ಹಾಸನ

ಸಾಹಿತ್ಯ ಕ್ಷೇತ್ರದ ಧ್ರುವತಾರೆ ಜಿನುವಾ ಅಚಿಬೆ ಚಿಂತನೆ ರೋಮಾಂಚನ

Published On :

ಕನ್ನಡಪ್ರಭ ವಾರ್ತೆ  ಹಾಸನ  ಏ. 16
ಆಫ್ರಿಕಾದ ದೊಡ್ಡ ಲೇಖಕ, ಚಿಂತಕ ಮತ್ತು ಸಾಹಿತ್ಯ ಕ್ಷೇತ್ರದ ಧ್ರುವತಾರೆ ಜಿನುವಾ ಅಚಿಬೆ ಸಾಹಿತ್ಯಕ್ಷೇತ್ರದಲ್ಲಿ ಸಾಧಿಸಿದ ಸಾಧನೆ ಹಾಗೂ ಅವರ ಚಿಂತನೆಗಳು ರೋಮಾಂಚನ ಉಂಟುಮಾಡುವಂತಹವು ಎಂದು ಪ್ರಸಾರಾಂಗ ನಿರ್ದೇಶಕ, ಸಾಹಿತಿ ಸಿ.ನಾಗಣ್ಣ  ತಿಳಿಸಿದರು.
 ನಗರದ ಎ.ವಿ.ಕಾಂತಮ್ಮ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ 20ನೇ ದತ್ತಿ ಉಪನ್ಯಾಸ ಉದ್ಘಾಟಿಸಿ ಮಾತನಾಡಿದ ಅವರು, ಕಗ್ಗತ್ತಲ ಖಂಡವಾದ ಆಫ್ರಿಕಾದ ಜನಗಳನ್ನು ವಿವೇಕಿಗಳನ್ನಾಗಿ, ವಿದ್ಯಾವಂತರನ್ನಾಗಿ ಮಾಡುವುದು ತಮ್ಮ ಹೊಣೆಗಾರಿಕೆಯೆಂದು ಬಿಳಿಯರು ಹೇಳುತ್ತಿದ್ದ ಸುಳ್ಳನ್ನು, ಸುಳ್ಳು ಎಂದು ಸಾರುವುದು ಇವರ ಕೃತಿಗಳ ಮುಖ್ಯ ಉದ್ದೇಶವಾಗಿತ್ತು ಎಂದರು.
 ಬಿಳಿಯರು ತಮ್ಮ ಕೃತಿಗಳಲ್ಲಿ ಆಫ್ರಿಕಾದವರನ್ನು ಅನುಷಂಗಿಕ ಪಾತ್ರಗಳಾಗಿ ಚಿತ್ರಣ ಮಾಡುತ್ತಿದ್ದರು.  ಆದರೆ ಸೃಜನಶೀಲ ಲೇಖಕರಾದ ಅಚಿಬೆ ತಮ್ಮ ಸೃಜನಶೀಲತೆಯನ್ನು ಗಂಭೀರವಾಗಿ ಚಿಂತಿಸಿ, ಆ ಭಾವಗಳನ್ನು ತಮ್ಮ ಕೃತಿಯಲ್ಲಿ ಬಿಂಬಿಸಿದರು ಎಂದು ನುಡಿದರು.
 ಅಚಿಬೆ ಎಷ್ಟು ಬರೆದರೂ ಮುಗಿಯದ ಆಫ್ರಿಕಾ ಸಾಹಿತ್ಯದ ನಾನಾ ಮಜಲುಗಳನ್ನು ತಮ್ಮ ಹಲವಾರು ಕಾದಂಬರಿ, ಕತೆ, ಕವನಗಳ ಮೂಲಕ ಪರಿಚಯಿಸುವ ಪ್ರಯತ್ನ ಮಾಡಿದ್ದಾರೆ. ಎಲ್ಲೆಲ್ಲಿ ಸರ್ವಾಧಿಕಾರತ್ವ, ನಿರಂಕುಶ ಪ್ರಭುತ್ವ ಕಾಣಿಸುತ್ತದೆಯೋ ಅಲ್ಲೆಲ್ಲ ಸಮಾನತೆಯ ಕಹಳೆ ಊದಿದರು ಎಂದು ತಿಳಿಸಿದರು.
 ಅವರ ಮೊದಲ ಕೃತಿ ಝ್ಝಿಟ್ಜಿಡ ್ಟಜಿ ಜಿಛಟಟ ಆಠಛ್ಠಡಿ ಮೂಲಕ ಅಮೂಲ್ಯ ಸಂದೇಶಗಳನ್ನು ನೀಡಿದ್ದಾರೆ. ಇದು 50 ಭಾಷೆಗೆ ಭಾಷಾಂತರಗೊಂಡಿದೆ ಅಲ್ಲದೆ 45 ದಶಲಕ್ಷ ಪುಸ್ತಕಗಳ ದಾಖಲೆ ಮಾರಾಟವಾಗಿದೆ ಎಂದರು. ಕಾಲೇಜಿನ ಪ್ರಾಂಶುಪಾಲೆ ಡಾ.ಜೆ.ಶೈಲಜಕುಮಾರಿ ಮಾತನಾಡಿ, ಮಲೆನಾಡಿನ ಭಾಗದಲ್ಲಿ ಹೆಣ್ಣುಮಕ್ಕಳಿಗೆ ಉನ್ನತಮಟ್ಟದ ಶಿಕ್ಷಣವನ್ನು ಹಲವಾರು ದಶಕಗಳಿಂದ ನೀಡುತ್ತಾ, ರಜತ ಮಹೋತ್ಸವ ಆಚರಿಸಿಕೊಂಡು ತನ್ನದೇ ಆದ ವೈಶಿಷ್ಟತೆ ಉಳಿಸಿಕೊಂಡಿರುವ ಕಾಲೇಜಿನ ಇತಿಹಾಸವನ್ನು ಪರಿಚಯಿಸಿದರು.
 ದಿ. ಡಾ.ಹಾ.ಮಾ.ನಾಯಕರ ಸಲಹೆ ಮತ್ತು ಉಪನ್ಯಾಸದಿಂದ ಪ್ರಾರಂಭವಾದ ಇಂತಹ ಅರ್ಥಪೂರ್ಣ ಕಾರ್ಯಕ್ರಮ ಸುಧೀರ್ಘ 19 ವರ್ಷಗಳನ್ನು ನಿರಂತರವಾಗಿ ಪೂರೈಸಿ, 20ನೇ ವರ್ಷವನ್ನು ಸಂಭ್ರಮದಿಂದ ಆಚರಿಸಿಕೊಳ್ಳುತ್ತಿರುವುದು ಸಂತೋಷದ ವಿಷಯವೆಂದರು. ಈ ಕಾಲೇಜು ಶಿಸ್ತು ಮತ್ತು ಉತ್ತಮ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡುತ್ತಿದ್ದು, ಕಾಲೇಜು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿರುವುದು ಹೆಮ್ಮೆಯ ವಿಷಯವೆಂದರು. ಅಧ್ಯಕ್ಷತೆ ವಹಿಸಿದ್ದ ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿ ಕಾರ್ಯದರ್ಶಿ ಆರ್.ಟಿ.ದ್ಯಾವೇಗೌಡರು ಮಾತನಾಡಿದರು. ಕಾಲೇಜಿನ ಬೋಧಕ ವರ್ಗ, ಬೋಧಕೇತರರು, ವಿದ್ಯಾರ್ಥಿನಿಯರುಇದ್ದರು. ರಾಧಿಕಾ ಪ್ರಾರ್ಥಿಸಿದರು. ಬಿ.ಎಸ್.ದೇವರಾಜು ಸ್ವಾಗತಿಸಿದರು. ಎಸ್.ಆರ್.ಹೇಮಾವತಿ ವಂದಿಸಿದರು. ಸೀ.ಚ.ಯತೀಶ್ವರ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.