ಹಿಂದಿದ್ದ ಸ್ಥಳದಲ್ಲೇ ಮ್ಯಾಕ್ಸಿಕ್ಯಾಬ್ ನಿಲುಗಡೆಗೆ ಒತ್ತಾಯಿಸಿ ಮನವಿ
ಕ.ಪ್ರ ವಾರ್ತೆ, ಆಲೂರು , ಆ. 23
ಪಟ್ಟಣದಲ್ಲಿ ಮ್ಯಾಕ್ಸಿ ಕ್ಯಾಬ್ ಸಂಘದ ಮಾಲೀಕರು ಹಿಂದೆ ಇದ್ದ ಸ್ಥಳದಲ್ಲೇ ನಿಲುಗಡೆ ಮಾಡಲು ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿ ಶಾಸಕ ಎಚ್.ಕೆ.ಕುಮಾರಸ್ವಾಮಿಯವರಿಗೆ ಶುಕ್ರವಾರ ಮನವಿ ಪತ್ರ ನೀಡಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮುಂಭಾಗ ಸುಮಾರು 15 ವರ್ಷಗಳಿಂದಲೂ ವಾಹನಗಳನ್ನು ನಿಲ್ಲಿಸುತ್ತಿದ್ದು, ಈಗ ಎಕಾಏಕಿ ಅಲ್ಲಿ ನಿಲ್ಲಿಸದಂತೆ ಸಿಪಿಐ ಅವರು ಸೂಚನೆ ನೀಡಿದ್ದಾರೆ.
ಇದರಿಂದ ನಮಗೆ ತೀವ್ರ ತೊಂದರೆಯಾಗುತ್ತಿರುವ ಕಾರಣ ಮೊದಲಿದ್ದ ಸ್ಥಳದಲ್ಲಿಯೇ ವಾಹನ ನಿಲುಗಡೆ ಅನುವು ಮಾಡಿಕೊಡಬೇಕೆಂದ ಮಾಲೀಕರ ಸಂಘದವರು, ಮ್ಯಾಕ್ಸಿ ಕ್ಯಾಬ್ ನಂಬಿಕೊಂಡು ಚಾಲಕ, ನಿರ್ವಾಹಕ ಹಾಗು ಮಾಲೀಕ ಈ ಮೂರು ಸಂಸಾರಗಳು ಜೀವನ ನಡೆಸುತ್ತಿದ್ದೇವೆ.
ನಾವು ಸರ್ಕಾರಕ್ಕೆ 3 ತಿಂಗಳಿಗೆ 11 ಸಾವಿರವರೆಗೂ ತೆರಿಗೆ ಕಟ್ಟುತ್ತಿದ್ದೇವೆ. ವಾಹನ ಮಾರಲು ಹೋದರೆ ಯಾರು ಕೊಳ್ಳಲು ತಯಾರಿಲ್ಲ.
ಅಲ್ಲದೆ ನಾವು ನಿಮ್ಮ ಸರ್ಕಾರದ ಆದೇಶದ ಮೇರೆಗೆ ಸಭೆ ಸಮಾರಂಭಗಳಿಗೆ ವಾಹನಗಳನ್ನು ಜಿಲ್ಲಾಧಿಕಾರಿಗಳು, ಆರ್ಟಿಓ ಪೊಲೀಸ್ ಆದೇಶದ ಮೇರೆಗೆ ನೀವು ಕೇಳಿದಾಗ ಕಳುಹಿಸಿಕೊಟ್ಟಿರುತ್ತೇವೆ ಆದುದರಿಂದ ತಾವುಗಳು ಮಾಮೂಲಿಯಿರುವ ಜಾಗದಲ್ಲಿ ವಾಹನ ನಿಲುಗಡೆಮಾಡಲು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಸಂತೆ ದಿನವಾದ ಬುಧವಾರ ಹೊರತು ಪಡಿಸಿ ಬಾಕಿ ದಿನಗಳಲ್ಲಿ ಆಸ್ಪತ್ರೆಯ ಬದಿಯಲ್ಲಿ ನಿಲ್ಲಿಸದೆ ಮತ್ತೊಂದು ಬದಿಯಲ್ಲಿ ಮ್ಯಾಕ್ಸಿ ಕ್ಯಾಬ್ಗಳನ್ನು ಕೇವಲ ಪ್ರಯಾಣಿಕರನ್ನು ಹತ್ತಿಸಿ ಇಳಿಸಿ ಹೋಗುವಂತೆ ಹಾಗು ಹೆಚ್ಚು ಹೊತ್ತು ನಿಲ್ಲಿಸದಂತೆ ಮಾಡಲು ಎಸಸ್ಪಿ ಯವರೊಂದಿಗೆ ಮಾತನಾಡಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಪಿಎಸ್ಐ ಜಯಲಕ್ಷಿ ಮಾತನಾಡಿ, ಎಸ್ಪಿ ಯವರು ಪಟ್ಟಣಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮ್ಯಾಕ್ಸಿ ಕ್ಯಾಬಬ್ಹಾಗು ಗೂಡ್ಸ್ ಆಟೋಗಳಿಂದಾಗಿ ಉಂಟಾಗುತ್ತಿದ್ದ ಟ್ರಾಫಿಕ್ ಸಮಸ್ಯೆಗಳನ್ನು ಪರಿಹರಿಸಲು ಅವುಗಳ ನಿಲುಗಡೆಯನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಸೂಚಿಸಿದ್ದರು. ಅವರ ಆದೇಶದನ್ವಯ ಕ್ರಮ ಕೈಗೊಂಡಿದ್ದೇವೆಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

