ಜವರೇಗೌಡರಿಗೆ 'ಕೈ' ನಾಯಕರಿಂದ ಬಲೆ
ಕ.ಪ್ರ. ವಾರ್ತೆ ಹಾಸನ ಏ. 19
ಒಂದು ದಿನದ ಹಿಂದಷ್ಟೇ ಜೆಡಿಎಸ್ ತೊರೆದ ಎಚ್.ಕೆ. ಜವರೇಗೌಡರನ್ನು ತಮ್ಮ ಪಕ್ಷಕ್ಕೆ ಸೆಳೆದುಕೊಳ್ಳಲು ಕಾಂಗ್ರೆಸ್ ಮುಖಂಡರು ಯತ್ನಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜವರೇಗೌಡರ ನಿವಾಸಕ್ಕೆ ಶುಕ್ರವಾರ ಕಾಂಗ್ರೆಸ್ ಮುಖಂಡರ ಹಿಂಡೇ ಭೇಟಿ ನೀಡಿತ್ತು.
ಜಿಲ್ಲಾ ಕಾಂಗ್ರೆಸ್ ಚುನಾವಣಾ ವೀಕ್ಷಕ ರಾಘವನ್ ಸೇರಿದಂತೆ ಜಿಲ್ಲೆಯ ಹತ್ತಾರು ಮುಖಂಡರು ಭೇಟಿ ನೀಡಿ, ಪಕ್ಷಕ್ಕೆ ಆಹ್ವಾನಿಸಿದರು. ನಂತರ ಮುಖಂಡರು ಕೆಲ ಸಮಯ ಜವರೇಗೌಡರೊಂದಿಗೆ ಮಾತುಕತೆ ನಡೆಸಿದರು.
ನಂತರ ಮಾತನಾಡಿದ ಜವರೇಗೌಡರು, ಎರಡು ದಿವಸದಲ್ಲಿ ಕಾಂಗ್ರೆಸ್ ಸೇರಬೇಕೇ ಬೇಡವೇ ಅಥವಾ ರಾಜಕೀಯದಿಂದಲೇ ದೂರ ಉಳಿಯುವ ಬಗ್ಗೆ ತೀರ್ಮಾನ ಮಾಡಲಾಗುವುದು. ಸಕ್ರಿಯ ರಾಜಕಾರಣದಲ್ಲಿ ಮುಂದುವರೆಯಲು ನನ್ನ ಬೆಳವಣಿಗೆಗೆ ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡರೇ ಕಾರಣ ಎಂದು ಇದೇ ವೇಳೆ ಸ್ಮರಿಸಿಕೊಂಡರು. ಬೇಲೂರು ಕ್ಷೇತ್ರದಲ್ಲಿ ಪ್ರಬಲ ಆಕಾಂಕ್ಷಿಯಾಗಿ ಕೊನೆ ವೇಳೆ ಅನಿವಾರ್ಯ ಕಾರಣಗಳಿಂದ ಕೈತಪ್ಪಿ ಹೋಯಿತು. ಕಾಂಗ್ರೆಸ್ ಸಂಸದರು ಆದ ರಾಘವನ್ ಈಗಾಗಲೇ ಮನವಿ ಮಾಡಿ ಪಕ್ಷಕ್ಕೆ ಸ್ವಾಗತಿಸಿದ್ದಾರೆ. ಇನ್ನು ಕೂಡ ಕಾಂಗ್ರೆಸ್ಗೆ ಸೇರುವ ನಿರ್ಧಾರ ಮಾಡಿಲ್ಲ. ಎರಡು ದಿವಸಗಳಲ್ಲಿ ಅಭಿಮಾನಿಗಳ ಸಲಹೆ ಕೇಳಿ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.
ಕಾಂಗ್ರೆಸ್ ವೀಕ್ಷಕ ರಾಘವನ್, ಹಂಗಾಮಿ ಜಿಲ್ಲಾಧ್ಯಕ್ಷರಾದ ಚಂದ್ರಕಲಾ, ಉಪಾಧ್ಯಕ್ಷ ನಾರಾಯಣಗೌಡ, ಬೇಲೂರು ಕ್ಷೇತ್ರದ ಶಾಸಕ ರುದ್ರೇಶ್ ಗೌಡ, ಜಗನ್ನಾಥ್, ವಿದ್ಯಾಶಂಕರ್, ಎಚ್.ಪಿ.ಮೋಹನ್, ಡಿ. ಮಲ್ಲೇಶ್, ವೈ.ಪಿ. ರಾಜೇಗೌಡ, ಕಾರ್ಲೆ ಇಂದ್ರೇಶ್, ಮಹಿಳಾ ಘಟಕದ ಅಧ್ಯಕ್ಷರಾದ ಲಲಿತಮ್ಮ, ಯೂತ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್, ರಂಗನಾಥ್, ವೆಂಕಟೇಗೌಡ, ಬಾಲಶಂಕರ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

