ವಸತಿಗೃಹ ವಾಸ್ತವ್ಯಕ್ಕೆ ಗುರುತಿನ ಚೀಟಿ ಕಡ್ಡಾಯ: ಎಸ್ಪಿ ರವಿ. ಚನ್ನಣ್ಣನವರ್
ಹಾಸನ: ನಗರದಲ್ಲಿ ಯಾವುದೇ ವಸತಿ ಗೃಹಗಳಲ್ಲಿ ಯಾರೇ ತಂಗ ಬೇಕಾದರೂ ಗುರುತಿನ ಚೀಟಿ ಕಡ್ಡಾಯವಾಗಿ ಇರಲೇ ಬೇಕು. ಇಲ್ಲದಿದ್ದರೆ ಕೊಠಡಿ ಬಾಡಿಗೆ ನೀಡಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ.ಚನ್ನಣ್ಣನವರ್ ತಿಳಿಸಿದ್ದಾರೆ.
ಅವರು ಇತ್ತೀಚೆಗೆ ವಸತಿಗೃಹಗಳ ವ್ಯವಸ್ಥಾಪಕರ ಸಭೆ ನಡೆಸಿ ಮಾತನಾಡಿ, ಕೆಲವು ಆರೋಪಿಗಳು ಅಪರಾಧ ಎಸಗಿ ಲಾಡ್ಜ್ನಲ್ಲಿ ತಂಗುತ್ತಿರುವುದು ಇತ್ತೀಚೆಗೆ ಹೆಚ್ಚಾಗಿರುವುದರಿಂದ ಇದನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದೆ.
ಈ ನಿಟ್ಟಿಲ್ಲಿ ಕಾನೂನು ಪ್ರಕಾರ ಯಾವುದೇ ವ್ಯಕ್ತಿ ಲಾಡ್ಜ್ನಲ್ಲಿ ತಂಗ ಬೇಕಾದರೆ ಚುನಾವಣಾ ಗುರುತಿನ ಚೀಟಿ, ಇಲ್ಲವೇ ವಾಹನದ ಪರವಾನಗಿ , ಆಧಾರ್ಕಾರ್ಡ್ ತೋರಿಸಿದರೆ ಮಾತ್ರ ಬಾಡಿಗೆಗೆ ಕೊಠಡಿ ನೀಡಬೇಕು. ಇಲ್ಲದಿದ್ದರೆ ಯಾವುದಾದರೂ ದುರಂತ ಹಾಗೂ ಕೃತ್ಯ ನಡೆದರೆ ಅದಕ್ಕೆ ಲಾಡ್ಜ್ ಮಾಲೀಕರು, ವ್ಯವಸ್ಥಾಪಕರೇ ನೇರ ಹೊಣೆಗಾರರಾಗಬೇಕಾಗುತ್ತದೆ. ಈ ನಿಟ್ಟಿನಲ್ಲಿ ಇದಕ್ಕೆ ಅವಕಾಶಕೊಡದೆ ಕಟ್ಟು ನಿಟ್ಟಿನ ನಿಯಮಪಾಲಿಸುವಂತೆ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

