ಮಕ್ಕಳ ಸಂರಕ್ಷಣೆ ಕಾಯ್ದೆ, ಕುಟುಂಬ ವ್ಯಾಜ್ಯ ಬಗೆಹರಿಸಲು ಮಧ್ಯಸ್ಥಿಕೆ ಕಾರ್ಯಕ್ರಮ - ಜಿಲ್ಲಾ ನ್ಯಾ. ಸೋಮಶೇಖರ್
ಕ.ಪ್ರ. ವಾರ್ತೆ ಹಾಸನ ಆ 14
ಲೈಂಗಿಕ ದೌರ್ಜನ್ಯ ವಿರುದ್ಧ ಮಕ್ಕಳ ಸಂರಕ್ಷಣೆ ಕಾಯ್ದೆ ಹಾಗೂ ಕುಟುಂಬ ವ್ಯಾಜ್ಯಗಳ ಬಗ್ಗೆ ಪ್ರೀ ಲಿಟಿಗೇಷನ್ ಮಧ್ಯಸ್ಥಿಕೆ ಎಂಬ ವಿಷಯ ಕುರಿತು ಆ.18ರಂದು ಕಾರ್ಯಕ್ರಮ ನಡೆಯುವುದಾಗಿ ಜಿಲ್ಲಾ ನ್ಯಾಯಾಧೀಶ ಜೆ.ಎಸ್.ಸೋಮಶೇಖರ್ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಜಿಲ್ಲಾ ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಕಾರ್ಯಾಗಾರ ಜಿಲ್ಲಾ ಪಂಚಾಯ್ತಿಯ ಹೋಯ್ಸಳ ಸಭಾಂಗಣದಲ್ಲಿ ನಡೆಯಲಿದೆ.
ಜಿಲ್ಲಾ ಎಸ್ಪಿ ರವಿ ಡಿ.ಚನ್ನಣ್ಣನವರ್ ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲಾ ವಕೀಲಕರ ಸಂಘದ ಅಧ್ಯಕ್ಷ ದೇವರಾಜೇಗೌಡ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು.
ಲೈಂಗಿಕ ದೌರ್ಜನ್ಯದ ವಿರುದ್ಧ ಮಕ್ಕಳ ಸಂರಕ್ಷಣೆ ಕಾಯ್ದೆ ನೂತನವಾಗಿದ್ದು, ಈ ಬಗ್ಗೆ ಜಿಲ್ಲಾ ಮತ್ತು ಸೆಷನ್ಸ್ 2ನೇ ನ್ಯಾಯಾಧೀಶ ಆರ್.ಡಿ.ಹುದ್ದರ್, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಮುಸ್ತಫ್ ಹುಸೇನ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶ್ಯಾಮಲಾದೇವಿ, ವೈದ್ಯ ಎಸ್.ಎನ್.ಕಿರಣ್ ಮಾತನಾಡಲಿದ್ದಾರೆ.
ಕುಟುಂಬ ವ್ಯಾಜ್ಯಗಳ ಬಗ್ಗೆ ನ್ಯಾ. ಜೆ.ಎಸ್.ಸೋಮಶೇಖರ್, ನ್ಯಾ. ಬಿ.ಜಯಂತ ಕುಮಾರ್, ಜಿಲ್ಲಾ ಮತ್ತು ಸೆಷನ್ಸ್ 1ನೇ ನ್ಯಾಯಾಧೀಶೆ ಎಚ್.ಜಿ.ವಿಜಯ್ ಕುಮಾರಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜೆ.ಕೆ.ರಶ್ಮಿ, ವಕೀಲ ರಾಜ್ಗಿರ್ ಬೀರಪ್ಪ ಮಾತನಾಡಲಿದ್ದಾರೆ ಎಂದರು.
ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಯುವಲ್ಲಿ ಈ ಕಾಯ್ದೆ ಮಹತ್ವದ ಪಾತ್ರವನ್ನು ವಹಿಸಲಿದೆ. ಹದಿಹರೆಯದ ವಯಸ್ಸಿನಲ್ಲಿ ನಾನಾ ಸಮಸ್ಯೆಗಳು ತಲೆದೂರಿದ್ದು, ಸುಪ್ರೀಂಕೋರ್ಟ್ ಮಕ್ಕಳ ಬಗ್ಗೆ ಕಾಳಜಿವಹಿಸಿ ಸಾಕಷ್ಟು ಕಾನೂನುಗಳನ್ನು ಜಾರಿಗೆ ತಂದಿದೆ. ಅದನ್ನು ಕಟ್ಟು ನಿಟ್ಟಾಗಿ ಪಾಲನೆ ಆಗುತ್ತಿಲ್ಲ. ಲೈಂಗಿಕ ದೌರ್ಜನ್ಯದ ವಿರುದ್ದ ಮಕ್ಕಳ ಸಂರಕ್ಷಣೆ ಕಾಯ್ದೆ ಹೆಚ್ಚಿನ ಅರಿವು ಸಾರ್ವಜನಿಕರಿಗೆ ಅನಿವಾರ್ಯವಾಗಿದೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಾಲಕಿಯರು ಪೊಲೀಸರಿಗೆ ದೂರು ನೀಡುವಲ್ಲಿ ಹಿಂಜರಿಯುತ್ತಿದ್ದಾರೆ. ಆದ್ದರಿಂದ ಈ ಕಾಯ್ದೆಯು ಬಹಳ ಕಠಿಣವಾಗಿದ್ದು, ಅಪ್ರಾಪ್ತ ಬಾಲಕಿಯನ್ನು ಯುವಕ ಪ್ರೀತಿಸಿ ಆಕೆಯೊಂದಿಗೆ ವಾಸವಿದ್ದರೆ, ಅತನು ಕಾಯ್ದೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವಿಲ್ಲ. ಅಪ್ರಾಪ್ತ ಬಾಲಕಿಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ತಡೆಗಟ್ಟಲು ಈ ಕಾಯ್ದೆ ಬಹಳ ಉತ್ತಮವಾಗಿದೆ ಎಂದರು.
ಮಹಿಳಾ ದೌರ್ಜನ್ಯ ಪ್ರಕರಣ: ಅತ್ಯಾಚಾರ 2010ರಲ್ಲಿ 23 ಪ್ರಕರಣಗಳು, 2011ರಲ್ಲಿ 26 ಪ್ರಕರಣಗಳು, 2012ರಲ್ಲಿ 24 ಪ್ರಕರಣಗಳು, 2013ರಲ್ಲಿ 26 ಪ್ರಕರಣಗಳು. ಅಪಹರಣ ಪ್ರಕರಣದಲ್ಲಿ 2010ರಲ್ಲಿ 11ಪ್ರಕರಣಗಳು, 2011ರಲ್ಲಿ 10 ಪ್ರಕರಣಗಳು, 2012ರಲ್ಲಿ 12 ಪ್ರಕರಣಗಳು, 2013ರಲ್ಲಿ 6 ಪ್ರಕರಣಗಳು. ವರದಕ್ಷಿಣಿ ಪ್ರಕರಣಕ್ಕೆ ಸಾವನ್ನಪ್ಪಿರುವ ಪ್ರಕರಣಗಳಲ್ಲಿ 2010ರಲ್ಲಿ 35ಪ್ರಕರಣಗಳು, 2011ರಲ್ಲಿ 31 ಪ್ರಕರಣಗಳು, 2012ರಲ್ಲಿ 39 ಪ್ರಕರಣಗಳು, 2013ರಲ್ಲಿ 10 ಪ್ರಕರಣಗಳು ನಡೆದಿವೆ.
ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ: 2010ರಲ್ಲಿ 11 ಪ್ರಕರಣಗಳು, 2011ರಲ್ಲಿ 13 ಪ್ರಕರಣಗಳು, 2012ರಲ್ಲಿ 14 ಪ್ರಕರಣಗಳು, 2013ರಲ್ಲಿ 16 ಪ್ರಕರಣಗಳು. ಅಪ್ರಾಪ್ತ ಬಾಲಕಿಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ 2010ರಲ್ಲಿ 7 ಪ್ರಕರಣಗಳು, 2011ರಲ್ಲಿ 4 ಪ್ರಕರಣಗಳು, 2012ರಲ್ಲಿ 7 ಪ್ರಕರಣಗಳು ಮತ್ತು 2013ರಲ್ಲಿ 8 ಪ್ರಕರಣಗಳು ನಡೆದಿವೆ ಎಂದು ತಿಳಿಸಿದರು.
ನಾಳೆ ಕಿಯಾಸ್ಕೋ ಅನಾವರಣ
ದೇಶದ ಯಾವುದೇ ನ್ಯಾಯಾಲಯದಲ್ಲಿ ತಮ್ಮ ಕೇಸ್ಬ್ಗ್ಗೆ ಮಾಹಿತಿಯನ್ನು ಪಡೆಯುವಂತಹ ಯಂತ್ರ ಕಿಯಾಸ್ಕೋ ಆಗಿದ್ದು, ಇದನ್ನು ಆ.15ರಂದು ಜನರ ಸೇವೆಗೆ ಅರ್ಪಿಸಲಾಗುತ್ತಿದೆ. ನ್ಯಾಯಾಲಯದ ಆವರಣದಲ್ಲಿ ಈ ಯಂತ್ರವನ್ನು ಅಳವಡಿಸಿದ್ದು, ಸಾರ್ವಜನಿಕರು ಇದರ ಸೇವೆ ಪಡೆದುಕೊಳ್ಳಬೇಕು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

