ಉತ್ತಮ ತರಬೇತಿಯಿಂದ ಶ್ರೇಷ್ಠ ಗಾಯಕರ ಸೃಷ್ಟಿ: ಶಾಸಕ
ಕ.ಪ್ರ.ವಾರ್ತೆ ಅರಸೀಕೆರೆ ಆ.17
ಗಾಯನದಲ್ಲಿ ತಮ್ಮ ಅಪ್ರತಿಮ ಪ್ರತಿಭೆಯನ್ನು ಪ್ರದರ್ಶಿಸುತ್ತಿರುವ ಈ ಮಕ್ಕಳಿಗೆ ಇನ್ನೂ ಉತ್ತಮ ತರಬೇತಿ ದೊರೆತರೆ ಒಳ್ಳೆಯ ಗಾಯಕರಾಗಬಲ್ಲರು ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಅಭಿಪ್ರಾಯಪಟ್ಟರು.
ಪಟ್ಟಣದ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಬೆಳ್ಳಿಮಂಡಲ ಜಿಲ್ಲಾ ಸಮಿತಿ ಹಾಗೂ ಅರಸೀ ಸಾಂಸ್ಕೃತಿಕ ವೇದಿಕೆ ಸಹಯೋಗದಲ್ಲಿ ವಿಶ್ವಭಾರತಿಗೆ ಕನ್ನಡಧಾರತಿ ಎಂಬ ದೇಶಭಕ್ತಿಗೀತೆಗಳು ಹಾಗೂ ಹೆಸರಾಂತ ನಾಡಿನ ಕವಿಗಳು ರಚಿಸಿರುವ ರಂಗಗೀತೆಗಳನ್ನು ಸುಮಾರು 200 ಮಕ್ಕಳು ಒಟ್ಟಿಗೆ ಹಾಡುವ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರುವ ಕಾರ್ಯ ಪೋಷಕರು ಹಾಗೂ ಸಂಘಸಂಸ್ಥೆಗಳಿಂದ ನಡೆಯಬೇಕೆಂದರು. ಇದಕ್ಕೆ ಅನುಕೂಲವಾಗುವಂತೆ ಪಟ್ಟಣದ ವೆಂಕಟೇಶ್ವರ ಚಿತ್ರಮಂದಿರದಲ್ಲಿ ಕಲಾಭವನ ನಿರ್ಮಿಸುವ ಕಾರ್ಯ ಭರದಿಂದ ಸಾಗಿದೆ. ನವೆಂಬರ್ ವೇಳೆಗೆ ಕಲಾಭವನದಲ್ಲಿಯೇ ವಿನೂತನ ಕಾರ್ಯಕ್ರಮ ನಡೆಸಲು ಅನುವು ಮಾಡಿಕೊಡುವುದಾಗಿ ಹೇಳಿದರು. ಇಂತಹ ನಾಡು ನುಡಿ ಬಿಂಬಿಸುವ ಕಾರ್ಯಕ್ರಮಗಳಿಗೆ ಜನರು ನಿರಾಸಕ್ತಿ ತೋರಿಸುತ್ತಿರುವುದು ದುರದೃಷ್ಟಕರ ಸಂಗತಿ. ವಿವಿಧ ಸಂಘಸಂಸ್ಥೆಗಳು ಕಾಲಕಾಲಕ್ಕೆ ಇಂತಹ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿರುವುದರಿಂದ ರಾಷ್ಟ್ರೀಯ ಪ್ರಜ್ಞೆ ಜಾಗೃತಗೊಳ್ಳಲು ಸಾಧ್ಯ ಎಂದರು.
ಮುಖ್ಯ ಅತಿಥಿಗಳಾಗಿ ತಾಪಂ ಅಧ್ಯಕ್ಷ ಎಚ್.ಟಿ.ಶಿವಮೂರ್ತಿ, ಬಿ.ಇ.ಓ.ಎಸ್.ಪಿ.ನಟರಾಜ್, ಉದ್ಯಮಿ ಅರುಣಕುಮಾರ್, ಕೆ.ವಿ. ನಿರ್ವಾಣಸ್ವಾಮಿ, ಯುವ ಕಾಂಗ್ರೆಸ್ ಅಧ್ಯಕ್ಷ ಅಣ್ಣಾಯಕನಹಳ್ಳಿ ವಿಜಯಕುಮಾರ್, ಹೇಮಂತ್, ಧೀರೇಂದ್ರ ಹಾಗೂ ಬೆಳ್ಳಿಮಂಡಲ ಸಂಘದ ಅಧ್ಯಕ್ಷ ಜಾವಗಲ್ ಪ್ರಸನ್ನಕುಮಾರ್ ಅರಸೀ ಸಾಂಸ್ಕೃತಿಕ ವೇದಿಕೆಯ ಮಮತಾ ಇದ್ದರು. ಖ್ಯಾತ ಗಾಯಕ ಸುಧೀರ್, ಮಲ್ಲಿಗೆ ಸುಧೀರ್, ಶೃತಿ ಇನ್ನಿತರ ಕಲಾವಿದರು, ಖ್ಯಾತ ಗಾಯಕರು ಗೀತಗಾಯನದ ರಸದೌತಣ ಬಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

