ಹಾಸನ

ವಿಷ್ಣು ಸಮುದ್ರ ಕೆರೆಗೆ ತಡೆಗೋಡೆಗೆ ಮುಂದಾದ ಲೋಕೋಪಯೋಗಿ

Published On :

ಕ.ಪ್ರ.ವಾರ್ತೆ   ಬೇಲೂರು   ಆ.7
ಇಲ್ಲಿನ ವಿಷ್ಣು ಸಮುದ್ರ ಕೆರೆ ಏರಿಗೆ ತಡೆಗೋಡೆ ನಿರ್ಮಿಸಲು ಲೋಕೋಪಯೋಗಿ ಇಲಾಖೆ ಮುಂದಾಗಿದ್ದು, ಇತ್ತೀಚೆಗೆ ರಸ್ತೆಯ ಬದಿಗಳಲ್ಲಿ ಸಿಮೆಂಟ್ ತುಂಡುಗಳನ್ನು ನೆಡುವ ಮೂಲಕ ಗುರುತು ಮಾಡಲಾಯಿತು. ಜುಲೈ 23ರಂದು ವಿಷ್ಣು ಸಮುದ್ರ ಕೆರೆಗೆ ಕೆಎಸ್ಆರ್ಟಿಸಿ ಬಸ್ ಬಿದ್ದು 8 ಮಂದಿ ಮೃತಪಟ್ಟು ಹಲವರಿಗೆ ಗಾಯವಾಗಿದ್ದ ಹಿನ್ನೆಲೆಯಲ್ಲಿ ನಗರದ ನಾನಾ ಸಂಘ -ಸಂಸ್ಥೆಗಳು ಕೆರೆಏರಿಗೆ ತಡೆಗೋಡೆ ನಿರ್ಮಿಸುವಂತೆ ಒತ್ತಾಯಿಸಿದ್ದರು. ಅದರಂತೆ ಶಾಸಕ ವೈ.ಎನ್. ರುದ್ರೇಶಗೌಡ ಸದನದಲ್ಲಿ ಶೀಘ್ರ ತಡೆಗೋಡೆ ನಿರ್ಮಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ವಿಷ್ಣುಸಮುದ್ರ ಕೆರೆ, ಚಿಕ್ಕಬ್ಯಾಡೆಗೆರೆ ಕೆರೆ, ಕಳಸಿನಕೆರೆ, ಹಳೇಬೀಡಿನ ದ್ವಾರಸಮುದ್ರ ಕೆರೆಗಳಿಗೆ ತಡೆಗೋಡೆ ನಿರ್ಮಿಸುವಂತೆ ಸಂಬಂಧ ಪಟ್ಟ ಇಲಾಖೆಗೆ 2.5ಕೋಟಿ ರು. ಹಣ ಬಿಡುಗಡೆಗೊಳಿಸುವಂತೆ ಆದೇಶಿಸಿತ್ತು.  ಅದರಂತೆ ಶನಿವಾರ ಲೋಕೋಪಯೋಗಿ ಇಲಾಖೆ ಕ್ರಮ ಕೈಗೊಂಡು ವಿಷ್ಣು ಸಮುದ್ರದ ಕೆರೆಯ ಏರಿಗೆ ತಡೆಗೋಡೆ ನಿರ್ಮಿಸಲು ಗುರುತು ಕಾರ್ಯ ಆರಂಭಿಸಿ ಸಿಮೆಂಟ್ ತುಂಡುಗಳನ್ನು ಹಾಕಲಾಯಿತು. ಬಸ್ ಬಿದ್ದ ಭಾಗದಲ್ಲಿ ಮಳೆ ಬಿದ್ದ ಕಾರಣ ಶೀತ ಪ್ರದೇಶವಾಗಿದ್ದು ಆ ಪ್ರದೇಶದಲ್ಲಿ ಜಲ್ಲಿ ಹಾಕಲಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.