ಹಾಸನ

ಜನತೆಗಿಲ್ಲ ಹೈಟೆಕ್ ಸುಲಭ್ ಶೌಚಾಲಯ

Published On :

ಕ.ಪ್ರ. ವಾರ್ತೆ೤ ಅರಸೀಕೆರೆ೤ ಏ.8
ಪುರಸಭೆ ಲಕ್ಷಾಂತರ ರು. ವೆಚ್ಚದಲ್ಲಿ ನಿರ್ಮಿಸಿರುವ ಹೈಟೆಕ್ ಸುಲಭ್ ಶೌಚಾಲಯ ಉದ್ಘಾಟನೆಗೊಂಡು  ತಿಂಗಳುಗಳೇ ಕಳೆದರೂ ಸಾರ್ವಜನಿಕರ ಉಪಯೋಗಕ್ಕೆ ಇನ್ನೂ ಸಮರ್ಪಣೆ ಆಗಿಲ್ಲ.
  ಪಟ್ಟಣದ ಹೃದಯ ಭಾಗದಲ್ಲಿ ರೇಲ್ವೆ ಜಂಕ್ಷನ್ ಹೊಂದಿರುವ ಕಾರಣ ದಿನೇ ದಿನೇ ವಿಸ್ತಾರವಾಗಿ ಬೆಳೆಯುತ್ತಿದ್ದು ಜನಸಂಖ್ಯೆಯೂ ದ್ವಿಗುಣಗೊಳ್ಳುತ್ತಿದೆ. ಬೇರೆ ಬೇರೆ ಊರು ಮತ್ತು ಗ್ರಾಮಾಂತರ ಪ್ರದೇಶಗಳಿಂದ ದಿನನಿತ್ಯ ಬಂದು ಹೋಗುವ ಜನಗಳ ಸಂಖ್ಯೆ ಹೆಚ್ಚಾಗಿದೆ.
  ಇಲ್ಲಿನ ಕೃಷಿ ಮಾರುಕಟ್ಟೆ ಸೇರಿದಂತೆ ಇನ್ನಿತರ ವ್ಯಾಪಾರ, ವಾಣಿಜ್ಯ ಕೇಂದ್ರಗಳ ವಹಿವಾಟು ಕೂಡಾ ಹೆಚ್ಚಿದ್ದು, ವಿವಿಧ ಸರ್ಕಾರಿ ಕಚೇರಿಗಳ ಕೆಲಸ ಕಾರ್ಯಗಳಿಗೆ ಪಟ್ಟಣಕ್ಕೆ ಬರುವವರ ಜನಸಂಖ್ಯೆಯೂ ಹೆಚ್ಚುತ್ತಿದೆಯಾದರೂ ಅವರಿಗೆ ಪಟ್ಟಣದಲ್ಲಿ ದೊರಕಬೇಕಾದ ಮೂಲಭೂತ ಸೌಲಭ್ಯ ಅಷ್ಟಕ್ಕಷ್ಟೇ ಎನ್ನುವುದು ನಾಗರಿಕರ ಅಭಿಪ್ರಾಯ.
 ಸಾರ್ವಜನಿಕರು ತಮ್ಮ ಜಲಭಾದೆ ತೀರಿಸಿಕೊಳ್ಳುವ ಸಲುವಾಗಿ ಪಟ್ಟಣದ ಜನನಿಬಿಡ ಪ್ರದೇಶಗಳಲ್ಲಿ ಪುರಸಭೆಯ ಅನುದಾನದಲ್ಲಿ ಶೌಚಾಲಯ ನಿರ್ಮಿಸಿ ಅನುಕೂಲ ಮಾಡಿಕೊಡಬೇಕೆಂದು ನಾಗರಿಕರ ಒತ್ತಡಕ್ಕೆ ಸ್ಪಂದಿಸಿದ ಸ್ಥಳೀಯ ಜನಪ್ರತಿನಿಧಿಗಳು ಲಕ್ಷಾಂತರ ರು. ವೆಚ್ಚದಲ್ಲಿ ಪಟ್ಟಣದ ಕೆಲವು ಕಡೆಗಳಲ್ಲಿ ಹೈಟೆಕ್ ಸುಲಭ ಶೌಚಾಲಯ ನಿರ್ಮಿಸಿದೆ.
 ಆದರೆ, ಪುರಸಭೆ ಅವುಗಳನ್ನು ಸಾರ್ವಜನಿಕರ ಉಪಯೋಗಕ್ಕೆ ನೀಡಲು ಮೀನಾಮೇಷ ಎಣಿಸುತ್ತಿರುವುದರಿಂದ ಮೂತ್ರ ವಿಸರ್ಜನೆ ಮಾಡುವವರು ಅನಿವಾರ್ಯವಾಗಿ ರಸ್ತೆ ಬದಿಯನ್ನೇ ಆವಲಂಬಿಸಬೇಕಾಗಿದೆ. ಹೀಗಾಗಿ ಮಹಿಳೆಯರು ಪಟ್ಟಣದ ಕೆಲವು ಭಾಗದ ರಸ್ತೆಗಳಲ್ಲಿ ಓಡಾಡಲು ಮುಜುಗರ ಪಡುವಂತಾಗಿದೆ.
 ಸುಮಾರು 15 ಲಕ್ಷ ರು. ವೆಚ್ಚದಲ್ಲಿ ಗ್ರಂಥಾಲಯ ರಸ್ತೆಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಪಕ್ಕದಲ್ಲಿ, ಬಿ.ಎಚ್.ರಸ್ತೆಯ ಪ್ರವಾಸಿಮಂದಿರದ ಮುಂಭಾಗ ಹಾಗೂ ಸರ್ಕಾರಿ ಜೆ.ಸಿ.ಅಸ್ಪತ್ರೆ ಆವರಣದಲ್ಲಿ ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ಹೈಟೆಕ್ ಸುಲಭ ಶೌಚಾಲಯಗಳನ್ನು  ನಿರ್ಮಿಸಿರುವ ಪುರಸಭಾ ಆಡಳಿತ ಗ್ರಂಥಾಲಯ ರಸ್ತೆಯಲ್ಲಿನ ಶೌಚಾಲಯವನ್ನು ಸಾರ್ವಜನಿಕರ ಉಪಯೋಗಕ್ಕೆ ಮುಕ್ತಗೊಳಿಸಲಾಗಿದೆ.
 ಇನ್ನುಳಿದ ಎರಡು ಶೌಚಾಲಯಗಳ ಉದ್ಘಾಟನೆಗೊಂಡು ಎರಡು ತಿಂಗಳು ಕಳೆದರೂ ಉಪಯೋಗಕ್ಕೆ ಲಭ್ಯವಾಗದೇ ಇರುವುದು ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.