ಹಾಸನ

ಅಬ್ಬಬ್ಬಾ ಖಾರ, ಕಣ್ಣೀರಿನ ನಡುವೆ ಹಬ್ಬ

Published On :

ಕನ್ನಡಪ್ರಭ ವಾರ್ತೆ    ಹಾಸನ    ಆ. 16
ಜಿಲ್ಲೆಯ ಜನತೆ ತರಕಾರಿಗಳ ಬೆಲೆ ಏರಿಕೆ ನಡುವೆಯೇ ವರಮಹಾಲಕ್ಷ್ಮೀ ಹಬ್ಬ ಆಚರಿಸಿದರು. ಹಸಿ ಮೆಣಸಿನಕಾಯಿ ಕೆ.ಜಿ.ಗೆ 80 ರು.ಗಳಾದರೆ ಈರುಳ್ಳಿ ಕೆ.ಜಿ.ಗೆ 70 ರು.ಗಳಿಗೆ ಏರಿಕೆ ಆಗಿದೆ. ಕೆಲ ದಿನಗಳ ಹಿಂದೆ ಹಸಿ ಮೆಣಸಿನಕಾಯಿ ಕೆ.ಜಿ.ಗೆ 40 ರು ಇತ್ತು. ಆದರೆ ಗುರುವಾರ ಒಂದೇ ದಿನಕ್ಕೆ ದುಪ್ಪಟ್ಟು ಬೆಲೆ ಹೆಚ್ಚಾಗಿ ಗ್ರಾಹಕರು ತರಕಾರಿ ಮಾರುಕಟ್ಟೆಗೆ ಬಂದರೆ ದರ ಕೇಳಿ ಆಕಾಶ ನೋಡುವ ಸ್ಥಿತಿ. ತಿಂಗಳಿನಿಂದ ಸುರಿದ ಬಾರಿ ಮಳೆಗೆ ರೈತ ಬೆಳೆದ ಬೆಳೆ ಕೊಳೆತು ಎಲ್ಲಾ ನಷ್ಟವಾಗಿ ಮಾರುಕಟ್ಟೆಗೆ ತರಕಾರಿ ಸರಬರಾಜು ಕಡಿಮೆ ಆಗಿದೆ. ಇದರ ಪರಿಣಾಮ ಗ್ರಾಹಕ ದುಪ್ಪಟ್ಟು ಬೆಲೆ ನೀಡಬೇಕಾದ ಪರಿಸ್ಥಿತಿ ಎದುರಾಗಿದೆ.  ಹುರುಳಿಕಾಯಿ ಕೆ.ಜಿ.ಗೆ 25 ರು, ಬಟಾಣಿ 40 ರು, ಕ್ಯಾರೆಟ್ 45 ರು, ನುಗ್ಗೆಕಾಯಿ 85 ರು, ಮುಳಗಾಯಿ 35 ರು, ಆಲೂಗಡ್ಡೆ 20 ರು, ಟೊಮೆಟೋ 10 ರು, ಬಾಳೆಹಣ್ಣು 12ಕ್ಕೆ 60 ರು, ಸೇಬು ಕೆ.ಜಿ.ಗೆ 100 ರು. ಇತ್ತು.  ಕೇಂದ್ರ ಸರ್ಕಾರದ ಕೃಷಿ ಹಾಗೂ ವಾಣಿಜ್ಯ ನೀತಿಗಳಿಂದ ಗ್ರಾಹಕನ ಕಣ್ಣಲ್ಲಿ ಕಣ್ಣೀರು ಬರಲು ಕಾರಣ. ಮತ್ತು ಹೊರ ದೇಶಕ್ಕೆ ತರಕಾರಿಗಳು ರಪ್ತು ಆಗುತ್ತಿರುವುದು ಹೆಚ್ಚಾಗಿದೆ. ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ಗ್ರಾಹಕರು ಏನಾದರೂ ಕೊಂಡುಕೊಳ್ಳುವಲ್ಲಿ ಯೋಚನೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಮೊದಲು ಸರ್ಕಾರ ತನ್ನ ರೈತ ವಿರೋಧಿ ನೀತಿ ಬದಲಾಯಿಸುವುದು ಅವಶ್ಯಕ ಎಂಬುದು ಸಾರ್ವಜನಿಕರ ಒಟ್ಟಾರೆ ಅಭಿಪ್ರಾಯ.        

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.