ಹಾಸನ

ದಲಿತರ ಸ್ಪರ್ಶ, ದೇವರ ಮಡಿಗೆ ತೊಂದರೆ: ನಾಲ್ವರ ಮೇಲೆ ಹಲ್ಲೆ

Published On :

ಕ.ಪ್ರ.ವಾರ್ತೆ  ಹೊಳೆನರಸೀಪುರ  ಏ.13
ದಲಿತರ ಸ್ಪರ್ಶದಿಂದ ದೇವರ ಮಡಿಗೆ ತೊಂದರೆ ಆಯಿತೆಂದು ಹೇಳಿ, ದಲಿತರ ಮೇಲೆ ಹಲ್ಲೆ ನಡೆಸಿದ ಘಟನೆ ತಾಲೂಕಿನ ಬಿದಿರಕ್ಕ ಗ್ರಾಮದಲ್ಲಿ ನಡೆದಿದೆ.
ಬಿದಿರಕ್ಕ ಗ್ರಾಮ ದೇವತೆ ಶ್ರೀದೇವಿರಮ್ಮಗೆ ಪ್ರತಿ ವರ್ಷ ಯುಗಾದಿಯಂದು ವಿಶೇಷ ಪೂಜೆ ನಡೆಸುವುದು ಗ್ರಾಮದಲ್ಲಿ ನಡೆದು ಬಂದಿರುವ ವಾಡಿಕೆ. ಅದರಂತೆ ಯುಗಾದಿ ಹಬ್ಬದಂದು ಗುರುವಾರ ಸಂಜೆ ಗ್ರಾಮದೇವತೆ ಶ್ರೀದೇವಿರಮ್ಮಗೆ ವಿಶೇಷ ಪೂಜೆಗಳು ನಡೆದು ಗ್ರಾಮದಲ್ಲಿ ಮೆರವಣಿಗೆ ಆರಂಭವಾಗಿದೆ. ಮೆರವಣಿಗೆ ದಲಿತರ ಕಾಲೋನಿ ಮುಖಾಂತರ ದೇವಾಲಯಕ್ಕೆ ಹೋಗುವ ವೇಳೆ ಆರೋಗ್ಯ ಸರಿ ಇಲ್ಲದ ದಲಿತರ ಆನಂದ ಮತ್ತು ರಾಮಸ್ವಾಮಿ ಎಂಬ ಇಬ್ಬರು ಯುವಕರು ಏಕಾಏಕಿ ದೇವಿರಮ್ಮನಮೂರ್ತಿ ಹೊತ್ತಿದ್ದ ಪೂಜಾರಿ ಕಾಲಿಗೆ ಬಿದ್ದು ಆರ್ಶೀವಾದ ಮಾಡುವಂತೆ ಪ್ರಾರ್ಥಿಸಿದ್ದಾರೆ.
ಪೂಜಾರಿ ಕಾಲನ್ನು ಹಿಡಿದು ಬೇಡುತ್ತಿದ್ದಂತೆ ಪೂಜಾರಿ ಮೈಮೇಲೆ ಬಂದಿದ್ದ ದೇವರು ಬಿಟ್ಟು ಹೋಯಿತೆಂದು ಆಲ್ಲಿಯೇ ಇದ್ದ ಸವರ್ಣೀಯರು ದಲಿತರ ಮೇಲೆ ಜಗಳಕ್ಕೆ ಬಿದ್ದಿದ್ದಾರೆ. ಜಗಳದ ಸಮಯದಲ್ಲಿ ಸ್ವಾಮಿ, ಶಿವಣ್ಣ ಮತ್ತು ಶಿವಮೂರ್ತಿ ಎಂಬುವರಿಗೆ ಪೆಟ್ಟು ಬಿದ್ದಿದೆ. ಈ ಮೂವರನ್ನು ಪಟ್ಟಣದ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸುದ್ದಿ ತಿಳಿದ ಪೊಲೀಸರು ಗ್ರಾಮಕ್ಕೆ ತೆರಳಿ ಪರಿಸ್ಥಿತಿಯನ್ನು ತಹಬದಿಗೆ ತಂದರು. ಆದರೆ ತಾಲೂಕು ದಲಿತ ಸಂಘರ್ಷ ಸಮಿತಿ ಹಲ್ಲೆ ನಡೆಸಿದವರ ವಿರುದ್ಧ ಕ್ರಮಕೈಗೊಳ್ಳ ಬೇಕೆಂದು ಶನಿವಾರ ಸಂಜೆ ಪ್ರತಿಭಟನೆ ಹಾಗೂ ಧರಣಿ ನಡೆಸಿತು. ಆದರೆ ಧರಣಿ ನಿರತ ದಸಂಸ ಮುಖಂಡರು ಸಂಜೆ ಕಳೆದು ಕತ್ತಲು ಆವರಿಸಿದ್ದರೂ  ಕ್ರಮ ಕೈಗೊಳ್ಳುವಂತೆ ದೂರು ದಾಖಲು ಮಾಡಿರಲಿಲ್ಲ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.