ಜಿಲ್ಲೆಯಲ್ಲಿ ಸಂಭ್ರಮದ ನಾಗರ ಪಂಚಮಿ
ಕನ್ನಡಪ್ರಭ ವಾರ್ತೆ ಹಾಸನ ಆ. 11
ಜಿಲ್ಲಾದ್ಯಂತ ಭಾನುವಾರ ನಾಗರಪಂಚಮಿ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ನಾಗರ ಪಂಚಮಿ ಹಬ್ಬದಂದು ನಾಗರ ಹುತ್ತಗೆ ತೆನೆ ಎರೆದು ಹಾಲು ಹಾಕುವುದು ಪ್ರತೀತಿ. ಅದೇ ರೀತಿ ನಗರದ ಮಹಾರಾಜ ಉದ್ಯಾನವನದ ಆವರಣದಲ್ಲಿರುವ ಹುತ್ತಕ್ಕೆ ಭಕ್ತಾಧಿಗಳು ಹಾಲೆರೆದು ಪೂಜೆ ಮಾಡಿದರು. ಮಕ್ಕಳೊಂದಿಗೆ ಮಹಿಳೆಯರು ತಂಡೋಪತಂಡ ನಾಗರಕಟ್ಟೆಗೆ ಆಗಮಿಸಿ ಅಲ್ಲಿನ ಹುತ್ತಕ್ಕೆ ಹಾಲೆರದು, ಒಳ್ಳೆಯದಾಗುವಂತೆ ನಾಗರಾಜನನ್ನು ಭಕ್ತಿ ಭಾವದಿಂದ ಬೇಡಿಕೊಂಡರು.
ಜಾವಗಲ್ ಪಟ್ಟಣದಲ್ಲಿ: ಜಾವಗಲ್ನಲ್ಲಿ ಭಾನುವಾರ ಬೆಳಗಿನಿಂದಲೇ ಭಕ್ತರು ನಾಗರಕಟ್ಟೆಗೆ ತೆರಳಿ ಹುತ್ತಕ್ಕೆ ಹಾಲು ಎರೆದು, ನಂತರ ನಾಗರ ದೇವಾಲಯಗಳಿಗೆ ಹೋಗಿ ಪೂಜೆ ಸಲ್ಲಿಸಿದರು. ನಾಗರ ಪೂಜೆ ಬಳಿಕ ಅಕ್ಕ-ತಂಗಿಯರು ಅಣ್ಣ-ತಮ್ಮಂದಿರು ಬೆನ್ನು ತೊಳೆಯುವ ಸಂಪ್ರದಾಯವಿದ್ದು ತನಿ ಎರೆದ ಹಾಲನ್ನು ಹೂವಿನಲ್ಲಿ ಅದ್ದಿ ಸೋದರರ ಬೆನ್ನಿಗೆ ಸವರಿ ತವರು ಮನೆಯಲ್ಲಿ ಸುಖ ಶಾಂತಿ ನೆಲಸಲಿ, ಸಮೃದ್ಧಿ ಉಂಟಾಗಲಿ ಎಂದು ಹಾರೈಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

