ಕ್ರಿಯಾಶೀಲ ವ್ಯಕ್ತಿಗೆ ಕಾಯಕವೇ ನಾಯಕ
ಕನ್ನಡಪ್ರಭ ವಾರ್ತೆ, ಗದಗ, ಮೇ 27
ಕ್ರಿಯಾಶೀಲ ವ್ಯಕ್ತಿಗಳಿಗೆ ಕಾಯಕವೇ ನಾಯಕನಾಗುತ್ತಾನೆ. ನಾವು ಬೆಳೆದು ಬದುಕಿದ ನಾಡು ಮತ್ತು ಹಳ್ಳಿಗಳನ್ನು ಕಟ್ಟುವ ಕಾರ್ಯ ಮಾಡುವುದು ನನ್ನ ಮುಖ್ಯ ಕೆಲಸವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಸೋಮವಾರ ಸಂಜೆ ತಾಲೂಕಿನ ಹೊಸಳ್ಳಿ ಗ್ರಾಮದ ಬೂದೀಶ್ವರರ 155ನೇ ಜಾತ್ರೋತ್ಸವ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಚಿಂತನಗೋಷ್ಠಿಯಲ್ಲಿ ಶಾಂತಲಾ ಅವರು ಬರೆದ ಶಿವಯೋಗಿ 'ಮಹಾಬೆಳಗು' ಹಾಗೂ ಎ.ವಿ. ಪ್ರಭು ಸಂಪಾದಿಸಿದ 'ಸಂಜೆಗೊಂದಿಷ್ಟು ಆಂತರಿಕ ಮಾತು' ಎಂಬ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಹೊಸಳ್ಳಿ ಜಾತ್ರಾ ಮಹೋತ್ಸವದ ತೇರು ಎಳೆದು ಮನರಂಜನೆ ಮಾಡುವುದಲ್ಲದೇ ಅನೇಕ ಸಾಹಿತ್ಯಿಕ, ಸಾಂಸ್ಕೃತಿಕ ಕೆಲಸಗಳು ನಡೆಯುತ್ತಿರುವುದು ಮಾದರಿಯಾಗಿವೆ. ಸಾನ್ನಿಧ್ಯ ವಹಿಸಿದ್ದ ಹೊಸಳ್ಳಿಯ ಬೂದೀಶ್ವರ ಶ್ರೀಗಳು ಮಾತನಾಡಿ, ಮಾನವ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಅಜ್ಞಾನ ಅಳಿಸಿ, ಸುಜ್ಞಾನಿಯಾಗಲು ಚಿಂತನಗೋಷ್ಠಿಗಳನ್ನು ಆಲಿಸಬೇಕು ಎಂದರು.
ಕಮತಗಿಯ ಹುಚ್ಚೇಶ್ವರ ಸಂಸ್ಥಾನ ಮಠದ ಹುಚ್ಚೇಶ್ವರ ಶ್ರೀಗಳು, ಹೂವಿನಶಿಗ್ಲಿ ವಿರಕ್ತಮಠದ ಚನ್ನವೀರ ಶ್ರೀಗಳು ಆಶೀರ್ವಚನ ನೀಡಿದರು. ಬಳಗಾನೂರ ಶಿವಶಾಂತವೀರ ಶರಣರು, ಮುನವಳ್ಳಿಯ ಸೋಮಶೇಖರ ಮಠದ ಮುರಘರಾಜೇಂದ್ರ ಶ್ರೀಗಳು. ಕುರ್ತಕೋಟಿ ಪಂಚಾಯಿತಿ ಅಧ್ಯಕ್ಷ ಅಪ್ಪಣ್ಣ ಇನಾಮತಿ, ವಿಜಯಾ ಮಳಿಮಠ ಇತರರಿದ್ದರು.
ಹೊಸಳ್ಳಿಯ ಬೂದೀಶ್ವರ ಶ್ರೀಗಳ ತುಲಾಭಾರ ಕಾರ್ಯಕ್ರಮ ಜರುಗಿತು. ನಂತರ ಅಳವಂಡಿಯ ಸ್ವಾತಂತ್ರ್ಯ ಹೋರಾಟಗಾರ ಫಕ್ಕೀರಡ್ಡೆಪ್ಪ ಗದ್ದನಕೇರಿ ಅವರಿಗೆ ಹೊಸಹಳ್ಳಿ ಗುರುಕಾರುಣ್ಯ ಪ್ರಶಸ್ತಿ ನೀಡಲಾಯಿತು. ಎಸ್.ಎಸ್. ಬೆಟಗೇರಿ ಸ್ವಾಗತಿದರು. ಅಮರೇಶ್ವರ ದೇವರು ನಿರೂಪಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

