ಹಾಸನ

ಹಳ್ಳಿಮೈಸೂರು ಪ್ರಾಂತ್ಯ: ಬಿರುಸುಗೊಂಡ ಪ್ರಚಾರ

Published On :

ಕನ್ನಡಪ್ರಭ ವಾರ್ತೆ೤ ರಾಮನಾಥಪುರ೤ ಏ.6
ವಿಧಾನಸಭಾ ಚುನಾವಣೆ ಕಾವು ಸಾಕಷ್ಟು ಕಾವೇರಿದ್ದು ತಾಲೂಕಿನೆಲ್ಲೆಡೆ ಬಿರುಸಿನ ಪ್ರಚಾರ ಈಗಾಗಲೇ ಶುರುವಾಗಿದೆ. ಹಳ್ಳಿಮೈಸೂರು ಹೋಬಳಿ ಪ್ರಾಂತ್ಯದಲ್ಲೂ ಪ್ರಚಾರ ಸಾಕಷ್ಟು ರಂಗೇರಿದೆ.
ಇಲ್ಲಿನ ಬಡಕ್ಯಾತನಹಳ್ಳಿಗೆ ಮತಯಾಚಿಸಲು ಆಗಮಿಸಿದ ಪೊಟ್ಯಾಟೋ ಕ್ಲಬ್ ಪಕ್ಷೇತರ ಅಭ್ಯರ್ಥಿ ಎಚ್.ಯೋಗಾರವುಶ್ ಅವರನ್ನು ಗ್ರಾಮಸ್ಥರು ಬರಮಾಡಿ ಕೊಂಡರು. ಈ ಸಂದರ್ಭದಲ್ಲಿ ಇಲ್ಲಿನ ತೇಜೂರು ಸಿದ್ದರಾಮೇಶ್ವರ ಮಠದ ಕಲ್ಯಾಣ ಸ್ವಾಮೀಜಿ ಮತ್ತು ಟಿ.ಮಾಯಗೌಡನಹಳ್ಳಿ ರಾಜಾಪುರ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಇದ್ದರು.
ಮುಖಂಡ ಸೋಮಣ್ಣ, ಯೋಗೇಶ್, ಈರಯ್ಯ ಮಾತನಾಡಿ, ಇದುವರೆಗಿನ ರಾಜಕೀಯದಲ್ಲಿ ಕೆಲವರ ಸ್ವಾರ್ಥ ರಾಜಕೀಯದಿಂದಾಗಿ ಹಳ್ಳಿಮೈಸೂರು ಬೇರ್ಪಟ್ಟು ಅರಕಲಗೂಡು ಸೇರುವಂತಾಯಿತು. ಅಭಿವೃದ್ಧಿ ವಿಚಾರದಲ್ಲಿ ಮಲತಾಯಿ ಧೋರಣೆ ಅನುಭವಿಸುವಂತಾಯಿತು. ಕಳೆದ ಬಾರಿ ಮತಯಾಚಿಸಲು ಬಂದವರು ನಂತರದ ದಿನಗಳಲ್ಲಿ ಈ ಭಾಗದ ನೀರಾವರಿ, ರಸ್ತೆ ಇತರೆ ಅಭಿವೃದ್ಧಿ ಬಗ್ಗೆ ಚಿಂತನೆಯೆ ಮಾಡಲಿಲ್ಲ. ಹಾಗಾಗಿ ಬೇಸತ್ತು ಈ ಬಾರಿ ಹೊಸಬರಿಗೆ ಅವಕಾಶ ಮಾಡಿಕೊಡುವುದಾಗಿ ಗ್ರಾಮಸ್ಥರು ತಿಳಿಸಿದರು.
ಪೊಟ್ಯಾಟೋ ಕ್ಲಬ್ ಅಧ್ಯಕ್ಷ ಎಚ್.ಯೋಗಾರವುಶ್ ಸ್ವಾಮೀಜಿಗಳಿಂದ ಆಶೀರ್ವಚನ ಪಡೆದು ನಂತರ ಬಡಕ್ಯಾತನಹಳ್ಳಿ, ಸೋಮನಹಳ್ಳಿ, ಕುರಿಕಾವಲು, ಕ್ಯಾತನಹಳ್ಳಿ, ಹಿಂದಲಹಳ್ಳಿ, ಎಳೆಗೌಡನಕೊಪ್ಪಲು ಗ್ರಾಮಕ್ಕೆ ತೆರಳಿ ಮತಯಾಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.