ದೇಶಕ್ಕೆ ಕೊಡುಗೆ ನೀಡಿದರೆ ಮುಂದಿನ ಪೀಳಿಗೆಗೆ ಮಾದರಿ: ಆದರ್ಶ ಗೋಖಲೆ
ಅರಸೀಕೆರೆ: ಭಾರತೀಯರು ಕೇವಲ ನಾಗರಿಕರಾಗದೇ ದೇಶಕ್ಕಾಗಿ ಕೊಡುಗೆ ನೀಡಿದರೆ ಮಾತ್ರ ಮುಂದಿನ ಪೀಳಿಗೆಗೆ ಮಾದರಿಯಾಗಲು ಸಾಧ್ಯ ಎಂದು ಸಂಸ್ಕಾರ ಭಾರತಿ ಮಂಗಳೂರು ಭಾಗದ ಸಂಚಾಲಕ ಆದರ್ಶ ಗೋಖಲೆ ಅಭಿಪ್ರಾಯಪಟ್ಟರು.
ಪಟ್ಟಣದ ಪಿ.ಪಿ ವೃತ್ತದಲ್ಲಿ 67 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮಧ್ಯರಾತ್ರಿ ನಡೆದ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮದ ಪ್ರಮುಖ ಭಾಷಣಕಾರರಾಗಿ ಮಾತನಾಡಿದ ಅವರು, ಭಾರತವನ್ನು ಗುಲಾಮಗಿರಿಯಿಂದ ಬಿಡುಗಡೆಗೊಳಿಸಲು ಸ್ವಾತಂತ್ರ್ಯ ಪೂರ್ವದಲ್ಲಿ ಲೆಕ್ಕಕ್ಕೆ ಸಿಗದಷ್ಟು ಭಾರತೀಯರು ಬಲಿದಾನ ಮಾಡಿದ್ದಾರೆ.
ಆದರೆ ಇಂದಿನ ದಿನಗಳಲ್ಲಿ ನಾವು ಆ ಮಹನೀಯರನ್ನು ನೆನಪಿಕೊಳ್ಳದೇ ಕೇವಲ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವುದು ವಿಪರ್ಯಾಸ ಎಂದು ವಿಷಾದಿಸಿದರು.
ಇಂದಿನ ಪಠ್ಯ ಪುಸ್ತಕಗಳಲ್ಲಿ ದೇಶದ ಹುತಾತ್ಮರ ಚರಿತ್ರೆ ಅಳವಡಿಸದೆ ಅಧುನಿಕ ವ್ಯಕ್ತಿಗಳನ್ನು ಆ ಸ್ಥಾನದಲ್ಲಿ ಬಿಂಬಿಸುತ್ತಿರುವುದು ಖಂಡನೀಯ. ಝಾನ್ಸಿ ಲಕ್ಷ್ಮೀಬಾಯಿ ಯಂತಹ ವೀರ ವನಿತೆಯರನ್ನು ಶಾಲಾ ಕಾಲೇಜು ಪುಸ್ತಕಗಳಲ್ಲಿ ಹುಕ್ಕಾ ಸೇದುವ ಭಂಗಿಯಲ್ಲಿ ಚಿತ್ರಿಸಿ ಮುದ್ರಣ ಮಾಡಿರುವುದನ್ನು ನೋಡಿಯೂ ಸಹ ನಾವು ಸುಮ್ಮನಿದ್ದೇವೆ ಎಂದರೆ ಎಷ್ಟರ ಮಟ್ಟಿಗೆ ದೇಶದ ಬಗ್ಗೆ ಎಷ್ಟು ನಿರಾಭಿಮಾನಿಗಳಾಗಿದ್ದೇವೆ ಎಂದು ಗೋಚರವಾಗುತ್ತದೆ ಎಂದು ಹೇಳಿದರು.
ಮಧ್ಯರಾತ್ರಿ 12.05 ಕ್ಕೆ ಕಾರ್ಯನಿರತ ಯೋಧ ಕರುಣಾಕರ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಕೃಷ್ಣಗಿರಿ ಶಕ್ತಿ ಪೀಠದ ಡಾ.ವಸಂತ ಜಯ್ ಮಹಾರಾಜ್ ಮತ್ತು ವಜ್ರತಿಲಕ ಮಹಾರಾಜ್ ಸಾನಿಧ್ಯ ವಹಿಸಿದ್ದರು.ಯೋಧ ಪ್ರದೀಪ್ರ ಮಾತಾ ಪಿತರನ್ನು ಸನ್ಮಾನಿಸಲಾಯಿತು. ದೇಶ ಭಕ್ತಿಗೀತೆಗಳ ಗಾಯನ ನಡೆಯಿತು.ನೂರಾರು ಯುವಕರು ಬೈಕ್ ರ್ಯಾಲಿ ನಡೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

