ಬ್ರಿಟಿಷರು ಬರುವ ಮೊದಲು ಭಾರತ ಎನ್ನುವ ಪರಿಕಲ್ಪನೆ ಇರಲಿಲ್ಲ: ಎಚ್.ಟಿ.ಗುರುರಾಜ್
ಹಾಸನ: ನಗರದ ಶಾಂತಿನಗರ ಬಿಜಿವಿಎಸ್ ಘಟಕ ಪ್ರತಿ ತಿಂಗಳು ನಡೆಸುವ ಅನಿಸಿಕೆ ಅಭಿವ್ಯಕ್ತಿ ಎಂಟನೇ ತಿಂಗಳ ಕಾರ್ಯಕ್ರಮ ಕವಯತ್ರಿ ಚೂಡಾಮಣಿ ಅವರ ಮನೆಯಲ್ಲಿ ನಡೆಯಿತು. ಘಟಕ ಸ್ವಾತಂತ್ರೋತ್ಸವ ಅಂಗವಾಗಿ ಏರ್ಪಡಿಸಿದ್ದ ಉಪನ್ಯಾಸ ಭಾರತ ಅಂದು, ಇಂದು ಮತ್ತು ಮುಂದು ಕುರಿತು ಎಂಬ ವಿಷಯ ಕುರಿತು ಕಾರ್ಯಕ್ರಮದಲ್ಲಿ ಗುರುರಾಜ್ ಮಾತನಾಡಿದರು.
ಭಾರತದ ಬಹುತೇಕ ಭೂಪ್ರದೇಶಗಳು ಪಾಳೇಗಾರಿಕೆ, ಜಮೀನ್ದಾರಿ ಹಾಗೂ ಧರ್ಮಾಧಾರಿತ ರಾಜಪ್ರಭುತ್ವ ಸರಿಸಮನಾಗಿ ಒಂದೇ ರೀತಿಯಲ್ಲಿ ಆಳ್ವಿಕೆ ನಡೆಯುತ್ತಿತ್ತು ಮತ್ತು ಸಾಮಾಜಿಕವಾಗಿ ಜಾತಿಪದ್ಧತಿ ಆಳವಾಗಿ ಬೇರು ಬಿಟ್ಟು ಗುಲಾಮಗಿರಿ, ಅಸ್ಪೃಶ್ಯತೆ ಹಾಗೂ ಶೋಷಣೆ ಪ್ರಧಾನವಾಗಿ ತುಂಬಿಕೊಂಡಿತ್ತು. ಹಾಗಾಗಿ ಬ್ರಿಟಿಷರು ಭಾರತವನ್ನು ಸುಲಭವಾಗಿ ವಶಪಡಿಸಿಕೊಳ್ಳಲು ಸಾಧ್ಯವಾಯಿತು ಎಂದರು.
ಮಹಾತ್ಮಗಾಂಧಿ ಸ್ವಾತಂತ್ರ ಚಳವಳಿಯಲ್ಲಿ ಧುಮುಕುವವರೆಗೂ ಕಾಂಗ್ರೆಸ್ಸಿನ ಹೋರಾಟದಲ್ಲಿ ಏಕಾಭಿಪ್ರಾಯವಾಗಲಿ, ನಿರ್ಧಿಷ್ಟ ಗುರಿ ಇರಲಿಲ್ಲ. 1909ರಲ್ಲಿ ಸ್ವಾತಂತ್ರ ಚಳುವಳಿಗೆ ಗಾಂಧೀಜಿಯರ ಆಗಮನದಿಂದ ಹೊಸ ಸ್ವರೂಪ ಲಭಿಸಿತು ಎಂದು ತಿಳಿಸಿದರು.
1917ರ ಸೋವಿಯತ್ ಕ್ರಾಂತಿ ಜಗದ ಸ್ವಾತಂತ್ರ್ಯ ಹೋರಾಟಕ್ಕೆ ಭಿನ್ನವಾದ ಆಲೋಚನೆ ಒದಗಿಸಿತು. ಅದು ಭಾರತದಲ್ಲೂ ಜಾಗೃತಗೊಂಡು ಗಾಂಧಿ ಮಾರ್ಗದ ಹೊರತಾಗಿ ಭಗತ್ಸಿಂಗ್, ಸುಭಾಶ್ಚ್ಂದ್ರ ಬೋಸರು ಪರಿಣಾಮಕಾರಿಯಾಗಿ ವಿದ್ಯಾರ್ಥಿ ಹಾಗೂ ಯುವಜನ ಸಮುದಾಯವನ್ನು ವಿಮೋಚನ ಸಮರದತ್ತ ಆಕರ್ಷಿಸಿದರು.
ಸ್ವಾತಂತ್ರ್ಯ ಲಭಿಸಿ ಈ 67 ವರ್ಷಗಳಲ್ಲಿ ದೇಶದ ಸಂಪತ್ತಿನ 80 ಭಾಗದ ಒಡೆಯರು ಕೇವಲ 450 ಮಂದಿ ಕಾರ್ಪೋರೇಟರುಗಳ ಕೈಯಲ್ಲಿದೆ. ಭಾರತ ಜಾಗತಿಕ ಹಸಿವಿನ ಸಂಖ್ಯೆಯಲ್ಲಿ ಕಡೆಯ 10 ದೇಶಗಳಲ್ಲೊಂದು. ಪ್ರತಿ 40 ನಿಮಿಷಕ್ಕೊಂದು ಮಹಿಳಾ ಅತ್ಯಾಚಾರ, ಪ್ರತಿ ಮೂವತ್ತು ನಿಮಿಷಕ್ಕೊಂದು ಆತ್ಮಹತ್ಯೆ ನಡೆಯುತ್ತಿದೆ ಮಾತ್ರವಲ್ಲ ದೇಶದ ಅರ್ಧಕ್ಕೂ ಹೆಚ್ಚು ಜನ ಸ್ವಂತ ಮನೆಗಳಲ್ಲದೆ ಬದುಕುತ್ತಿದ್ದಾರೆ. ಬಡತನ, ನಿರುದ್ಯೋಗ, ಭ್ರ್ರಷ್ಟಾಚಾರ ಮುಗಿಲು ಮುಟ್ಟಿದೆ ಎಂದು ತಿಳಿಸಿದರು.
ಪ್ರಜಾತಂತ್ರ ವ್ಯವಸ್ಥೆಯನ್ನು ಬಲಶಾಲಿಗೊಳಿಸಲು ಜನರ ಪಾಲ್ಗೊಳ್ಳುವಿಕೆಯಿಂದ ಮಾತ್ರ ಸಾಧ್ಯ. ಆಗ ಮಾತ್ರ ನಿಜ ಸ್ವಾತಂತ್ರ ದಿನಾಚರಣೆ ನಾವು ಆಚರಿಸಲು ಸಾಧ್ಯ ಎಂದರು.
ಕವಿಗೋಷ್ಠಿ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು. ಭಾಗವಹಿಸಿದ್ದ ಪ್ರತಿನಿಧಿಗಳೆಲ್ಲರೂ ಸ್ವಾತಂತ್ರ ಕುರಿತು ತಾವು ರಚಿಸಿದ ಕವನ ವಾಚಿಸಿದರು. ಸಂಚಾಲಕ ಚೇತನ್ ವಂದಿಸಿದರು. ಘಟಕಾಧ್ಯಕ್ಷ ದೇವರಾಜು ಅಧ್ಯಕ್ಷತೆ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

