ಟ್ರ್ಯಾಕ್ಟರ್ ಚಕ್ರ ಹರಿದು ಬಾಲಕ ಸಾವು
ಬೇಲೂರು: ಟ್ರ್ಯಾಕ್ಟರ್ ಚಕ್ರ ಹರಿದು ಬಾಲಕ ಸಾವನ್ನಪ್ಪಿರುವ ಘಟನೆ ಆಲದಹಳ್ಳಿಯ ಸಮೀಪ ಮಂಗಳವಾರ ನಡೆದಿದೆ. ತಾಲೂಕಿನ ಮಾದಿಹಳ್ಳಿ ಹೋಬಳಿ, ಆಲದಹಳ್ಳಿ ಗ್ರಾಮದ ವಾಸಿ ದೊಡ್ಡೇಗೌಡರ ಅಣ್ಣನ ಪುತ್ರ ಎ.ಜಿ.ಪವನ್ (14) ಸಾವನ್ನಪ್ಪಿದ ದುರ್ದೈವಿ. ಪವನ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅಡಗೂರು ಕೆರೆಯಿಂದ ಮಣ್ಣು ತುಂಬಿಕೊಂಡು ಆಲದಹಳ್ಳಿ ಜಮೀನಿಗೆ ಅನ್ಲೋಡ್ ಮಾಡಲು ಕಾಡೇಗೌಡರ ಜಮೀನಿನ ರಸ್ತೆಯ ನೇರದಲ್ಲಿ ಟ್ರ್ಯಾಕ್ಟರ್ ಚಾಲಕ ಹರೀಶ ನಿರ್ಲಕ್ಷ್ಯತೆಯಿಂದ ಪವನ್ಗೆ ಡಿಕ್ಕಿ ಹೊಡೆದ ಪರಿಣಾಮ ಪವನ್ ಎದೆಯ ಮೇಲೆ ಚಕ್ರ ಹರಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಚಿಕ್ಕಪ್ಪ ದೊಡ್ಡೇಗೌಡರು ರವರು ಹಳೇಬೀಡು ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಬೈಕ್ಗಳ ಡಿಕ್ಕಿ; ಸವಾರರ ಸಾವು
ಬೇಲೂರು: ಬೈಕ್ಗಳ ಮುಖಾಮುಖಿ ಡಿಕ್ಕಿ ಪರಿಣಾಮ ಬೈಕ್ ಸವಾರರು ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ. ತಾಲೂಕಿನ ಕಸಬಾ ಹೋಬಳಿ, ಗೋಟ್ರವಳ್ಳಿ ಗ್ರಾಮದ ವಾಸಿ ಧರ್ಮಾನಾಯ್ಕ ರವರ ಪುತ್ರ ಹರೀಶನಾಯ್ಕ ಹಾಗೂ ಸ್ನೇಹಿತ ಆನಂದ್ ಸಾವನ್ನಪ್ಪಿದ ದುರ್ದೈವಿ. ಇವರಿಬ್ಬರು ಬಜಾಜ್ ಡಿಸ್ಕವರಿ ಮೋಟಾರ್ ಬೈಕ್ನಲ್ಲಿ ಹಾಸನಕ್ಕೆ ಹೋಗಿ ವಾಪಸ್ಸು ಹಾರೋಹಳ್ಳಿ ಗಡಿಯ ಹತ್ತಿರ ಹಾಸನ-ಬೇಲೂರು ರಸ್ತೆಯಲ್ಲಿ ರಾತ್ರಿ ಸುಮಾರು 10.45ರಲ್ಲಿ ಬರುತ್ತಿದ್ದಾಗ ಬೇಲೂರು ಕಡೆಯಿಂದ ಬೈಕ್ ಸವಾರ ನಿರ್ಲಕ್ಷ್ಯತೆಯಿಂದ ಹರೀಶನಾಯ್ಕ ಮತ್ತು ಆನಂದರವರು ಹೋಗುತ್ತಿದ್ದ ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ ಹರೀಶನಾಯ್ಕ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಆನಂದನನ್ನು ಹೆಚ್ಚಿನ ಚಿಕಿತ್ಸೆಗೆ ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಆನಂದ ಸಾವನ್ನಪ್ಪಿದ್ದಾರೆ.
ಜೆಡಿಎಸ್ಗೆ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರು
ಸಕಲೇಶಪುರ: ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಜೆಡಿಎಸ್ಗೆ ಸೇರ್ಪಡೆಗೊಂಡ 50 ಕ್ಕೂ ಹೆಚ್ಚು ಕಾರ್ಯಕರ್ತರನ್ನು ಶಾಸಕ ಎಚ್.ಕೆ ಕುಮಾರಸ್ವಾಮಿ ಬರಮಾಡಿಕೊಂಡರು. ಪಟ್ಟಣದ ಲಕ್ಷ್ಮೀಪುರಂ ಬಡಾವಣೆಯಲ್ಲಿರುವ ತಮ್ಮ ನಿವಾಸದಲ್ಲಿ ಜೆಡಿಎಸ್ಗೆ ಸೇರ್ಪಡೆಗೊಂಡ ನೂತನ ಕಾರ್ಯಕರ್ತರಿಗೆ ಶಾಸಕ ಎಚ್.ಕೆ.ಕುಮಾರಸ್ವಾಮಿರವರು ಪಕ್ಷದ ಶಲ್ಯ ಹಾಕಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಜೆಡಿಎಸ್, ಕಾರ್ಯಕರ್ತರ ಪಕ್ಷವಾಗಿದ್ದು ಬೇರೆ ಪಕ್ಷಗಳಿಂದ ಆಗಮಿಸಿರುವ ಕಾರ್ಯಕರ್ತರು ಹಾಗೂ ಹಳೆಯ ಕಾರ್ಯಕರ್ತರುಗಳ ನಡುವೆ ನಾವು ಯಾವುದೇ ರೀತಿಯ ತಾರತಮ್ಯ ಮಾಡುವುದಿಲ್ಲ ಎಂದರು. ಕಾಂಗ್ರೆಸ್ ಮುಖಂಡ ಡಿ.ಸಿ.ಸಣ್ಣಸ್ವಾಮಿರವರ ಹಿಂಬಾಲಕರಾದ ಉದೇವಾರ ಪಂಚಾಯತಿಯ ಶೇಖರ್ ಮತ್ತು ಸಂಗಡಿಗರು ಹಾಗೂ ಬಿಜೆಪಿ ಜಿಲ್ಲಾ ಸ್ಲಂ ಮೋರ್ಚಾ ಕಾರ್ಯದರ್ಶಿಯಾದ ವಕೀಲ ಹೇಮಂತ್ಕುಮಾರ್, ಶಿವಕುಮಾರ್, ಬಿಜೆಪಿಯ ಪುರಸಭಾ ನಾಮ ನಿರ್ದೇಶಿತ ಮಾಜಿ ಸದಸ್ಯ ನಾಗಾರಾಜ್, ಗಣೇಶ್ ಉಮ್ಮತ್ತೂರು ಹಾಗೂ ಇನ್ನು ಅನೇಕ ಮಂದಿ ಈ ಸಂಧರ್ಭದಲ್ಲಿ ಜೆಡಿಎಸ್ಗೆ ಸೇರ್ಪಡೆಗೊಂಡರು. ಜೆಡಿಎಸ್ ಮುಖಂಡರಾದ ಜಾತಹಳ್ಳಿ ಪುಟ್ಟಸ್ವಾಮಿಗೌಡ, ಸ.ಭಾ ಭಾಸ್ಕರ್, ಜೈಭೀಮ ಮಂಜು, ಈರಯ್ಯ ಮುಂತಾದವರು ಇದ್ದರು.
ನೀತಿ ಸಂಹಿತೆ ಪಾಲಿಸಲು ತಾಕೀತು
ಸಕಲೇಶಪುರ: ವಿದಾನಸಭಾ ಚುನಾನಣೆಯಲ್ಲಿ ಪ್ರಚಾರ ಪತ್ರಗಳ ಮುದ್ರಣ ಹಾಗೂ ಎಲ್ಲ ನಿಖರ ಮಾಹಿತಿಯನ್ನು ಸಂಬಂಧಪಟ್ಟ ಚುನಾವಣಾ ಅಧಿಕಾರಿಗೆ ನೀಡಬೇಕು ಎಂದು ಚುನಾವಣಾಧಿಕಾರಿಯೂ ಆಗಿರುವ ಉಪವಿಭಾಗಾಧಿಕಾರಿ ಶ್ರೀದೇವಿ ತಿಳಿಸಿದ್ದಾರೆ. ಮಂಗಳವಾರ ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಾಲೂಕಿನ ಮುದ್ರಕರ ಸಂಘದ ಸದಸ್ಯರೊಂದಿಗೆ ಮಾತನಾಡಿದ ಅವರು, ಮುದ್ರಕರು ದಿನ ನಿತ್ಯ ತಾವೂ ಮುದ್ರಿಸುವ ಕರಪತ್ರಗಳಲ್ಲಿ ಮುದ್ರಿತ ಪ್ರತಿಗಳ ಸಂಖ್ಯೆ, ದಿನಾಂಕ ಮತ್ತು ವಿಳಾಸವನ್ನು ಕಡ್ಡಾಯವಾಗಿ ನಮೂದಿಸಬೆಕು ಹಾಗೂ ಅಭ್ಯರ್ಥಿಗಳಿಂದ ಘೋಷಣ ಪತ್ರ ಪಡೆದಿರಬೇಕು ಎಂದರು. ಮುದ್ರಿಸಲಾದ ಕರಪತ್ರದ 4 ಪ್ರತಿಗಳು ಮತ್ತು ಘೋಷಣಾ ಪತ್ರದೊಂದಿಗೆ ಸಂಬಂಧಪಟ್ಟ ಅಧಿಕಾರಿಗೆ ದಿನನಿತ್ಯ ಒದಗಿಸಬೇಕೆಂದು ತಿಳಿಸಿದರು. ಸಭೆಯಲ್ಲಿ ಚುನಾವಣಾ ನೋಡಲ್ ಅಧಿಕಾರಿ ಮಂಜುನಾಥ್, ತಹಸೀಲ್ದಾರ್ ಮಂಜುನಾಥ್ ಇದ್ದರು.
ಬೋವಿ ಜನಾಂಗದ ಕಡೆಗಣನೆ: ಟೀಕೆ
ಅರಸೀಕೆರೆ: ಕ್ಷೇತ್ರದಲ್ಲಿ 12 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಬೋವಿ ಜನಾಂಗಕ್ಕೆ ಯಾವುದೇ ರಾಜಕೀಯ ಸ್ಥಾನಮಾನ ನೀಡದ ಕಾರಣ ಭಾರತೀಯ ಅಂಬೇಡ್ಕರ್ ಜನತಾಪಕ್ಷ (ಬಿಎಜೆಪಿ) ದಿಂದ ಅಭ್ಯರ್ಥಿಯಾಗಿ ಸ್ಥಳೀಯ ವಿಧಾನ ಸಭೆ ಚುನಾವಣೆಗೆ ಸ್ಪರ್ಧಿಸಲಿದ್ದೇನೆ ಎಂದು ಟಿ.ಕುಮಾರಸ್ವಾಮಿ ತಿಳಿಸಿದರು. ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದ ಮುಖಂಡರಾದ ಹನುಮಂತ ಭೋವಿ, ಬೊಮ್ಮೇನಹಳ್ಳಿ ಮಂಜುನಾಥ, ರಾಮು, ಜಯಣ್ಣ, ಶಿವಕುಮಾರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

