ಹಾಸನ

'ಪರಿಶುದ್ಧ ಮನಸ್ಸು, ನಿತ್ಯ ಕಾಯಕದಿಂದ ಬದುಕು ಸುಖ'

Published On :

ಬಾಗೂರು (ಚನ್ನರಾಯಪಟ್ಟಣ ತಾ.): ಬದುಕು ಸುಖ ಸಂತೋಷವಾಗಿರಬೇಕಾದರೆ ಪರಿಶುದ್ಧ ಮನಸ್ಸಿನಿಂದ ನಿತ್ಯ ಕಾಯಕ ಮಾಡಬೇಕು ಎಂದು ಆದಿಚುಂಚನಗಿರಿ ಮಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು.
ಅವರು ಸಮೀಪದ ಕೆ.ತಿಮ್ಮಲಾಪುರ ಗ್ರಾಮದಲ್ಲಿ ಶನಿವಾರ ಮುತ್ತುರಾಯಸ್ವಾಮಿ, ಚೌಡೇಶ್ವರಿ, ಚಾಮುಂಡೇಶ್ವರಿ ದೇವಾಲಯದ ಜೀರ್ಣೋದ್ಧಾರ, ಕುಂಭಾಭಿಷೇಕ, ಶ್ರೀನಿವಾಸ ಕಲ್ಯಾಣೋತ್ಸವ, ಸೋಲ್ಜರ್ ಪತ್ರಿಕೆ ಬಿಡುಗಡೆ ಸಮಾರಂಭದ ಜ್ಯೋತಿ ಬೆಳಗಿಸಿ ಮಾತನಾಡಿದರು.
ದಿನ ಒಳ್ಳೆಯದನ್ನೇ ಯೋಚಿಸಿ ಒಳ್ಳೆಯ ಕೆಲಸಗಳನ್ನೇ ಮಾಡಿದರೆ ಮನುಷ್ಯನಲ್ಲಿ ದ್ವೇಷ, ಅಸೂಯೆಗಳು ದೂರವಾಗುತ್ತವೆ ಎಂದರು.
ಕಾಯಕಯೋಗಿ ಬಸವಣ್ಣನವರ ಆದರ್ಶಗಳನ್ನು ಜೀವನಕ್ಕೆ ಅಳವಡಿಸಿಕೊಳ್ಳಬೇಕು ಧಾರ್ಮಿಕ ಮನೋಭಾವನೆ ಬೆಳೆಸಿಕೊಂಡು ಶಾಂತಿ ನೆಮ್ಮದಿಯಿಂದ ಬಾಳಬೇಕು ಎಂದ ಅವರು, ದೇವಾಲಯದ ಜೀರ್ಣೋದ್ಧಾರ ಮಾಡಿಸಿದ ಸುಮಿತ್ರ ಪ್ರಭಾಕರ್ ಅವರನ್ನು ಶ್ಲಾಘಿಸಿದರು.
ಕರವೇ ರಾಜ್ಯಾಧ್ಯಕ್ಷ ಟಿ. ಎ. ನಾರಾಯಣಗೌಡ ಮಾತನಾಡಿದರು.  
ಕಾರ್ಯಕ್ರಮದಲ್ಲಿ ಶೈಲನಾಥ ಸ್ವಾಮೀಜಿ, ಚಂದ್ರಶೇಖರ ಸ್ವಾಮೀಜಿ, ಟಿ. ತಿಮ್ಮೇಗೌಡ ನಿವೃತ್ತ ಐಎಎಸ್  ಅಧಿಕಾರಿ, ಪತ್ರಕರ್ತರಾದ ಭಾರಧ್ವಜ್, ಮುನಿರಾಜ್, ಸುಮಿತ್ರ, ಪ್ರಭಾಕರ್, ಶಮಂತ್ ಪಿ. ಗೌಡ, ಶ್ರೀವಾರಿ ಫೌಂಡೇಶನ್‌ನ ವೆಂಕಟೇಶ್ ಮೂರ್ತಿ, ರಾಮಕೃಷ್ಣೇಗೌಡ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.