ಹಾಸನ

'ಕೋಳಗುಂದ, ಅರಕರೆ, ನೇರ್ಲಿಗೆ' ಗ್ರಾಮಗಳಿಗೆ ಕುಡಿವ ನೀರು

Published On :

ಕ.ಪ್ರ.ವಾರ್ತೆ   ಜಾವಗಲ್   ಆ. 8
ಕೋಳಗುಂದ-ಅರಕೆರೆ-ನೇರ್ಲಿಗೆ ಗ್ರಾಮ ಪಂಚಾಯ್ತಿಗಳ ಎಲ್ಲ ಗ್ರಾಮಗಳಿಗೂ ಹೇಮಾವತಿ ಯೋಜನೆಯಿಂದ ಕುಡಿಯುವ ನೀರಿನ ವ್ಯವಸ್ಥೆಯನ್ನು ಒಂದು ವರ್ಷದೊಳಗೆ ಒದಗಿಸಿಕೊಡುವುದಾಗಿ ಶಾಸಕ ರುದ್ರೇಶಗೌಡ ತಿಳಿಸಿದರು.
ಜಾವಗಲ್ ಸಮೀಪದ ಕೋಳಗುಂದ ಗ್ರಾಮಸಭೆಯಲ್ಲಿ ಇತ್ತೀಚೆಗೆ ಮಾತನಾಡಿದ ಅವರು, ಜಾವಗಲ್ ಹೋಬಳಿಯ 57 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗೆ ಅನುಮೋದನೆ ದೊರಕಿದೆ. ಇದರ ಜತೆಯಲ್ಲಿಯೇ ಶಾಶ್ವತವಾಗಿ ಕೆರೆ ಕಟ್ಟೆಗಳಿಗೆ ನೀರು ಹರಿಸುವ ಯೋಜನೆ ಮಾಡಲಾಗುವುದು ಎಂದು ಹೇಳಿದರು.
ದೇವಿಹಳ್ಳಿ ಕೆರೆ ಮೂಲಕ ಉಂಡಿಗನಾಳು-ಹಂದ್ರಾಳು, ಬಂದೂರು, ಕೋಳಗುಂದ, ಅರಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಕೆರೆ-ಕಟ್ಟೆಗಳಿಗೆ ನೀರು ಒದಗಿಸಲಾಗುವುದು ಎಂದರು.
ಗೇರುಮರ ಸಿಂಗನಹಳ್ಳಿ-ಕೋಳಗುಂದ ಗೇಟ್ ಜಾವಗಲ್ -ಎಸ್.ಕಲ್ಲಹಳ್ಳಿ, ಜಾವಗಲ್ ಹಾರನಹಳ್ಳಿ ರಸ್ತೆಗಳಿಗೆ ಮರು ಡಾಂಬರೀಕರಣವನ್ನು ಸದ್ಯದಲ್ಲೇ ಮಾಡಿಸುವುದಾಗಿ ಭರವಸೆ ನೀಡಿದ ಅವರು, ಕೋಳಗುಂದ ಗ್ರಾಮದ ಎಲ್ಲಾ ರಸ್ತೆಗಳ ಡಾಂಬರೀಕರಣವನ್ನು ಮಾಡಿಸುವುದಾಗಿ ತಿಳಿಸಿದರು.
ತೋಟಗಾರಿಕಾ ಅಧಿಕಾರಿ ಶಿವಕುಮಾರ್, ಜಿಪಂ ಎಂಜಿನಿಯರ್ ರಾಮಚಂದ್ರ,  ತಾಪಂ   ಸದಸ್ಯರಾದ  ರಾಜೇಶ್ವರಿ ಶಿವಾನಂದ್, ಲೋಲಾಕ್ಷಮ್ಮ ಮಹದೇವಪ್ಪ, ಮಾಜಿ ಸದಸ್ಯರಾದ ನೇರ್ಲಿಗೆ ಸೋಮಶೇಖರ್, ಜಿ.ಮಹಾಲಿಂಗಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಮಹಾದೇವಪ್ಪ, ಗ್ರಾಪಂ ಸದಸ್ಯ ರಾಜೇಶ್, ಗ್ರಾಮದ ಮುಖಂಡರಾದ ನಾಗಭೂಷಣಸ್ವಾಮಿ, ನಂಜುಂಡಪ್ಪ, ಮಾತನಾಡಿದರು.
ಗ್ರಾಮಸಭೆ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷೆ ಸಣ್ಣಮ್ಮ ವಹಿಸಿದ್ದರು. ಉಪಾಧ್ಯಕ್ಷ ಹಾಲಪ್ಪ, ಪಿಡಿಒ ಮಂಜುಳಾ, ಗ್ರಾಮಲೆಕ್ಕಿಗೆ ನವೀನಾ, ಬಂದೂರು ಗ್ರಾಪಂ  ಅಧ್ಯಕ್ಷ ಕರಿಯಪ್ಪ, ಕಾರ್ಯದಶಿಂ ನಾಗರಾಜು, ಅರಕೆರೆ ರವಿ, ತಿಮ್ಮಪ್ಪ ಇದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.