ಸಂಭ್ರಮದ ಹೋತನಕಲ್ಲಮ್ಮ ರಥೋತ್ಸವ
ಅರಸೀಕೆರೆ: ಜಾವಗಲ್ ಹೋಬಳಿ, ದೇಶಾಣಿ ಗ್ರಾಮದ ಹೋತನ ಕಲ್ಲಮ್ಮ ದೇವಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ನೆರವೇರಿತು. ಸುತ್ತಮುತ್ತಲ ಗ್ರಾಮದ ಸಾವಿರಾರು ಭಕ್ತರು ಆಗಮಿಸಿ ಕಳೆದ 5 ದಿನಗಳಿಂದ ನಾನಾ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.
ಜಾತ್ರಾ ಮಹೋತ್ಸವ ಅಂಗವಾಗಿ ಏ.15ರ ಸೋಮವಾರ ಮದುವಣಿಗೆ ಶಾಸ್ತ್ರ, 16 ರಂದು ವೀರಶೈವ ಮಂಡಳಿಯಿಂದ ಬಾಯಿಬೀಗ, ಬೇವಿನ ಸೀರೆ, 17ರಂದು ಇತರೆ ಭಕ್ತಾದಿಗಳಿಂದ ಬಾಯಿಬೀಗ ಬೇವಿನಸೀರೆ, ಪಂಚಾಮೃತ ಅಭಿಷೇಕ ರಾತ್ರಿ 8ಕ್ಕೆ ಉತ್ಸವ ಕಾರ್ಯಕ್ರಮ ಹಾಗೂ ಬೇಲದ ಕೆರೆ ಸಿದ್ದರಾಮೇಶ್ವರ ಸ್ವಾಮಿ ಹಾಗೂ ಸಿಂಗಟಗೆರೆ ಕಣುವಮ್ಮ ದೇವಿ ಉತ್ಸವ ವಿಜೃಂಭಣೆಯಿಂದ ನೆರವೇರಿದವು.
19 ರಂದು ಮುಂಜಾನೆಯಿಂದಲೇ ಹೋತನಕಲ್ಲಮ್ಮ ವಿಶೇಷ ಪೂಜಾ ಕೈಂಕರ್ಯ ನಂತರ ರಥಮಂಟಪದಲ್ಲಿ ಕುಳ್ಳರಿಸಿ ವಿವಿಧ ಬಣ್ಣದ ಬಟ್ಟೆಗಳಿಂದ ಹಾಗೂ ಹೂಗಳಿಂದ ರಥವನ್ನು ಶೃಂಗರಿಸಿ ರಥಕ್ಕೆ ಪೂಜೆ ಸಲ್ಲಿಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ನಾನಾ ಭಾಗಗಳಿಂದ ಆಗಮಿಸಿದ್ದ ಹಾಗೂ ಸುತ್ತಮುತ್ತಲ ಹಲವು ಗ್ರಾಮಗಳ ಭಕ್ತರು ರಥದ ಕಳಸಕ್ಕೆ ಬಾಳೆಹಣ್ಣು, ದವನ ಎಸೆದು ಗಾಲಿಗಳಿಗೆ ತೆಂಗಿನಕಾಯಿ ಒಡೆದು ಭಕ್ತಿಭಾವ ಪ್ರದರ್ಶಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

