ಹಾಸನ

ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ

Published On :

ಕನ್ನಡಪ್ರಭ ವಾರ್ತೆ  ಸಕಲೇಶಪುರ  ಏ.14
ಮಕ್ಕಳ ಭವಿಷ್ಯಕ್ಕಾಗಿ ಆಸ್ತಿಯನ್ನು ಮಾಡುವುದು ಬೇಡ, ಬದಲಿಗೆ ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡಿ ಎಂದು ಸರ್ಕಲ್ ಇನ್ಸ್‌ಪೆಕ್ಟರ್ ದಿನೇಶ್ ಪಾಟೀಲ್ ಹೇಳಿದರು.
  ಪಟ್ಟಣದ ಲಯನ್ಸ್ ಕ್ಲಬ್ ಆವರಣದಲ್ಲಿ ನಡೆದ ಟೈನಿಟಾಟ್ ಸ್ಕೂಲ್ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ವಿದ್ಯಾರ್ಜನೆಯೆಂದರೆ ಅಲ್ಪಾವಧಿಯಲ್ಲ. ಅದೊಂದು ದೀರ್ಘಾವಧಿಯ ಪ್ರಕ್ರಿಯೆ. ಆದ್ದರಿಂದ ಮಕ್ಕಳಲ್ಲಿ ಓದುವ ಸಲುವಾಗಿ ಒತ್ತಡ ಹೇರಬಾರದು. ಶಿಕ್ಷಣ ತಜ್ಞರ ಪ್ರಕಾರ 5 ವರ್ಷದೊಳಗಿನ ಮಕ್ಕಳಿಗೆ ಬಲವಂತವಾಗಿ ಯಾವುದೇ ವಿಷಯವನ್ನು ತುರುಕಬಾರದು ಎಂದರು. ಆದರೆ, ಇಂದು ಪೋಷಕರು 2 ವರ್ಷದ ಮಕ್ಕಳನ್ನು ಶಾಲೆಗೆ ಕಳುಹಿಸುವ ಮೂಲಕ ಮಕ್ಕಳಲ್ಲಿ ಒತ್ತಡ ಉಂಟು ಮಾಡುತ್ತಿದ್ದಾರೆ ಎಂದು ಹೇಳಿದರು.
 ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಶಿಕ್ಷಕರು ಅತ್ಯಂತ ಸರಳವಾಗಿ ಶಿಕ್ಷಣ ನೀಡುವುದರಿಂದ ಶಿಕ್ಷಣ ಗುಣಮಟ್ಟದಿಂದ ಕೂಡಿರುತ್ತದೆ. ನಿಸರ್ಗದ ನಡುವೆ ಶಿಕ್ಷಣ ನೀಡುವುದರಿಂದ ಸ್ವಚ್ಛಂದವಾಗಿ ಆಟವಾಡುತ್ತಾ ವಿದ್ಯೆಯನ್ನು ಆರ್ಜಿಸಿ ಕೊಳ್ಳಲು ತುಂಬಾ ಸಹಕರಿಯಾಗಿದೆ ಎಂದರು.
 ಪ್ರಾಂಶುಪಾಲ ಕೆ. ವೇಣುಗೋಪಾಲ್ ಮಾತನಾಡಿ ಪಾಶ್ಚಾತ್ಯ ದೇಶಗಳಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಬಳ ವಿಶ್ವ ವಿದ್ಯಾನಿಲಯದಲ್ಲಿ ಕಾರ್ಯನಿರ್ವಹಿಸುವ ಪ್ರಾಧ್ಯಾಪಕರಿಗಿಂತ ಹೆಚ್ಚು ಪಡೆಯುತ್ತಾರೆ. ವಿಪರ್ಯಾಸವೆಂದರೆ ನಮ್ಮ ದೇಶದಲ್ಲಿ ಇದು ತದ್ವಿರುದ್ದವಾಗಿದೆ. ಈ ತಾರತಮ್ಯ ಸರಿಪಡಿಸಲು ಸರಕಾರ ಗಮನಹರಿಸ ಬೇಕೆಂದರು.
 ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್, ಅಹಮದ್‌ಬಾವ, ಡಾ. ಲೀಲಾವತಿ, ಯಾದ್‌ಗಾರ್ ಇಬ್ರಾಹಿಂ, ಶಾರದ ಗುರುಮೂರ್ತಿ, ರೇಖಾ, ಅಬ್ಬುಬಕ್ಕರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.