ಹೇಮೆಯಿಂದ 5750 ಕ್ಯುಸೆಕ್ ಬಿಡುಗಡೆ
ಹಾಸನ: ಹೇಮಾವತಿ ಜಲಾಶಯದಿಂದ ಶನಿವಾರ 5750 ಕ್ಯುಸೆಕ್ ನೀರು ಬಿಡುಗಡೆ ಮಾಡುತ್ತಿದ್ದು, 7421 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಇಂದಿನ ಜಲಾಶಯದ ಮಟ್ಟ 2921.72 ಅಡಿಗಳು. ಗರಿಷ್ಠ ಮಟ್ಟ- 2922 ಅಡಿಗಳು. ಜಲಾಶಯದಲ್ಲಿ ಈಗ 36.832 ಟಿಎಂಸಿ ನೀರು ಇದ್ದು, ಸಂಗ್ರಹ ಸಾಮರ್ಥ್ಯ 37.107 ಟಿಎಂಸಿ.
ಭವಿಷ್ಯ ನಿಧಿ ಅದಾಲತ್ ನಾಳೆ
ಹಾಸನ: ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ, ಶ್ರಮ ಮಂತ್ರಾಲಯ, ಭಾರತ ಸರಕಾರ ತನ್ನ ಉಪ ಕ್ಷೇತ್ರೀಯ ಕಚೇರಿಯನ್ನು ಯಶೋರಾಮ್ ಚೇಂಬರ್ಸ್, ರತ್ನಗಿರಿ ರಸ್ತೆ, ಚಿಕ್ಕಮಗಳೂರಿನಲ್ಲಿ ಹೊಂದಿದೆ. ಕ್ಷೇತ್ರೀಯ ಭವಿಷ್ಯನಿಧಿ ಆಯುಕ್ತರು ಆ.12 ರಂದು ಭವಿಷ್ಯನಿಧಿ ಅದಾಲತನ್ನು ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ. ಭವಿಷ್ಯನಿಧಿ ಉದ್ಯೋಗದಾತರು ಮತ್ತು ಸದಸ್ಯರು ತಮ್ಮ ದೂರುಗಳೇನಾದರೂ ಇದ್ದಲ್ಲಿ ಅರ್ಜಿಯನ್ನು ಖುದ್ದಾಗಿ 12ನೇ ಆಗಸ್ಟ್ 2013 ಬೆಳಿಗ್ಗೆ 11 ಗಂಟೆಗೆ ಹಾಗೂ 10ನೇ ಆಗಸ್ಟ್ 2013 ರೊಳಗೆ ಅಂಚೆಯ ಮೂಲಕ ನೋಂದಾಯಿಸಲು ಕೋರಿದ್ದಾರೆ. ಎಲ್ಲಾ ದೂರುಗಳನ್ನು ಅದೇ ದಿನ ಇತ್ಯರ್ಥ ಪಡಿಸಲು ಶ್ರಮ ವಹಿಸಲಾಗುತ್ತದೆ. ಸದಸ್ಯರು ಹಾಗೂ ಉದ್ಯೋಗದಾತರು ತಮ್ಮ ದೂರುಗಳನ್ನು ಢಿಢಿಢಿ.ಜಠಜ್ಝ್ಜಿಟಡ.್ಜ್ಟಢ.್ಝಟಿ ರಲ್ಲಿ ನೋಂದಾಯಿಸಬಹುದು. ನೋಂದಾಯಿಸಿದ ದೂರುಗಳನ್ನು 30 ದಿನಗಳೊಳಗೆ ಇತ್ಯರ್ಥ ಮಾಡಿಕೊಡುವಂತೆ ಕ್ರಮ ಕೈಗೊಳ್ಳಲಾಗುತ್ತದೆ. ಭವಿಷ್ಯನಿಧಿ ಮೊತ್ತವನ್ನು ಸದಸ್ಯರ ಖಾತೆಗೆ 24 ಗಂಟೆಗಳೊಳಗೆ ಜಮಾ ಮಾಡಲು ಹೊಸದಾಗಿ ಃಊಋಖಿ/ಈಇಖ ಸೌಲಭ್ಯವನ್ನು ಒದಗಿಸಲಾಗಿದೆ. ಎಲ್ಲಾ ಸದಸ್ಯರು ತಮ್ಮ ಅರ್ಜಿಯ ಜೊತೆಗೆ ತಮ್ಮ ಬ್ಯಾಂಕ್ ಪುಸ್ತಕದ ನಕಲು ಪ್ರತಿಯನ್ನು ಲಗತ್ತಿಸುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಗ್ರಾಹಕ ಸೇವಾ ಕೇಂದ್ರವನ್ನು ಸಂಪರ್ಕಿಸಬಹುದು. ದೂ 08262-234106, ಫ್ಯಾಕ್ಸ್ 08262-237426.
ಉಡುಪು ವಿನ್ಯಾಸ ಡಿಪ್ಲೋಮಾ ಅರ್ಜಿ
ಹಾಸನ: ನಗರದ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ನಲ್ಲಿ ಡಿಪ್ಲೋಮ ಹಂತದಲ್ಲಿ 3 ವರ್ಷದ (6 ಸೆಮಿಸ್ಟರ್) ಅವಧಿಗೆ ಉಡುಪು ಮತ್ತು ವಸ್ತ್ರವಿನ್ಯಾಸ ಹಾಗೂ ಕಮರ್ಷಿಯಲ್ ಪ್ರಾಕ್ಟೀಸ್ ಕೋರ್ಸ್ಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ವಿದ್ಯಾರ್ಥಿನಿಯರು ಕಚೇರಿ ವೇಳೆಯಲ್ಲಿ ಆ.13 ರವರೆಗೆ ಮಧ್ಯಾಹ್ನ 2 ರೊಳಗೆ ಅರ್ಜಿ ಪಡೆಯಬಹುದು. ಪ್ರವೇಶ ಪ್ರಕ್ರಿಯೆ ಆ.14 ರಂದು ಬೆಳಗ್ಗೆ 8 ಗಂಟೆಯಿಂದ ನಡೆಯುತ್ತದೆ. ವಿದ್ಯಾರ್ಥಿಗಳು ಮೂಲ ದಾಖಲಾತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕೆಂದು ಹಾಸನದ ಹರ್ಷಮಹಲ್ ಹೋಟೆಲ್ ರಸ್ತೆಯಲ್ಲಿರುವ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ನ ಪ್ರಾಂಶುಪಾಲರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

