ಹಾಸನ

ಬ್ಯಾಂಕುಗಳಿಗೆ ಕೃಷಿ ಸಾಲ ಮೇಲಿನ ಬಡ್ಡಿ ಸಹಾಯಧನ ಬಿಡುಗಡೆ

Published On :

ಕೃಷಿ ಸಾಲಗಳ ಮೇಲಿನ ಬಡ್ಡಿ ಸಹಾಯಧನ ಯೋಜನೆಯಲ್ಲಿ 2013-14ನೇ ಸಾಲಿನ ಆಯವ್ಯಯದಲ್ಲಿ 300 ಕೋಟಿ ರು. ಅವಕಾಶ ಕಲ್ಪಿಸಿದ್ದು ಪಾವತಿಸಲು ಬಾಕಿ ಇರುವ ಬಡ್ಡಿ ಸಹಾಯಧನವನ್ನು ಪಾವತಿಸಲಾಗುವುದು ಹಾಗೂ ಸರ್ಕಾರದಿಂದ ಸಹಕಾರ ಬ್ಯಾಂಕುಗಳಿಗೆ ಬಡ್ಡಿ ಸಹಾಯಧನವನ್ನು ಕಾಲಕಾಲಕ್ಕೆ ಬಿಡುಗಡೆ ಮಾಡಲಾಗುತ್ತಿರುವುದರಿಂದ ಬ್ಯಾಂಕಿನ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರುವ ಪ್ರಶ್ನೆ ಉದ್ಭವಿಸುವುದಿಲ್ಲವೆಂದು ಸಹಕಾರ ಸಚಿವರಾದ ಮಹದೇವಪ್ರಸಾದ್  ಉತ್ತರಿಸಿದ್ದಾರೆ.
ಕೃಷಿ ಸಾಲಗಳ ಮೇಲಿನ  ಬಡ್ಡಿ- ಸಹಾಯಧನ ಯೋಜನೆಯಲ್ಲಿ 2012-13 ನೇ ಸಾಲಿನ ಮಾರ್ಚ್ ಅಂತ್ಯದವರೆಗೆ ಬಂದ ಬಡ್ಡಿ ಸಹಾಯಧನ ಬಿಲ್ಲುಗಳ ರೂ 160.89 ಕೋಟಿ ಮತ್ತು 2013-14ನೇ ಸಾಲಿನ  ಮೇ 2013ರಲ್ಲಿ ಬಂದ ಬಡ್ಡಿ ಸಹಾಯಧನದ  ಬಿಲ್ಲುಗಳು  52.52 ಕೋಟಿ  ರು, ಒಟ್ಟು  213.41 ಕೋಟಿ  ರು. ಬಡ್ಡಿ ಸಹಾಯಧನ ಬಿಡುಗಡೆ ಮಾಡಲು ಬಾಕಿ ಇರುತ್ತದೆ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳಿಗೆ 213.41 ಕೋಟಿ ಬಡ್ಡಿ ಸಹಾಯಧನ ಪಾವತಿಸಲು ಬಾಕಿ ಇರುತ್ತದೆ ಎಂದು ತಿಳಿಸಿದ್ದಾರೆ.
ಸಾಲ ಮನ್ನಾ ಯೋಜನೆ: 2012ರಲ್ಲಿ ಈವರೆಗೆ 7.30 ಲಕ್ಷ ರೈತರ  1646.90 ಕೋಟಿ  ರು. ಸಾಲ ಮನ್ನಾ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳಿಂದ  ಸಹಕಾರ ಸಂಘಗಳ ನಿಬಂಧಕರ ಕಚೇರಿಗೆ  140 ಕೋಟಿ ರು. ಮೊತ್ತದ ಕ್ಲೇಮ್ ಬಿಲ್ಗಳು ಬಂದಿದ್ದು ಇವು ಪುನರ್ ಪರಿಶೀಲನೆಯಾಗುತ್ತಿದ್ದು ಈ ಮೊತ್ತವನ್ನು ಬಿಡುಗಡೆ ಮಾಡಬೇಕಾಗಿದೆ.
ಸಾಲ ಮನ್ನಾದ ಬಡ್ಡಿ ಹೊರೆಯನ್ನು ತಪ್ಪಿಸುವ ಸಲುವಾಗಿ ಕನಾಟಕ ರಾಜ್ಯ ಸಹಕಾರ ಅಪೆಕ್ಸ್ಬ್ಯಾಂಕಿನಿಂದ ಪುನರ್ ಪರಿಶೀಲನೆಗೊಂಡ ಬಿಲ್ಲುಗಳಿಗೆ ರೂ 326.90 ಕೋಟಿಗಳನ್ನು ಬಿಡುಗಡೆ ಮಾಡಿದೆ. ಸಹಕಾರ ಸಂಸ್ಥೆಗಳಿಂದ ಸಹಕಾರ ಸಂಘಗಳ ನಿಬಂಧಕರಿಗೆ ಬಂದ ಬಿಲ್ಲುಗಳ ಪುನರ್ ಪರಿಶೀಲನೆಯಾಗಿ ಸರ್ಕಾರಕ್ಕೆ ಬಂದ ಕೂಡಲೇ ಈ ಮೊತ್ತವನ್ನು ಬಿಡುಗಡೆ ಮಾಡಲಾಗುವುದು ಎಂದು ಸಹಕಾರ ಸಚಿವರಾದ ಮಹದೇವಪ್ರಸಾದ್ ಅವರು ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಸದನದಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.