಪ್ರಮಾಣ ವಚನ ಸಮಾರಂಭ ವೀಕ್ಷಿಸಲು ಬೃಹತ್ ಪರದೆ ವ್ಯವಸ್ಥೆ ಮಾಡಿತ್ತು. ಸಾರ್ವಜನಿಕರು ಮಾರ್ಗ ಮಧ್ಯ ನಿಂತು ನರೇಂದ್ರ ಮೋದಿ ಪ್ರಮಾಣ ವಚನ ಸಮಾರಂಭ ವಿಕ್ಷೀಸಿ ಸಂತಸಪಟ್ಟರು. ನಗರಾದ್ಯಂತ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ಬಿಜೆಪಿ ಮುಖಂಡ ಶ್ರೀಕೃಷ್ಣಾ ಹೊಂಬಾಳಿ, ಕಾಂತಿಲಾಲ ಬನ್ಸಾಲಿ, ಮಾಧವ ಗಣಾಚಾರಿ, ಛಗನ್ ರಾಜಪುರೊಹಿತ, ಎಂ.ಎಂ. ಹಿರೇಮಠ, ಶ್ರೀಪತಿ ಉಡುಪಿ, ಎಂ.ಎಸ್. ಕರಿಗೌಡ್ರ, ಈಶಣ್ಣ ಮುನವಳ್ಳಿ, ಸಿದ್ದು ಪಲ್ಲೇದ, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.
ರೋಣದಲ್ಲಿ ವಿಜಯೋತ್ಸವ
ರೋಣ: 15ನೇ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ದೆಹಲಿಯಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಿದಂತೆ ಪಟ್ಟಣದಲ್ಲಿ ಸೋಮವಾರ ಸಂಜೆ ಬಿಜೆಪಿ ಶಹರ, ತಾಲೂಕು ಘಟಕದ ಕಾರ್ಯಕರ್ತರು, ಮತ್ತು ನರೇಂದ್ರ ಮೋದಿ ಅಭಿಮಾನಿಗಳ ಬಳಗ ವತಿಯಿಂದ ಬೃಹತ್ ರ್ಯಾಲಿ ನಡೆಸಿ ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ವಿಜಯೋತ್ಸವದ ರ್ಯಾಲಿ ಪಟ್ಟಣ ಸಿದ್ಧಾರೂಢ ಮಠದಿಂದ ಪ್ರಾರಂಭವಾಗಿ ಸೂಡಿ ವೃತ್ತ, ಮುಲ್ಲಾನ ಬಾವಿ ವೃತ್ತ, ಬಸ್ ನಿಲ್ದಾಣ ಮತ್ತು ಪೋತದಾರ ಅಜ್ಜನ ಕಟ್ಟೆಯಲ್ಲಿ ಮಾನವ ಸರಪಳಿ ನಿರ್ಮಿಸಿ ಪಟಾಕಿ ಸಿಡಿಸಿ, ಜಯಘೋಷ ಮಾಡಿ ಸಂಭ್ರಮಿಸಿದರು.
ರ್ಯಾಲಿ ಉದ್ದೇಶಿಸಿ ಬಿಜೆಪಿ ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಅಶೋಕ ನವಲಗುಂದ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಷ್ಟು ಖುಷಿ ಇಂದು ನಮಗಾಗಿದೆ. ಇಂದಿನಿಂದ ಹೊಸ ಯುಗ ಪ್ರಾರಂಭವಾಗಿದ್ದು, ಹಿಂದೆಂದೂ ಕಾಣದ ಅಭಿವೃದ್ಧಿ, ನವೀನ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ನರೇಂದ್ರ ಮೋದಿ ಅಚಲ ನಿಲುವು ಹೊಂದಿದ್ದು, ಆ ನಿಟ್ಟಿನಲ್ಲಿ ಶ್ರಮಿಸಲಿದ್ದಾರೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು. ವಿಜಯೋತ್ಸವದಲ್ಲಿ ಮುಖಂಡರಾದ ಗುರುರಾಜ ಕುಲಕರ್ಣಿ, ಮುತ್ತಣ್ಣ ಲಿಂಗನಗೌಡ್ರ, ಪುರಸಭೆ ವಿರೋಧ ಪಕ್ಷದ ನಾಯಕ ಬಸನಗೌಡ ಪಾಟೀಲ್, ಸದಸ್ಯೆ ಶರಣವ್ವ ಜಿಡ್ಡಿಬಾಗಿಲು, ನಾಗರಾಜ ಪಲ್ಲೇದ, ಅರ್ಜುನ ಕೊಪ್ಪಳ, ವೀರೇಶ ದೊಡ್ಡಣ್ಣವರ, ಶಬ್ಬೀರ ಖಾಜಿ, ಶ್ರೀಧರ ಧಲಬಂಜನ, ಶಿವಾನಂದ ಜಿಡ್ಡಿಬಾಗಿಲು, ಕಳಕಪ್ಪ ಸಂತೋಜಿ, ಮೈಲಾರಪ್ಪ ದೇಶಣ್ಣವರ, ಬಸವರಾಜ ಕೋಟಗಿ, ಆರ್.ಎಸ್. ಮುಗಳಿ, ಮಂಜು ವಗತಿ, ರಮೇಶ ತಳವಾರ, ಬಸನಗೌಡ ರಂಗನಗೌಡ್ರ, ಭರಮಗೌಡ ಲಿಂಗನಗೌಡ್ರ ಭಾಗವಹಿಸಿದ್ದರು.
ಎಲ್‌ಇಡಿಯಲ್ಲಿ ವೀಕ್ಷಣೆ
ಗಜೇಂದ್ರಗಡ: ನರೇಂದ್ರ ಮೋದಿ ದೆಹಲಿಯ ರಾಷ್ಟ್ರಪತಿ ಭವನದೆದುರು ದೇಶದ 14ನೇ ಪ್ರಧಾನಿಯಾಗಿ ಸೋಮವಾರ ಸಂಜೆ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಪಟ್ಟಣದ ಕಾಲಕಾಲೇಶ್ವರ ವೃತ್ತದ ಬಳಿ ಎಲ್‌ಇಡಿ ಸ್ಕ್ರಿನ್‌ನಲ್ಲಿ ಮೋದಿ ಪ್ರಧಾನಮಂತ್ರಿ ಪದಗ್ರಹಣ ಸಾಮಾರಂಭದ ನೇರ ಪ್ರಸಾರ ಕಾರ್ಯಕ್ರಮವನ್ನು ಸಾರ್ವಜನಿಕರು ವೀಕ್ಷಿಸಲು ಅನುವು ಮಾಡುವ ಜತೆಗೆ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಬಿಜೆಪಿ ನಗರ ಘಟಕ ಅಧ್ಯಕ್ಷ ಭಾಸ್ಕರ ರಾಯಬಾಗಿ, ಪುರಸಭೆ ಅಧ್ಯಕ್ಷೆ ಕವಿತಾ ಜಾಲಿಹಾಳ, ಉಪಾಧ್ಯಕ್ಷೆ ಅಕ್ಕಮ್ಮ ಜಾನಾಯಿ, ಸದಸ್ಯರಾದ ಸಿದ್ದಪ್ಪ ಬಂಡಿ, ವಿಜಯಲಕ್ಷ್ಮೀ ಚೆಟ್ಟರ್, ಅಶೋಕ ವನ್ನಾಲ, ಬಿ.ಎಂ. ಸಜ್ಜನ, ಅಮರೇಶ ಅರಳಿ, ರವಿ ಕಲಾಲ, ಚಂದ್ರಶೇಖರ್ ಚಳಗೇರಿ, ಮಂಜುನಾಥ ಬಡಿಗೇರ, ಮುತ್ತಣ್ಣ ಚಟ್ಟೇರ, ರಾಜೇಂದ್ರ ಘೋರ್ಪಡೆ, ರಾಜು ಕೋಟಗಿ, ಚನ್ನು ಸಮಗಂಡಿ, ಮರಿಗೌಡರ್ ಗೌಡರ, ಶಂಕರ ಇಂಜನಿ ದೀಪಾ ಗೋಯಲ್ ಪಾಲ್ಗೊಂಡಿದ್ದರು.
ನಮೋ ಪ್ರಮಾಣ: ಸಂಭ್ರಮ
ಲಕ್ಷ್ಮೇಶ್ವರ: ನರೇಂದ್ರ ಮೋದಿ ದೇಶದ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಂತೆ ಪಟ್ಟಣದ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ಆಚರಿಸಿದರು.
ಬಿಜೆಪಿ ಮುಖಂಡ ಚಂಬಣ್ಣ ಬಾಳಿಕಾಯಿ ಮಾತನಾಡಿ, ಬಿಜೆಪಿ ಕಾರ್ಯಕರ್ತರಾದ ನಮಗೆ ಈ ದಿನ ಎಂದೂ ಮರೆಯದ ದಿನವಾಗಿದೆ ಎಂದರು.
ಪುರಸಭೆ ಉಪಾಧ್ಯಕ್ಷ ಎಂ.ಆರ್. ಪಾಟೀಲ, ಬಿಜೆಪಿ ತಾಲೂಕು ಅಧ್ಯಕ್ಷ ನಾಗರಾಜ ಕುಲಕರ್ಣಿ, ಸೋಮನಗೌಡ ಪಾಟೀಲ, ಕ್ಷೇತ್ರಪಾಲ ಬರಿಗಾಲಿ, ಶಂಕ್ರಣ್ಣ ಕಾಳೆ, ಪುರಸಭೆ ಬಿಜೆಪಿ ಸದಸ್ಯರಾದ ರಾಮಣ್ಣ ರಿತ್ತಿ, ಗಣೇಶ ಬೇವಿನಮರದ, ನಗರ ಘಟಕದ ಬಿಜೆಪಿ ಅಧ್ಯಕ್ಷ ಬಸವರಾಜ ಅರಳಿ, ನಾಗರಾಜ ಚಿಂಚಲಿ, ಸತೀಶ ಮೆಕ್ಕಿ, ಚೆಂದ್ರ ಹಂಪಣ್ಣವರ, ಭರಣ್ಣ ಗುಡಗೇರಿ, ಉಮೇಶ ಬೆಳವಿಗಿ, ಲಂಕೆಪ್ಪ ಸೆರಸೂರಿ, ರಾಘವೇಂದ್ರ ಪೂಜಾರ, ಅಶೋಕ ನಿರಾಲೋಟಿ, ದೇವಪ್ಪ ಗಡೇದ, ಶೇಖಪ್ಪ ಗಡಗಿ ಇತರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.