ಹಾಸನ

ಕ್ಷುಲ್ಲಕ ಕಾರಣ: ಮಚ್ಚಿನಿಂದ ತಲೆಗೆ ಒಡೆದು ವ್ಯಕ್ತಿ ಹತ್ಯೆ

Published On :

ಕ.ಪ್ರ. ವಾರ್ತೆ೤ ಸಕಲೇಶಪುರ೤ ಏ 4
ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ ದೊಡ್ಡನಹಳ್ಳಿ-ಯಸಳೂರು ರಸ್ತೆಯಲ್ಲಿ ಬುಧವಾರ ನಡೆದಿದೆ. ತಾಲೂಕಿನ ಯಸಳೂರು ಹೋಬಳಿ, ಅತ್ತಿಗನಹಳ್ಳಿ ಗ್ರಾಮದ ಯತೀಶ್ (25) ಎಂಬಾತ ಕೊಲೆಯಾದವರು.
 ಯತೀಶ್ ಬೈಕಿನಲ್ಲಿ ಹಾಸನಕ್ಕೆ ಬಂದು ತಮ್ಮ ಕೆಲಸ ಮುಗಿಸಿಕೊಂಡು ವಾಪಸ್ ಊರಿಗೆ ಹೋಗಲು ದೊಡ್ಡನಹಳ್ಳಿ-ಯಸಳೂರು ರಸ್ತೆ ಶೆಟ್ಟಿಹಳ್ಳಿಗೆ ಹೋಗುವ ಕಾಲು ದಾರಿಯಲ್ಲಿ ಹೋಗುತ್ತಿದ್ದಾಗ ದೊಡ್ಡನಹಳ್ಳಿಯ ಗುರುಸ್ವಾಮಿ ಎಂಬುವವರು ಹಳೇ ದ್ವೇಷದಿಂದ ಮಚ್ಚಿನಿಂದ ಯತೀಶ್ ತಲೆಗೆ ಹೊಡೆದು ತೀವ್ರವಾಗಿ ಗಾಯಗೊಳಿಸಿದ್ದರು. ನಂತರ ಯತೀಶ್‌ರನ್ನು ಚಿಕಿತ್ಸೆಗಾಗಿ ಸಕಲೇಶಪುರ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿದ್ದಾರೆ. ತಂದೆ ಚಂದ್ರಶೇಖರ್ ಯಸಳೂರು ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ತಾಯಿ ಮಗು ಸೇರಿ ಐವರ ನಾಪತ್ತೆ
ಚನ್ನರಾಯಪಟ್ಟಣ: ಜಿಲ್ಲೆಯ ಪ್ರತ್ಯೇಕ ಪ್ರಕಣದಲ್ಲಿ ತಾಯಿ ಮಗಳು ಸೇರಿದಂತೆ ಐವರು ನಾಪತ್ತೆಯಾಗಿದ್ದಾರೆ. ಮಂಡ್ಯ ಜಿಲ್ಲೆ, ಕಿಕ್ಕೇರಿ ಹೋಬಳಿ, ಮಾರಗೋನಹಳ್ಳಿಯ ಭಾನುಮತಿ (28) ತನ್ನ ಪುತ್ರಿ ಮೋನಿಕಾ (9) ಜತೆ ಜಿಲ್ಲೆ ಶ್ರವಣಬೆಳಗೊಳ ಲಲಿತ ದೇವನಾಥ ಕಲ್ಯಾಣ ಮಂಟಪಕ್ಕೆ ಮದುವೆಗೆ ಹೋದವಳು ವಾಪಸ್ ಬಾರದೆ ಕಾಣೆಯಾಗಿದ್ದಾರೆ. ಚಹರೆ ಭಾನುಮತಿ, 5 ಅಡಿ ಎತ್ತರ, ಕೆಂಪು ಬಣ್ಣ, ಸಾಧಾರಣ ಮೈಕಟ್ಟು, ಕನ್ನಡ ಮಾತನಾಡುತ್ತಾರೆ. ಮೋನಿಕಾ, 3 ಅಡಿ ಎತ್ತರ, 4 ನೇ ತರಗತಿ ವಿದ್ಯಾರ್ಥಿ, ಕನ್ನಡ ಮಾತನಾಡುತ್ತಾರೆ. ಕೆಂಪು ಮತ್ತು ಕಂದು ಬಣ್ಣದ ಮಿಡಿ ಮನೆಯಂದ ಹೋಗುವಾಗ ಧರಿಸಿದ್ದರು. ಭಾನುಮತಿ ಕುಮಾರ್ ಶ್ರವಣಬೆಳಗೊಳ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
 ತಾಲೂಕಿನ ಗುಲಸಿಂದ ಗ್ರಾಮದ ಜನಾರ್ದನರವರ ಪುತ್ರಿ ಭವ್ಯಶ್ರೀ (20)ಯನ್ನು ಬೆಂಗಳೂರಿಗೆ ಮದುವೆ ಮಾಡಿಕೊಟ್ಟಿದ್ದು, ಭವ್ಯ ತಂದೆ ಮನೆಯಲ್ಲಿ ಇದ್ದು, ಮನೆಯಿಂದ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದಾರೆ.
 ಚಹರೆ 5 ಅಡಿ ಎತ್ತರ, ಕೋಲುಮುಖ, ಬಿಳಿ ಬಣ್ಣ, ಕನ್ನಡ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಕೆಂಪು ಬಣ್ಣದ ಚೂಡಿದಾರ ಮತ್ತು ಕೆಂಪು ಬಣ್ಣದ ವೇಲ್ ಧರಿಸಿದ್ದರು. ತಂದೆ ಜನಾರ್ದನ ಚನ್ನರಾಯಪಟ್ಟಣ ನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
 ಮತ್ತೊಂದು ಪ್ರಕರಣದಲ್ಲಿ ಹಾಸನ ನಗರ ರಾಘವೇಂದ್ರ ಕಾಲೋನಿ, ಬೀರನಹಳ್ಳಿ ಕೆರೆ ಬಡಾವಣೆಯ ರಾಜು  ತಂಗಿಯ ಪುತ್ರಿ ಲಕ್ಷ್ಮಿ(13) ಬೆಂಗಳೂರಿನಿಂದ ರಜೆ ಪ್ರಯುಕ್ತ ಹಾಸನಕ್ಕೆ ಬಂದಿದ್ದು, ಕಳೆದ ಮಂಗಳವಾರ ಮನೆಯಿಂದ ಹೊರಗೆ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದಾಳೆ. ಚಹರೆ ಕನ್ನಡ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗಿ ಪಿಂಕ್ ಬಣ್ಣದ ಚೂಡಿದಾರ ಧರಿಸಿದ್ದಳು. ಮಾವ ರಾಜು ಹಾಸನ ಬಡಾವಣೆ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
 ಇನ್ನೊಂದು ಪ್ರಕರಣದಲ್ಲಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕು ಬೆಳಗುಳ ಗ್ರಾಮದ ಪಾಪಣ್ಣರವರ ಪುತ್ರ ಮಹೇಶ್ (26) ಹೊಳೆನರಸೀಪುರ ತಾ, ಹಳ್ಳಿ ಮೈಸೂರು ಹೋಬಳಿ, ಸಿಂಗನಕುಪ್ಪೆ ಗ್ರಾಮದ ಪಾಪಣ್ಣ ರವರ ಮಗಳ ಮನೆಗೆ ಬಂದವನು ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದಾನೆ.  ಮನೆಯಿಂದ ಹೋಗುವಾಗ ಪ್ಯಾಂಟ್ ಶರ್ಟ್ ಧರಿಸಿದ್ದರು. ತಾಯಿ ಭಾಗ್ಯಮ್ಮ ಹೊಳೆನರಸೀಪುರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.