ಹಾಸನ

ಆರ್ಟಿಇ ಮಾದರಿ ಬದಲಿಸಲು ಆಗ್ರಹ

Published On :

ಹಾಸನ: 2014-15ರ ಸಾಲಿಗೆ ಆರ್ಟಿಇ ಕಾಯ್ದೆಯ ಅನ್ವಯ ಅನಾನುಕೂಲ ಪರಿಸ್ಥಿತಿಯಲ್ಲಿವು ಮತ್ತು ದುರ್ಬಲ ವರ್ಗದ ಮಕ್ಕಳಿಗೆ ಶಾಲೆಗಳಲ್ಲಿ ಮೀಸಲಿಡಬೇಕಾದ ಶೇ.25ರಷ್ಟು ಸೀಟುಗಳಿಗೆ ಮುಂಬರುವ ಜ.7ರಿಂದ ಅರ್ಜಿ ಆಹ್ವಾನಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಎಂಜಿನಿಯರಿಂಗ್ ಅಥವಾ ವೈದ್ಯಕೀಯ ಮಾದರಿಯ ಸೀಟುಗಳ ಅರ್ಜಿಗಳ ಕ್ರೂಢಿಕರಣ ಮತ್ತು ಸೀಟುಗಳ ಹಂಚಿಕೆ ಪದ್ಧತಿಯನ್ನು ಅನುಸರಿಸಬಾರದೇಕೆ ಎಂದು ಬಿಜಿವಿಎಸ್ ಜಿಲ್ಲಾ ಖಜಾಂಚಿ ಬಿ.ಜಿ. ಗೋಪಾಲಕೃಷ್ಣ ತಿಳಿಸಿದ್ದಾರೆ. ಪ್ರಸಕ್ತ ಸಂದರ್ಭದಲ್ಲಿ ಅದೃಷ್ಟ ಪರೀಕ್ಷೆಗಾಗಿ ಮತ್ತು ಪ್ರತಿಷ್ಠಿತ ಶಾಲೆಗಳ ಆಯ್ಕೆಗಾಗಿ ಪೋಷಕರು ಒಂದಕ್ಕಿಂತ ಹೆಚ್ಚು ಶಾಲೆಗಳಿಗೆ ಅರ್ಜಿಗಳನ್ನು ಗುಜರಾಯಿಸುತ್ತಿದ್ದಾರೆ. ಆದುದರಿಂದ ಒಂದೇ ಮಗು ಒಂದಕ್ಕಿಂತ ಹೆಚ್ಚು ಕಡೆಗಳಲ್ಲಿ ಆಯ್ಕೆಯಾದ ಪಕ್ಷದಲ್ಲಿ, ಪ್ರವೇಶ ಪಡೆಯುವ ಸಮಯದಲ್ಲಿ ಗೊಂದಲಕಾರಿಯಾಗುತ್ತಿದ್ದೆ. ಈ ಸಂದರ್ಭವನ್ನು ದುರುಪಯೋಗ ಪಡಿಸಿಕ್ಕೊಳ್ಳುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಆದ್ದದರಿಂದ ಎಂಜಿನಿಯರಿಂಗ್ ಆಥವಾ ವೈದ್ಯಕೀಯ ಮಾದರಿಯಲ್ಲಿರುವಂತೆ ಸೀಟುಗಳ ಆಯ್ಕೆ ಮತ್ತು ಹಂಚಿಕೆ ಪದ್ಧತಿಯನ್ನು ಅನುಸರಿಸಿ ಈ ದೋಷವನ್ನು ದೂರಮಾಡಬಹುದಾಗಿದೆ. ಗ್ರಾಪಂ, ಪಪಂ, ನಗರ ಪಾಲಿಕೆ, ಮಹಾನಗರ ಪಾಲಿಕೆಗಳ ಹಂತದಲ್ಲಿ ಒಂದೇ ಕಡೆ ಅರ್ಜಿಗಳನ್ನು ಕ್ರೂಢಿಕರಿಸಬೇಕು. ಸೀಟುಗಳ ಹಂಚಿಕೆಯ ಪ್ರಕ್ರಿಯೆ ಒಂದೇ ಸ್ಥಳದದಲ್ಲಿ ಮಾಡಿದರೆ ಗೊಂದಲಗಳನ್ನು ಕಡಿಮೆ ಮಾಡಬಹುದಾಗಿದೆ ಎಂದು ಹೇಳಿದ್ದಾರೆ. ಅರ್ಜಿಯಲ್ಲಿ ಪೋಷಕರ ಆದ್ಯತೆ ಮೇರೆಗೆ ಒಳಗಿನ ಮತ್ತು ಹೊರಗಿನ ಶಾಲೆಗಳ ಆಯ್ಕೆಯ ಅವಕಾಶವನ್ನು ಮಾಡಿಕೊಡಬೇಕು. ಈ ಮಾದರಿಯನ್ನು ಪಾಲಿಸಿದರೆ ಮಗುವು ಒಂದಕ್ಕಿಂತ ಹೆಚ್ಚು ಶಾಲೆಗಳಲ್ಲಿ ಆಯ್ಕೆಯಾಗುವುದನ್ನು ತಡೆಯಬಹುದು ಮತ್ತು ದುರುಪಯೋಗವನ್ನು ಕಡಿಮೆ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ. ಅದಾಯದ ಮಿತಿಯ ಸ್ಪಷ್ಟತೆ ಇಲ್ಲದಿರುವುದು ಗೊಂದಲಕರವಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.