20 ರಿಂದ ಬೇಸಿಗೆ ವಿಜ್ಞಾನ ಶಿಬಿರ
ಹಾಸನ: ನಗರದ ಗಂಧದ ಕೋಠಿಯಲ್ಲಿರುವ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ಏಪ್ರಿಲ್ 20 ರಿಂದ 23 ರವರೆಗೆ ಬೇಸಿಗೆ ವಿಜ್ಞಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಬಿಜಿವಿಎಸ್ ಜಿಲ್ಲಾ ಘಟಕ ತಿಳಿಸಿದೆ.
ಶಿಬಿರದಲ್ಲಿ ಗಣಿತದಲ್ಲಿ ಆನಂದ, ವಿನೋದ ವಿಜ್ಞಾನ, ಪರಿಸರ ಪಯಣ, ಕಥೆ ಕಟ್ಟೋಣ, ಸೃಜನಶೀಲತೆ ಮತ್ತು ಕ್ರಿಯಾತ್ಮಕತೆ, ಓರಿಗಾಮಿ, ಖಗೋಳಯಾನ, ಪವಾಡ ರಹಸ್ಯ ಬಯಲು ಮುಂತಾದ ಚಟುವಟಿಕೆ ಹಾಡು-ಆಟಗಳನ್ನು ಪ್ರಾಯೋಗಿಕವಾಗಿ ಕಲಿಸಲಾಗುವುದು.
ಭಾಗವಹಿಸಲು ಇಚ್ಚಿಸುವ ವಿದ್ಯಾರ್ಥಿಗಳು ಏ.10 ರೊಳಗೆ ನಿಗದಿತ ಸ್ಥಳಗಳಲ್ಲಿ ಹೆಸರು ನೋಂದಾಯಿಸಿ ಕೊಳ್ಳಬೇಕು.
ಭಾರತ ಜ್ಞಾನ ವಿಜ್ಞಾನ ಸಮಿತಿ ಸಾಫ್ಟ್ ಕಂಪ್ಯೂಟರ್ ಅಕಾಡೆಮಿ, ಸೀತಾರಾಮಾಂಜನೇಯ ದೇವಸ್ಥಾನದ ರಸ್ತೆ ಉತ್ತರ ಬಡಾವಣೆ, ಹಾಸನ, ಸಹನಾ ಬ್ಯೂಟಿ ಕೇರ್ ಅರಳಿಕಟ್ಟೆ ವೃತ್ತ ಸಾಲಗಾಮೆ ರಸ್ತೆ, ಹಾಸನ, ಸೌಹಾರ್ದ ಎಸ್ಎಫ್ಐ ಕಚೇರಿ ನಂ-2105, ಮಿಷನ್ ಆಸ್ಪತ್ರೆ 2ನೇ ಅಡ್ಡ ರಸ್ತೆ ಹಾಸನ. ಇಲ್ಲಿ ಹೆಸರು ನೋಂದಾಯಿಸಬಹುದು.
ಕೇವಲ 60 ಮಕ್ಕಳಿಗೆ ಮಾತ್ರ ನೊಂದಣಿ ಮಾತ್ರ ಮಾಡಿಕೊಳ್ಳಲಾಗುವುದು. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು ಹಾಗೂ ಮಕ್ಕಳು ತಯಾರಿಸಿದ ಪಠ್ಯಪೂರಕ ಸಾಮಗ್ರಿಗಳನ್ನು ಪ್ರದರ್ಶಿಸಿ ಮಕ್ಕಳಿಗೇ ಹಿಂತಿರುಗಿಸಲಾಗುವುದು.
ಶಿಬಿರದಲ್ಲಿ ಭಾಗವಹಿಸುವ ಮಕ್ಕಳು ಶಿಬಿರಕ್ಕೆ ಬರುವಾಗ ಪೆನ್ನು, ನೋಟು ಪುಸ್ತಕ, ಕತ್ತರಿ ಹಾಗೂ ಮಧ್ಯಾಹ್ನದ ಬುತ್ತಿ ತರತಕ್ಕದ್ದು. ಸಂಜೆ ಹಾಗೂ ಬೆಳಗ್ಗೆ ಹಾಲು ಮತ್ತು ಹಣ್ಣನ್ನು ಕೊಡಲಾಗುವುದು ಎಂದು ತಿಳಿಸಲಾಗಿದೆ.
ಶಿಬಿರದಲ್ಲಿ ನಡೆಸುವ ವಿಷಯಗಳಿಗೆ ಬೇಕಾದ ಸಾಮಗ್ರಿಗಳನ್ನು ಶಿಬಿರ ನೀಡಲಿದೆ. ಶಿಬಿರವು ಪ್ರತಿದಿನ ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಜಯಪ್ರಕಾಶ್ - 9844641868 ಗೋಪಾಲಕೃಷ್ಣ - 9343431828 3. ಎಂ.ಜಿ.ಪ್ರದೀಪ್ - 9964267507 ಸಂಪರ್ಕಿಸಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

