ವರವಕೊಡೆ ದೇವಿ ವರಮಹಾಲಕ್ಷ್ಮೀ
ಕ.ಪ್ರ.ವಾರ್ತೆ ಹಾಸನ ಆ.16
ಐಶ್ವರ್ಯ, ಸಕಲ ಸಂಪತ್ತು ನೀಡುವ ವರಮಹಾಲಕ್ಷ್ಮಿ ಹಬ್ಬವನ್ನು ಜಿಲ್ಲೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಶ್ರದ್ಧಾಭಕ್ತಿಯಿಂದ ಆಚರಿಸಿದರು. ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಹಾಗೂ ಐಶ್ವರ್ಯ ನೆಲೆಸುವಂತೆ ಪ್ರಾರ್ಥಿಸಿ ವರಮಹಾಲಕ್ಷ್ಮಿ ಹಬ್ಬವನ್ನು ಮಹಿಳೆಯರು, ಮಕ್ಕಳು ಹೊಸ ಉಡುಪು ತೊಟ್ಟು ಅತ್ಯಂತ ಶ್ರದ್ಧಾಭಕ್ತಿಯಿಂದ ಹಾಗೂ ಸಂಭ್ರಮದಿಂದ ಆಚರಿಸಿದರು. ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದರೂ ದರ ಹೆಚ್ಚಳ ಲೆಕ್ಕಿಸದೆ ಭಕ್ತರು ಹಬ್ಬದ ಮುಂಚಿತವಾಗಿಯೇ ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಮಹಿಳೆಯರು ಬೆಳಗ್ಗೆ ಬೇಗ ಎದ್ದು, ಮಡಿ ಮಾಡಿ ದೇವಿಯನ್ನು ಪ್ರತಿಷ್ಠಾಪಿಸಿ ವಿಶೇಷವಾಗಿ ಹೂವಿನ, ಹಣ್ಣಿನ ಅಲಂಕಾರ, ಆಭರಣ ಹಾಗೂ ಇನ್ನೂ ಕೆಲವರು ನೋಟಿನಿಂದ ಅಲಂಕರಿಸಿ ಪೂಜಿಸಿದರು.
ನಗರದ ರಿಂಗ್ರಸ್ತೆಯಲ್ಲಿರುವ ಚಾಮುಂಡೇಶ್ವರಿ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ದೇವಿಗೆ ವಿಶೇಷ ಅಲಂಕಾರ, ಅಭಿಷೇಕ, ಮಹಾಮಸ್ತಾಭಿಷೇಕ, ಕುಂಕುಮಾರ್ಚನೆ ನರೆವೇರಿಸಲಾಯಿತು. ವ್ಯಾಪಾರಸ್ಥರು ಸಹ ಅಂಗಡಿ ಮುಂಗಟ್ಟುಗಳಿಗೆ, ವಾಹನಗಳಿಗೆ ವಿಶೇಷವಾಗಿ ಅಲಂಕರಿಸಿ ಧನ, ಧಾನ್ಯ ಹಾಗೂ ಐಶ್ವರ್ಯವನ್ನು ಕರುಣಿಸು ಎಂದು ವರಮಹಾಲಕ್ಷ್ಮಿಯನ್ನು ಪ್ರಾರ್ಥಿಸಿದರು. ವರಮಹಾಲಕ್ಷ್ಮಿಗೆ ವಿಶೇಷ ಪೂಜೆ ಸಲ್ಲಿಸಿ ಸುಮಂಗಲಿಯರಿಗೆ ಅರಿಶಿನ ಕುಂಕುಮ ಹಾಗೂ ಕಣವನ್ನು ನೀಡಿ, ಅಖಂಡ ಮುತ್ತೈದೆತನ ಉಳಿಸಮ್ಮ ದೇವಿ ಎಂದು ಕೋರಿದರು. ವರಮಹಾಲಕ್ಷ್ಮಿ ಹಬ್ಬವನ್ನು ನಗರಾದ್ಯಂತ ಬಹಳ ವೈಭವ, ಸಂಭ್ರಮ ಸಡಗರದಿಂದ ಆಚರಿಸಿದ್ದು ನಗರದೆಲ್ಲೆಡೆ ಹಬ್ಬದ ವಾತಾವರಣ ಮನೆ ಮಾಡಿತ್ತು. ಹಬ್ಬವನ್ನು ಆಚರಿಸಿದ ಮಳೆಯರು, ಮಕ್ಕಳು ಸಂಸತ ಪಟ್ಟರು.
ನಗರದ ವಿದ್ಯಾನಗರದಲ್ಲಿ ಗಾಯತ್ರಿ ಎಂಬುವರ ಮನೆಯಲ್ಲಿ ವರಮಹಾಲಕ್ಷ್ಮಿ ದೇವಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ನೆರವೇರಿಸಲಾಯಿತು. ವಿಧ ವಿಧದ ತಿಂಡಿ ತಿನಿಸು ತಯಾರಿಸಿ ದೇವಿಗೆ ನೈವೇದ್ಯ ಮಾಡಲಾಯಿತು. ದೇವಿ ಮುಂದೆ ಬಗೆಬಗೆಯ ಹಣ್ಣುಗಳನ್ನು ಚಂದವಾಗಿ ಇರಿಸಲಾಗಿತ್ತು. ಬಣ್ಣ ಬಣ್ಣದ ರಂಗೋಲಿಯಿಂದ ಮನೆಯನ್ನು ಸಿಂಗರಿಸಿ ವೈಭವದಿಂದ ವರಮಹಾಲಕ್ಷ್ಮಿ ಹಬ್ಬ ಆಚರಿಸಿ, ಮಹಿಳೆಯರಿಗೆ ಬಾಗಿನ ನೀಡಿದರು. ನಗರದ ವಿವೇಕನಂದ ನಗರದ ಶಾಂತಮ್ಮ, ಲತಾ ಸತೀಶ್ ಕುಟುಂಬದವರು ಮನೆಯಲ್ಲಿ ವರಮಹಾಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ ವಿಶೇಷವಾಗಿ ದೇವಿಯನ್ನು ಅಲಂಕರಿಸಿ ಬಗೆ ಬಗೆಯ ತಿಂಡಿ-ತಿನಿಸುಗಳಿಂದ ದೇವರಿಗೆ ನೈವೇದ್ಯ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಅಕ್ಕಪಕ್ಕದ ಮನೆಯ ಮುತ್ತೈದ್ಯೆಯರನ್ನು ಕರೆದು ಅರಿಶಿನ-ಕುಂಕುಮ-ಬಳೆಗಳನ್ನು ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

