ಹಾಸನ

ಸಕಲೇಶಪುರ: ಜೆಡಿಎಸ್ಗೆ ಕೆಜೆಪಿ ಸ್ಪರ್ಧೆ

Published On :

ಎಸ್.ಎಂ ಮಂಜುನಾಥ್
ಸಕಲೇಶಪುರ: ವಿಧಾನಸಭಾ ಚುನಾವಣೆಗೆ ನಾನಾ ಪಕ್ಷಗಳಿಂದ ಅಭ್ಯರ್ಥಿಗಳ ಆಯ್ಕೆ ಬಹುತೇಕ ಅಂತಿಮಗೊಂಡಿರುವುದರಿಂದ ತಾಲೂಕಿನಲ್ಲಿ ಚುನಾವಣೆ ಕಣದ ಕಾವು ಹೆಚ್ಚಾಗುತ್ತಿದೆ.
ಜೆಡಿಎಸ್ನಿಂದ ಹಾಲಿ ಶಾಸಕ ಎಚ್.ಕೆ ಕುಮಾರಸ್ವಾಮಿ ಸ್ಪರ್ಧಿಸುವುದು ನಿಶ್ಚಿತಗೊಂಡಿರುವುದರಿಂದ ಚುನಾವಣಾ ಪೂರ್ವಭಾವಿ ತಯಾರಿ ಜೋರಾಗಿದೆ. ಮಾಜಿ ಶಾಸಕ ಎಚ್.ಎಂ ವಿಶ್ವನಾಥ್ ಪಕ್ಷ ತೊರೆದಿರುವುದರಿಂದ ತಾಲೂಕು ಜೆಡಿಎಸ್ಗೆ ಯಾವುದೇ ಹಾನಿಯಾಗಿಲ್ಲ ಎಂಬುದು ಇತ್ತೀಚಿಗೆ ನಡೆದ ಪಕ್ಷದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಗೋಚರಿಸುತ್ತಿತ್ತು.
ಅಲ್ಲದೆ ಮಾಜಿ ಶಾಸಕ ಎಚ್.ಎಂ ವಿಶ್ವನಾಥ್ ಅವರಿಂದ ಪಕ್ಷದಲ್ಲಿ ಉಪೇಕ್ಷಿತರಾಗಿದ್ದ ಎಚ್.ಪಿ ಯಜಮಾನ್ ರಂತಹ ಹಲವು ಮುಖಂಡರು ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿರುವುದು ಕಾರ್ಯಕರ್ತರ ಉತ್ಸಾಹವನ್ನು  ಹೆಚ್ಚಿಸಿದೆ.
ಕೆಜಿಪಿಯಿಂದ ಉಮೇಶ್: ಕೆಜೆಪಿಯಿಂದ ಬೆಳಗೋಡು ಉಮೇಶ್ಗೆ ಟಿಕೆಟ್ ಖಾತ್ರಿಯಾಗಿರುವುದರಿಂದ ಶಾಸಕ ಕುಮಾರಸ್ವಾಮಿಗೆ ಪೈಪೋಟಿ ನೀಡುವುದು ನಿಶ್ಚಿತ. ಚುನಾವಣೆ ಕಣಕ್ಕೆ ಧುಮುಕಿರುವ ಉಮೇಶ್ ಇನ್ನೆರಡು ದಿನಗಳಲ್ಲಿ ಪಟ್ಟಣದಲ್ಲಿ ಪಕ್ಷದ ಕಾರ್ಯಕರ್ತರ ಸಭೆ ನಡೆಸಲು ಸಿದ್ಧರಾಗುತ್ತಿದ್ದು, ಇವರಿಗೆ ಮಾಜಿ ಶಾಸಕರಾದ ಎಚ್.ಎಂ ವಿಶ್ವನಾಥ್ ಹಾಗೂ ಬಿ.ಆರ್. ಗುರುದೇವ್ ಬೆಂಬಲ ದಕ್ಕಿದೆ. ಆದ್ದರಿಂದ ಕೆಜೆಪಿ ಕಾರ್ಯಕರ್ತರ ಉತ್ಸಾಹ ಇಮ್ಮಡಿಯಾಗಿದ್ದು ಮಾಡು ಅಥವಾ ಮಡಿ ಹೋರಾಟ ನಡೆಸುವುದು ನಿಶ್ಚಿತವಾಗಿದೆ.
ಬಿಜೆಪಿಯಿಂದ ಡಾ.ನಾರಾಯಣಸ್ವಾಮಿ ಸ್ಪರ್ಧೆ ಬಹುತೇಕ ಖಚಿತಗೊಂಡಿದ್ದು ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ. ಇದಲ್ಲದೆ ಪಕ್ಷದ ಹಿರಿಯ ನಾಯಕರಾದ ಬಿ.ಬಿ ಶಿವಪ್ಪನವರಿಗೆ ವಿಧಾನ ಪರಿಷತ್ ಸದಸ್ಯತ್ವ ನೀಡಿರುವುದು ಕ್ಷೇತ್ರದಲ್ಲಿ ಸ್ವಲ್ಪ ಮಟ್ಟಿನ ಸಂಚಲನಕ್ಕೂ ಕಾರಣವಾಗಿದೆ.  ಕಾಂಗ್ರೆಸ್ನಿಂದ ಡಿ.ಮಲ್ಲೇಶ್ ಸ್ಪರ್ಧೆ ನಿಶ್ಚಿತವಾಗಿದ್ದು, ಮೋಟಮ್ಮ ಸ್ಪರ್ಧಿಸಬೇಕೆಂಬ ತಾಲೂಕು ಕಾಂಗ್ರೆಸ್ ನಾಯಕರ ಒಕ್ಕೊರಲಿನ ಬೇಡಿಕೆಗೆ ಹೈಕಮಾಂಡ್ ಒಪ್ಪಿಗೆ ಸೂಚಿಸಿಲ್ಲ ಎನ್ನಲಾಗಿದೆ.
ಇದರಿಂದಾಗಿ ತಾಲೂಕಿನಲ್ಲಿ ಕೆಜೆಪಿ, ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಚತುಷ್ಕೋನ ಸ್ಪರ್ಧೆ ಏರ್ಪಟ್ಟರೂ, ಕೆಜಿಪಿ ಮತ್ತು ಜೆಡಿಎಸ್ ನಡುವ ತೀವ್ರ ಪೈಪೋಟಿ ಎದುರಾಗುವ ಲಕ್ಷಣಗಳಿವೆ. ಆದರೆ, ಬಿ.ಸ್ಆರ್ ಕಾಂಗ್ರೆಸ್ ಹಾಗೂ ಬಿಎಸ್ಪಿ ಪಕ್ಷಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.