ಹಾಸನ

ಐಟಿಐ ಉಳಿಸಲು ಸಂಘಟನೆ ಅಗತ್ಯ: ಗುರುರಾಜು

Published On :

ಹಾಸನ: ಐಟಿಐಗಳ ಗುಣಮಟ್ಟ ಹೆಚ್ಚಿಸಿ ಅವುಗಳನ್ನು ಉಳಿಸಲು ಸಂಘಟನಾತ್ಮಕವಾಗಿ ಐಟಿಐ ನೌಕರರು, ಸಾರ್ವಜನಿಕರು ಹಾಗೂ ಸಂಸ್ಥೆಗಳು ಒಂದಾಗುವ ಕಾಲ ಬಂದಿದೆ ಎಂದು ರಾಜ್ಯ ಐಟಿಐ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಟಿ.ಗುರುರಾಜು ಕರೆನೀಡಿದರು. ಇತ್ತೀಚೆಗೆ ನಗರದಲ್ಲಿ ಜಿಲ್ಲಾ ಮಟ್ಟದ ರಾಜ್ಯ ಐ.ಟಿ.ಐ ನೌಕರರ ಸಂಘದ ಸಭೆಯಲ್ಲಿ ಭಾಗವಹಿಸಿ ಸಕಾರದ ಶಿಕ್ಷಣ ವಿರೋಧಿ ನೀತಿಗಳ ಕುರಿತು ಮಾತನಾಡಿದ ಅವರು, ಇತ್ತೀಚಿನ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನೀತಿಗಳು ಈ ದೇಶದಲ್ಲಿ ಐಟಿಐಗಳ ನಾಶಕ್ಕೆ ನಾಂದಿ ಹಾಡುತ್ತಿವೆ. ಐಟಿ.ಐಗಳ ಗುಣಮಟ್ಟವನ್ನು ಹೆಚ್ಚಿಸುವ ನೆಪದಲ್ಲಿ ಕೇಂದ್ರ ಸರ್ಕಾರ ಖಾಸಗಿ ನಿಯಂತ್ರಿತ ಸಂಸ್ಥೆ ಸ್ಥಾಪಿಸಿ ಐಟಿಐಗಳ ಮೇಲೆ ಗದಾಪ್ರಹಾರ ನಡೆಸಲು ಹೊರಟಿದೆ. ಇದರ ಪ್ರಕಾರ ಯಾವುದೇ ಐಟಿಐ ಅಖಿಲ ಭಾರತ ವೃತ್ತಿ ಪರೀಕ್ಷೆಗೆ ಅರ್ಹತೆ ಪಡೆಯಲು ಕ್ಯೂ.ಸಿ.ಐ ನಿಂದ ಅನುಮೋದನೆ ಪಡೆಯಬೇಕು. ಈ ಅನುಮೋದನೆ ಐದು ವರ್ಷಗಳಿಗೆ ಮಾತ್ರ ಸೀಮಿತವಾಗಿದ್ದು ಅನುಮೋದನೆ ಪಡೆಯಲು ಒಂದು ಲಕ್ಷದ ನಲವತ್ತು ಸಾವಿರ ರು.ಗಳ ದುಬಾರಿ ಶುಲ್ಕವನ್ನು ಪ್ರತೀ ಐದೈದು ವರ್ಷ ಪಾವತಿಸಬೇಕು. ಈ ಕ್ಯೂ.ಸಿ.ಐನಿಂದ ಐಟಿಐಗಳು ಗುಣವರ್ಧನೆಯಾಗುವ ಬದಲು ಲೂಟಿಕೋರತೆಗೆ ಒಳಗಾಗಿ ನಾಶವಾಗಲಿವೆ ಎಂದು ತಿಳಿಸಿದರು. ಶಿಕ್ಷಣ ವಿರೋಧಿಯಾದ ಹಲವಾರು ವಿಷಯಗಳ ಕುರಿತು ಸಭೆಯು ತೀರ್ಮಾನ ತೆಗೆದುಕೊಂಡು ಹೋರಾಡಲು ನಿರ್ಧರಿಸಿ ಈ ತೀರ್ಮಾನಗಳನ್ನು ಸಭೆಯು ಕೈಗೊಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಒತ್ತಾಯಿಸಲು ತೀರ್ಮಾನಿಸಿತು.
ಬೇಡಿಕೆಗಳು: ಖಾಸಗಿ ನಿಯಂತ್ರಿತ ಕ್ಯೂ.ಸಿ.ಐ ವ್ಯವಸ್ಥೆಯನ್ನು ರದ್ದುಪಡಿಸಬೇಕು. ಐ.ಟಿ.ಲಿಟ್ರಸಿ ಪರೀಕ್ಷಾ ವಿಧಾನವನ್ನು ಖಾಸಗಿ ಸಂಸ್ಥೆಗೆ ವಹಿಸಿರುವುದನ್ನು ಸಭೆಯು ವಿರೋಧಿಸಿತು ಹಾಗೂ ಇತರೇ ಪರೀಕ್ಷೆಗಳ ಜತೆಯಲ್ಲೇ ಇಲಾಖೆಯೇ ಅಖಿಲ ಭಾರತ ವೃತ್ತಿ ಪರೀಕ್ಷೆಯ ಜೊತೆಯೆ ನಡೆಸಬೇಕು ಎಂದು ಸಭೆಯು ಆಗ್ರಹಿಸಿತು. ಸಭೆಯ ಅಧ್ಯಕ್ಷತೆಯನ್ನು ರಾಜ್ಯ ಐಟಿಐ ನೌಕರರ ಸಂಘದ ಜಿಲ್ಲಾಧ್ಯಕ್ಷ ವಿಶ್ವನಾಥ್ ವಹಿಸಿದ್ದರು. ರಾಜ್ಯಾಧ್ಯಕ್ಷ ರೇವಣ್ಣಗೌಡ, ಜಿಲ್ಲಾ ಗೌರವಾಧ್ಯಕ್ಷ ಡಾ.ಅನಿಲ್‌ಕುಮಾರ್ ಸಭೆಯಲ್ಲಿ ಇದ್ದರು.

ಅಪರ ಸರ್ಕಾರಿ ವಕೀಲರ ಹುದ್ದೆಗೆ ಅರ್ಜಿ ಆಹ್ವಾನ
ಹಾಸನ: ಅರಕಲಗೂಡು ತಾಲೂಕಿನ ಅಪರ ಸರ್ಕಾರಿ ವಕೀಲರ ಹುದ್ದೆ ಭರ್ತಿಗಾಗಿ ಅರ್ಹ ವಕೀಲರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕನಿಷ್ಠ ಪಕ್ಷ ಸ್ಥಳೀಯವಾಗಿ 7 ವರ್ಷ ವಕೀಲಿ ವೃತ್ತಿ ಪೂರೈಸಿದ ವಕೀಲರು ಅರ್ಹರಾಗಿರುತ್ತಾರೆ. ಸದರಿ ಹುದ್ದೆಗೆ ನೇಮಕಾತಿ ಮಾಡುವ ಅಧಿಕರ ಸಂಪೂರ್ಣವಾಗಿ ಸರ್ಕಾರಕ್ಕೆ ಮಾತ್ರ ಇರುತ್ತದೆ. ಮೇಲ್ಕಂಡ ಹುದ್ದೆಯ ಆಕಾಂಕ್ಷಿಗಳು ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ಆ.30. 2013ರ ಸಂಜೆ 5 ರೊಳಗೆ ಜಿಲ್ಲಾಧಿಕಾರಿಯವರ ಕಚೇರಿ ಹಾಸನ ಅವರಿಗೆ ಸಲ್ಲಿಸುವುದು. ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿಯವರಾದ ವಿ.ಅನ್ಬುಕುಮರ್ ತಿಳಿಸಿದ್ದಾರೆ.

ರಾಜೀವ್, ಅರಸು ಜನ್ಮ ದಿನಾಚರಣೆ
ಅರಸೀಕೆರೆ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದೇವರಾಜು ಅರಸು ಅವರ ತತ್ವ, ಆದರ್ಶ, ಚಿಂತನೆ, ಸರಳತೆ ಇತ್ಯಾದಿ ಮೌಲ್ಯಗಳನ್ನು ಇಂದಿನ ಯುವ ರಾಜಕಾರಣಿಗಳು ಪಾಲಿಸುವ ಅಗತ್ಯವಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ದಂದೂರು ರವಿ ಅಭಿಪ್ರಾಯಪಟ್ಟರು. ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಹಾಗೂ ಅರಸು ಜನ್ಮ ದಿನಾಚರಣೆಯ ಪ್ರಯುಕ್ತ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಪದ್ಮ, ನಗರ ಉಪಾಧ್ಯಕ್ಷ  ಮಂಜು, ಪುರಸಭೆ ಸದಸ್ಯರಾದ ಶ್ರೀನಿವಾಸ್ ಪಾಪಣ್ಣ, ರಂಗನಾಥ್, ಹಾಜಿವಲಿ, ಬಾಲಮುರುಗನ್, ರೇಷ್ಮಾ ರೋಷನ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.