ಸ್ನೇಹಿತನೊಂದಿಗೆ ಸೇರಿ ಬೈಕ್ಗಳ ಕದಿಯುತ್ತಿದ್ದ ಬಿಎಸ್ಸಿ ವಿದ್ಯಾರ್ಥಿ; ಇಬ್ಬರೂ ಪೊಲೀಸ್ ಅತಿಥಿ
ಕ.ಪ್ರ. ವಾರ್ತೆ, ಅರಸೀಕೆರೆ , ಆ.21
ಅಂತಿಮ ಬಿಎಸ್ಸಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಮೋಜಿಗಾಗಿ ಬೈಕ್ ಕಳವು ಮಾಡಿ ತನ್ನ ಸ್ನೇಹಿತನೊಂದಿಗೆ ಪೊಲೀಸರಿಗೆ ಅತಿಥಿಯಾಗಿದ್ದಾನೆ.
ತಾಲೂಕಿನ ಬಾಣಾವರ ಕುರುವಂಕ ಗ್ರಾಮದ ಅಂತಿಮ ಬಿಎಸ್ಸಿ ವಿದ್ಯಾರ್ಥಿ ಕೆ.ಪಿ.ಪವನ್ ಎಂಬಾತನೇ ಬಂಧಿತ.
ಈತ ತನ್ನ ಸ್ನೇಹಿತ ಶಿವಣ್ಣ (ಮೆಂಟಲ್ ಶಿವ) ನೊಂದಿಗೆ ಸೇರಿ ಪಟ್ಟಣದ ವಿವಿಧೆಡೆ ದ್ವಿಚಕ್ರ ವಾಹನಗಳನ್ನು ಕಳವು ಮಾಡಿ ಸಿಕ್ಕಿ ಬಿದ್ದಿದ್ದಾರೆ.
ಇವರಿಂದ ಒಟ್ಟು 1,56,000 ರು. ಬೆಲೆಯ 6 ಮೋಟಾರ್ ಬೈಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರು ಅಂತಾರಾಜ್ಯದ ಕಳ್ಳರೊಂದಿಗೆ ಶಾಮೀಲಾಗಿದ್ದು ತಿಪಟೂರು, ಬೆಂಗಳೂರು, ಗಂಡಸಿ ವ್ಯಾಪ್ತಿಯಲ್ಲಿ ಬೈಕ್ ಕಳವು ಮಾಡಿದ್ದಾರೆ.
ಇತ್ತೀಚೆಗೆ ಪಟ್ಟಣದ ಹಾಸನ ವೃತ್ತದಲ್ಲಿರುವ ಸಾವಿತ್ರಮ್ಮ ಷಣಸಪ್ಪ ಆಸ್ಪತ್ರೆ ಬಳಿ ಬಜಾಜ್ ಡಿಸ್ಕವರಿ ಬೈಕನ್ನು ಅಪಹರಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕಿನ ಜಿ.ಶಂಕರನಹಳ್ಳಿ ಗ್ರಾಮದ ವಾಹನ ಮಾಲೀಕ ಹರೀಶ್ ಪಟ್ಟಣದ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರಿನ ಅನ್ವಯ ಜಿಲ್ಲಾ ಎಸ್ಪಿ ರವಿ ಡಿ ಚನ್ನಣ್ಣನವರ್ ಆದೇಶದಂತೆ ಡಿ.ವೈ.ಎಸ್.ಪಿ.ಮಂಜುನಾಥ್, ನಗರಠಾಣೆಯ ವೃತ್ತ ನಿರೀಕ್ಷಕ ಕುಮಾರಸ್ವಾಮಿ, ಅಪರಾಧ ವಿಭಾಗದ ಪಿ.ಎಸ್.ಐ. ಲೋಕೇಶ್ ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ಕುಖ್ಯಾತ ಕಳ್ಳರನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಸಾರ್ವಜನಿಕರ ಶ್ಲಾಘನೆ: ದ್ವಿಚಕ್ರ ವಾಹನ ಕಳ್ಳರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುವ ಪೊಲೀಸರ ಕ್ರಮ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ. ಅಲ್ಲದೇ ಕಳ್ಳರ ಪತ್ತೆಗೆ ನೆರವು ನೀಡಿದ ದೂರುದಾರರನ್ನು ಪೊಲೀಸ್ ಇಲಾಖೆ ಗೌರವಿಸಬೇಕೆಂದು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

