ಹಾಸನ

ಎಸ್ಸಿ, ಎಸ್ಟಿ ಉಪಯೋಜನೆ: ಪ್ರಸ್ತಾವ

Published On :

ಹಾಸನ:2012-13 ನೇ ಸಾಲಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಉಪಯೋಜನೆಗಳ ಅಡಿಯಲ್ಲಿ ಕೆಳಕಂಡ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಪ್ರಸ್ತಾವ ಕರೆಯಲಾಗಿದೆ.
ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಅಂಬೇಡ್ಕರ್ ಯುವಜನ ಅಭಿವೃದ್ಧಿ ಕೇಂದ್ರದ ನಿರ್ಮಾಣಕ್ಕೆ 10 ಲಕ್ಷ ರು.   ಅನುದಾನ, ಗ್ರಾಮೀಣ ಪ್ರದೇಶದ ವಿದ್ಯಾಸಂಸ್ಥೆಯಲ್ಲಿ (ಪರಿಶಿಷ್ಟ ಜಾತಿ) ಆಟದ ಮೈದಾನ
ಅಭಿವೃದ್ಧಿಗೆ 5.00 ಲಕ್ಷ ಅನುದಾನ, ಪರಿಶಿಷ್ಟ ಜಾತಿ ಯುವಕ, ಯುವತಿ ಸಂಘಗಳಿಗೆ ಭಜನಾ ಸಾಮಗ್ರಿ  ಸಾಂಸ್ಕತಿಕ ಸಲಕರಣೆ  ಪ್ರತಿ ತಾಲೂಕಿಗೆ ಒಂದಂರಂತೆ, ಪರಿಶಿಷ್ಟ ಜಾತಿ ಕ್ರೀಡಾ ಸಾಮಗ್ರಿ ನೀಡಲು ಪ್ರತಿ ತಾಲೂಕಿಗೆ ಒಂದರಂತೆ, ಗಿರಿಜನ ಪ್ರತಿಭಾವಂತ (ಎಸ್‌ಟಿ) ಯುವಕ, ಯುವತಿಯರಿಗೆ ಜಿಲ್ಲಾ ಮಟ್ಟದಲ್ಲಿ  ಯುವಚೇತನ, ಯುವ ಪ್ರೇರಣಾ ಹಾಗೂ ಯುವ ಸಂವಹನ ತರಬೇತಿಯನ್ನು 10 ದಿವಸಗಳ ಕಾಲ ಯುವ ಸಬಲೀಕರಣ ಕ್ರೀಡಾ ಇಲಾಖೆಯಿಂದ ನೀಡಲಾಗುವುದು. ಇದಕ್ಕಾಗಿ ಆಸಕ್ತಿಯುಳ್ಳ ಪರಿಶಿಷ್ಟ ಪಂಗಡದ ಎಸ್ಸೆಸ್ಸೆಲ್ಸಿ ಪಾಸಾದ ಯುವಕ, ಯುವತಿಯರು ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಸನ ಇಲ್ಲಿ ನೋಂದಾಯಿಸಿಕೊಳ್ಳಲು ಕೋರಿದೆ.   ಹೆಚ್ಚಿನ ಮಾಹಿತಿಗಾಗಿ ದೂರವಾಣಿ 246056 ಸಂಪರ್ಕಿಸಲು ಕೋರಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.