ಹಾಸನ

ಯುವಕರೇ ದೇಹದಾರ್ಢ್ಯ ತರಬೇತಿ ಪಡೆಯಿರಿ

Published On :

ಅರಸೀಕೆರೆ: ಯುವಕರು ಆರೋಗ್ಯವಂತರಾಗಿ ದೃಢಕಾಯರಾಗಲು ದೇಹದಾರ್ಢ್ಯ ತರಬೇತಿ ಪಡೆಯುವ ಅಗತ್ಯವಿದೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಅಭಿಪ್ರಾಯಪಟ್ಟರು.
ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಅಸೋಸಿಯೇಷನ್ ಆಫ್ ಬಾಡಿ ಬಿಲ್ಡರ್ಸ್ ಮತ್ತು ವ್ಯಕ್ತಾಸ್ ಮಲ್ಟಿ ಜಿಮ್ ಆಶ್ರಯದಲ್ಲಿ ಇತ್ತೀಚೆಗೆ ನಡೆದ ದೇಹದಾರ್ಢ್ಯ ಜಿಲ್ಲಾ ಸ್ಪರ್ಧೆಯ ಮಿಸ್ಟರ್ ವ್ಯಕ್ತಾಸ್ ಪ್ರಶಸ್ತಿ-2013 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉತ್ಸಾಹಿ ಯುವಕರಿಗೆ ಕ್ರೀಡೆಗಳಿಗೆ ಹೆಚ್ಚು ಪ್ರೋತ್ಸಾಹ ನೀಡಿದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಕೀರ್ತಿ ತರುವಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ಅರಸೀಕೆರೆಯಂತಹ ಪಟ್ಟಣದಲ್ಲಿ ದೇಹದಾರ್ಢ್ಯದಂತಹ ಸ್ಪರ್ಧೆಗಳು ನಡೆಯುತ್ತಿರುವುದು ಶ್ಲಾಘನೀಯವಾಗಿದ್ದು ಇದಕ್ಕೆ ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರೋತ್ಸಾಹ ನೀಡಿದಲ್ಲಿ ಕ್ರೀಡೆಗಳಲ್ಲಿ ಸ್ಥಳಿಯ ಪ್ರತಿಭೆಗಳು ಹೊರ ಹೊಮ್ಮಲು ಸಾದ್ಯವಾಗುತ್ತದೆ. ಪ್ರತಿಭಾವಂತ ಕ್ರಿಡಾಳುಗಳಿಗೆ ಪ್ರಾಯೋಜಕರು ಬೆನ್ನು ತಟ್ಟುವುದರ ಮೂಲಕ ಅರ್ಥಿಕ ಸಹಕಾರ ಮಾಡಿದಲ್ಲಿ ತಾಲೂಕು ಸೇರಿದಂತೆ ಜಿಲ್ಲೆಗೆ ಹೆಸರು ತರುವಲ್ಲಿ ಯಾವುದೇ ಸಂಶಯವಿಲ್ಲ ಎಂದ ಅವರು ತಾವು ಯಾವುದೇ ರೀತಿಯ ಸಹಕಾರ ನೀಡಲು ಸಿದ್ಧ ಎಂದು ಘೋಷಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪದಕ ವಿಜೇತ ಪೇದೆ ಗಿರೀಶ್ ಇವರಿಗೆ ಸನ್ಮಾನಿಸಲಾಯಿತು. ಎಪಿಎಂಸಿ ಅಧ್ಯಕ್ಷ ಮುರುಂಡಿ ಶಿವಯ್ಯ, ವ್ಯಕ್ತಾಸ್ ಮಲ್ಟಿ ಜಿಮ್ ವ್ಯವಸ್ಥಾಪಕ ನಿರ್ದೇಶಕ ವೀರೇಂದ್ರ, ಉದ್ಯಮಿ ಅರುಣ್ಕುಮಾರ್, ಕೆವಿಎನ್ ನಿರ್ವಾಣಸ್ವಾಮಿ, ಪುರಸಭೆ ಮಾಜಿ ಅಧ್ಯಕ್ಷ ಸಿದ್ದರಾಮಶೆಟ್ಟಿ, ಆದರ್ಶ ಲ್ಯಾಬ್ ಜಗನ್ನಾಥ ರೈ ಉಪಸ್ಥಿತರಿದ್ದರು.  
ಸ್ಪರ್ಧಾ ವಿಜೇತರು: ಮಿಸ್ಟರ್ ವ್ಯಕ್ತಾಸ್ ಪ್ರಶಸ್ತಿ-2013 ವಿಜೇತ ಮಧು, ನ್ಯೂ ಲೈಫ್ ಸ್ಟ್ಟೈಲ್ ಮಲ್ಟಿ ಜಿಮ್, ಹಾಸನ.
ಮೋಸ್ಟ್ ಮಸ್ಕ್ಯುಲರ್ ಮ್ಯಾನ್ ಪ್ರಶಸ್ತಿ ವಿಜೇತ ಅಭಿಜಿತ್. ಫಿಟ್ ಅಂಡ್ ಫೈನ್ ಮಲ್ಟಿ ಜಿಮ್, ಚನ್ನರಾಯಪಟ್ಟಣ. 50 ಕೆಜಿ ವಿಭಾಗದ ಪ್ರಥಮ ಬಹುಮಾನ ಎಂ ಕಾರ್ತಿಕ್, ವ್ಯಕ್ತಾಸ್ ಮಲ್ಟಿ ಜಿಮ್ ಅರಸೀಕೆರೆ. ದ್ವೀತಿಯ ಬಹುಮಾನ ವಿ.ಕೆ.ನಭೀನ್, ಐಸಿರಿ ಜಿಮ್ ಹಾಸನ. ದ್ವೀತಿಯ ಬಹುಮಾನ ಮಹೇಶ್ ಡಿ.ಹೆಚ್ , ಕ್ಲಾಸಿಕ್ ಜಿಮ್, ಹಾಸನ.
60 ಕೆಜಿ ವಿಭಾಗ: ಪ್ರಥಮ ಬಹುಮಾನ ಯುವರಾಜ್ ಐಸಿರಿ ಜಿಮ್ ಹಾಸನ. ದ್ವೀತಿಯ ಬಹುಮಾನ ರಘು , ಭರತ್ ಜಿಮ್ ಹಾಸನ. ತೃತಿಯ ಬಹುಮಾನ ಇಮ್ರಾನ್ ಸುಹೇಬ್, ಐಸಿರಿ ಜಿಮ್ ಹಾಸನ. ನಾಲ್ಕನೇ ಬಹುಮಾನ ಪ್ರದೀಪ್, ಐಸಿರಿ ಜಿಮ್ ಹಾಸನ. 65 ಕೆಜಿ ವಿಭಾಗ ಪ್ರಥಮ ಬಹುಮಾನ ,ಉಮೇಶ್ ನಾಯ್ಕ, ರಾಯಲ್ ಜಿಮ್, ಅರಸೀಕೆರೆ. ದ್ವೀತಿಯ ಬಹುಮಾನ ಮಿಥುನ್, ಬುಲ್ರೈಡರ್ ಜಿಮ್, ಬಾಣಾವರ. ತೃತಿಯ ಬಹುಮಾನ ಶಭಾಸ್, ಫಿಟ್ ಅಂಡ್ ಫೈನ್ ಮಲ್ಟಿ ಜಿಮ್ ಚನ್ನರಾಯಪಟ್ಟಣ. ನಾಲ್ಕನೇ ಬಹುಮಾನ ಶಶಿಕುಮಾರ್ ವ್ಯಕ್ತಾಸ್ ಮಲ್ಟಿ ಜಿಮ್ ಅರಸೀಕೆರೆ.
75 ಕೆಜಿ ವಿಭಾಗ: ಪ್ರಥಮ ಬಹುಮಾನ ಮಧು, ನ್ಯೂ ಲೈಫ್ ಸ್ಟೈಲ್ ಮಲ್ಟಿ ಜಿಮ್, ಹಾಸನ. ದ್ವೀತಿಯ ಬಹುಮಾನ ಎಂ.ಎಸ್.ಮಧು, ಗೋಲ್ಡ್ ಜಿಮ್ ಅರಕಲಗೂಡು. ತೃತೀಯ ಬಹುಮಾನ ಅಮೋಘ, ವ್ಯಕ್ತಾಸ್ ಮಲ್ಟಿ ಜಿಮ್ ಅರಸೀಕೆರೆ. ನಾಲ್ಕನೇ ಬಹುಮಾನ ವರುಣ್ ಟೌನ್ ಕ್ಲಬ್ ಮಲ್ಟಿ ಜಿಮ್, ಅರಸೀಕೆರೆ, ಮತ್ತಿತರರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.