ಹಾಸನ

ಪ್ರಜಾಪ್ರಭುತ್ವ ಹೆಸರಿನಲ್ಲಿ ವಂಶಪಾರಂಪರ್ಯ ಆಡಳಿತ: ಮಾಜಿ ಸಚಿವ ಸಿ.ಟಿ.ರವಿ ವಿಷಾದ

Published On :

ಕ.ಪ್ರ.ವಾರ್ತೆ  ಹಳೇಬೀಡು  ಆ.14
ದೇಶಕ್ಕೆ ಸ್ವಾತಂತ್ರ್ಯ ಬಂದು 66 ವರ್ಷ ಕಳೆದರೂ ಜನತೆಗೆ ಸ್ವಂತಿಕೆ ಮಾತ್ರ ಬಂದಿಲ್ಲ. ಪ್ರಜಾಪ್ರಭುತ್ವದ ಹೆಸರಿನಲ್ಲಿ ವಂಶಪಾರಂಪರ್ಯ ಆಡಳಿತ ನಡೆಯುತ್ತಿರುವುದು ವಿಷಾದನೀಯ ಸಂಗತಿ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.
ಪಟ್ಟಣ ಸಮೀಪದ ಶಿವಪುರದಲ್ಲಿ ನಡೆದ 16ನೇ ಶಿವಾನುಭವಗೋಷ್ಠಿ ಶರಣ ಒಕ್ಕಲಿಗ ಮುದ್ದಣ್ಣನವರ ಸ್ಮರಣೋತ್ಸವ ಹಾಗೂ ದಾಸೋಹ ನಿಲಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
 ಬ್ರಿಟಿಷರ ಧ್ವಜ ಇಳಿಸಿ ಭಾರತದ ತ್ರಿವರ್ಣ ಧ್ವಜ ಹಾರಿಸಿದ ಮಾತ್ರಕ್ಕೆ ಭಾರತೀಯರು ಸ್ವತಂತ್ರರಲ್ಲ. ಬ್ರಿಟಿಷರ ಹಾದಿಯಲ್ಲಿಯೇ ಸ್ವಾತಂತ್ರ್ಯ ನಂತರವೂ ಪ್ರಜಾಪ್ರಭುತ್ವದ ಹೆಸರಿನಲ್ಲಿ ವಂಶಪಾರಂಪರೆ ಆಡಳಿತ ನಡೆಯುತ್ತಿದೆ. ಇಂತಹ ಕೆಟ್ಟ ವ್ಯವಸ್ಥೆ ಬದಲಾಗಬೇಕು. ದೇಶದಲ್ಲಿ ಅಂತ:ಸತ್ವ ಬಡಿದೇಳಿಸುವ ವ್ಯವಸ್ಥೆ ನಿರ್ಮಾಣವಾಗ  ಬೇಕು. ದೇಶದ ಪ್ರತಿ ನಾಗರಿಕನಿಗೂ ಸ್ವಾವಲಂಬಿತ ಸ್ವಾತಂತ್ರ್ಯ ಬದುಕು ಬೇಕಿದೆ ಎಂದರು.
 ಕೃಷಿಗೆ ಆಧುನಿಕತೆಯ ಸ್ಪರ್ಶ ಅವಶ್ಯಕ. ಅನ್ನದಾತ ರೈತ ದೇಶದ ಬೆನ್ನೆಲುಬು. ಕೃಷಿಯನ್ನೇ ನಂಬಿ  ಬದುಕು ಸಾಗಿಸುತ್ತಿರುವ ರೈತರ ಪಾರಂಪರಿಕ ಕೃಷಿಗೆ ಆಧುನಿಕ ಸ್ಪರ್ಶದ ಅವಶ್ಯಕತೆ ಇದೆ. ಮೊದಲು ರೈತ ಸ್ವಾವಲಂಬಿಯಾಗಿದ್ದ, ಆದರೆ ಇಂದು ಪರಾವಲಂಬಿಯಾಗುತ್ತಿದ್ದಾನೆ.
ಕಾಲ ಕಾಲಕ್ಕೆ ಸರಿಯಾಗಿ ಮಳೆ ಬಾರದೆ ಹಾಗೂ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ರೈತ ಒದ್ದಾಡುತ್ತಿದ್ದಾನೆ. ಇಂತಹ ದುಸ್ಥಿತಿಯಿಂದ ರೈತ ಹೊರಬರಬೇಕಾದರೆ ವೈಜ್ಞಾನಿಕ ಬೆಲೆ ನಿಗದಿಯ ಅವಶ್ಯಕತೆ ಇದೆ ಎಂದು ತಿಳಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ರೇಣುಕುಮಾರ್, ತಾಲೂಕು ಪಂಚಾಯ್ತಿ ಸದಸ್ಯ ಧನಂಜಯ್, ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ, ರಾಜ್ಯ ರೈತ ಸಂಘದ ಉಪಾಧ್ಯಕ್ಷ ಜಿ.ಟಿ.ರಾಮಸ್ವಾಮಿ, ಜಿಲ್ಲಾ ರೈತಸಂಘದ ಆಧ್ಯಕ್ಷ ಡಿ.ಕೆ.ನಿಂಗೇಗೌಡ,ಕೆ.ಪಿ. ಕುಮಾರ್, ಎ.ಎ.ಪರಮೇಶ್, ಭೋಗಮಲ್ಲೇಶ್ ಇತರರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.