ಹಾಸನ

ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಸಮಾನ ಹಕ್ಕು- ನ್ಯಾ. ಲೋಕಪ್ಪ

Published On :

ಕ.ಪ್ರ. ವಾರ್ತೆ  ಸಕಲೇಶಪುರ  ಏ.16
ಭಾರತೀಯ ಸಂವಿಧಾನ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳನ್ನು ನೀಡಿದೆ ಎಂದು ಹಿರಿಯ ನ್ಯಾಯಾಧೀಶ ಲೋಕಪ್ಪ ಹೇಳಿದರು.
 ಹಾಡ್ಯ ಸುಬ್ಬೇಗೌಡ ಪುರಭವನದಲ್ಲಿ ತಾಲೂಕು ಕಾನೂನು ಸಮಿತಿ ಏರ್ಪಡಿಸಿದ್ದ ಕಾನೂನು ಮಾಹಿತಿ ಶಿಬಿರ ಹಾಗೂ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
 ಸರ್ವರಿಗೂ ನ್ಯಾಯ ಎಂಬ ನಿಟ್ಟಿನಲ್ಲಿ ಕಾನೂನು ಸೇವಾ ಸಮಿತಿಯಿಂದ ಉಚಿತ ಕಾನೂನು ಅರಿವು ಶಿಬಿರಗಳನ್ನು ಏರ್ಪಡಿಸಲಾಗುತ್ತಿದೆ. ಆದ್ದರಿಂದ ಸಾರ್ವಜನಿಕರು ಇಂತಹ ಶಿಬಿರಗಳ ಉಪಯೋಗ ಪಡೆಯ ಬೇಕು ಎಂದು ತಿಳಿಸಿದರು.  
 ಹಿರಿಯ ವಕೀಲ ಪರಮೇಶ್ ಕಂದಾಯ ದಾಖಲಾತಿ ಬಗ್ಗೆ ಮಾಹಿತಿ ನೀಡಿದರು. ನಮ್ಮ ಆಸ್ತಿಯ ಒಡೆತನ ತೋರಿಸ ಬೇಕಾದರೆ ಕಂದಾಯ ದಾಖಲಾತಿಗಳು ಅಗತ್ಯವಾಗಿ ಬೇಕಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಇದರ ಬಗ್ಗೆ ಗಮನ ಹರಿಸಬೇಕೆಂದು ಹೇಳಿದರು.
 ಪಹಣಿಯಲ್ಲಿ ಯಾವುದಾದರೂ ತಪ್ಪುಗಳಾದರೆ ನಮಗೆ ಅದು ಗೊತ್ತಾಗುವುದಿಲ್ಲ. ನಂತರ ನಾವು ಅದನ್ನು ಸರಿಪಡಿಸಲು ಹೋರಾಡ ಬೇಕಾಗುತ್ತದೆ. ಆದ್ದರಿಂದ ಪ್ರತಿವರ್ಷ ನಾವು ಪಹಣಿ ತೆಗೆದುಕೊಳ್ಳಬೇಕು ಎಂದರು. ಇದೇ ರೀತಿ ಪುರಸಭೆಗೆ ನಾವು ಆಸ್ತಿ ವಿವರ ಸರಿಯಾಗಿ ನೀಡಬೇಕು. ಇಲ್ಲದಿದ್ದಲ್ಲಿ ನಾವೇ ತೊಂದರೆ ಅನುಭವಿಸ ಬೇಕಾಗುತ್ತದೆ ಎಂದು ತಿಳಿಸಿದರು.
 ವಕೀಲ ಷಣ್ಮುಖ ಮಹಿಳೆಯರಿಗೆ ಕಾನೂನು ನೆರವು ವಿಷಯದ ಬಗ್ಗೆ ಮಾತನಾಡಿ, ದೇಶದಲ್ಲಿ ಪುರುಷ ಮತ್ತು ಸ್ತ್ರೀಯರಿಗೆ ಸಮಾನ ಹಕ್ಕುಗಳಿವೆ.1937ರಲ್ಲಿ ಮಹಿಳೆಯರ ಹಕ್ಕುಗಳ ರಕ್ಷಣೆಗಾಗಿ ವಿಶೇಷ ಕಾನೂನು ಜಾರಿಗೆ ಬಂದಿತು. 1948 ರಲ್ಲಿ ಡಾ. ಅಂಬೇಡ್ಕರ್ ಈ  ಕಾನೂನಿಗೆ ತಿದ್ದುಪಡಿ ತಂದರು. ಇದರಿಂದ ಮಹಿಳೆಯರಿಗೆ ಅನುಕೂಲವಾಯಿತು. ಮಹಿಳೆಯರ ಮೇಲೆ ಯಾವುದಾದರೂ ದೂರು ದಾಖಲಾದರೆ ಮಹಿಳಾ ಪೊಲೀಸರೇ  ಸೂರ್ಯಾಸ್ತದ ಒಳಗೆ ಮಹಿಳೆಯರನ್ನು ಬಂಧಿಸಬೇಕು ಎಂದು ವಿಷಯದ ಬಗ್ಗೆ ಮಾಹಿತಿ ನೀಡಿದರು.
 ವಕೀಲ ಪೀತಾಂಬರ್, ಮೋಟಾರು ವಾಹನ ಕಾಯ್ದೆ ಬಗ್ಗೆ  ಮಾಹಿತಿ ನೀಡಿದರು. ನ್ಯಾಯಾಧೀಶ ರಾಘವೇಂದ್ರ ಶೆಟ್ಟಿಗಾರ್, ವಕೀಲರ ಸಂಘದ ಅಧ್ಯಕ್ಷ ಆರ್.ಎನ್ ಕೃಷ್ಣಮೂರ್ತಿ, ಸಿಡಿಪಿಒ ಚಂದ್ರಬಾಬು, ಪುರಸಭೆ ಮುಖ್ಯಾಧಿಕಾರಿ ಬಸವರಾಜು ಶಾರದಾ ಗುರುಮೂರ್ತಿ, ಕಲ್ಪನಾ ಕೀರ್ತಿ ಇನ್ನೂ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.