ಹಾಸನ

ನೀರನ್ನು ವಿದ್ಯುತ್ ಮೋಟಾರ್ನಿಂದ ಕೇವಲ 5 ಕಿ.ಮೀ ಮಾತ್ರ ಪಂಪ್

Published On :

ಅರಸೀಕೆರೆ: ತಾಲೂಕಿನಲ್ಲಿ ಪ್ಲೋರೈಡ್ ಪೀಡಿತ ಗ್ರಾಮಗಳಿಗೆ ನದಿ ಮೂಲದಿಂದ ಶಾಶ್ವತವಾಗಿ ಶುದ್ಧ ಕುಡಿಯುವ ನೀರು ಒದಗಿಸಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ರಾಜೀವ್ಗಾಂಧಿ ಸಬ್ಮಿಷನ್ ಯೋಜನೆಯಡಿ ಪ್ರಥಮ ಹಂತವಾಗಿ ಸುಮಾರು 20 ಕೋಟಿ ವೆಚ್ಚದ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಲಾಗಿದೆ.
ಚಿಕ್ಕಮಗಳೂರು ತಾಲೂಕಿನ ಕೆ.ಬಿ. ಹಾಳು ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಮೂಲಕ ಹಾದು ಹೋಗುವ ಅರಸೀಕೆರೆ ತಾಲೂಕಿನ ನೀರು ಒದಗಿಸಲು ಅಳವಡಿಸಿರುವ ಪೈಪ್ಗಳನ್ನು ಕೊರೆದು ಅಕ್ರಮವಾಗಿ ಕೆ.ಬಿ. ಹಾಳು ಗ್ರಾಮಕ್ಕೆ ನೀರು ಸಂಪರ್ಕ ಕಲ್ಪಿಸಲಾಗಿದೆ. ಇದರಿಂದ ಸರ್ಕಾರದ ಆಸ್ತಿಗೆ ಲಕ್ಷಾಂತರ ರು. ನಷ್ಟ ಮಾಡಿದ್ದು ಪೈಪ್ಗಳಿಗೆ ಧಕ್ಕೆ ಉಂಟು ಮಾಡಲಾಗಿದೆ ಎಂದು ಅರಸೀಕೆರೆ ಜಿಪಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮತ್ತು ಸಹಾಯಕ ಎಂಜಿನಿಯರ್ ಅವರು ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅರಸೀಕೆರೆ ತಾಲೂಕಿನಲ್ಲಿ 565 ಗ್ರಾಮಗಳ ಪೈಕಿ ಪ್ರಥಮವಾಗಿ 229 ಗ್ರಾಮಗಳ ಕೊಳವೆ ಬಾವಿಗಳಲ್ಲಿ ಪ್ಲೋರೈಡ್ ಮತ್ತು ನೈಟ್ರೈಟ್ ಹಾಗೂ ಕಬ್ಬಿಣ ಅಂಶಗಳೇ ಹೆಚ್ಚಾಗಿತ್ತು. ಆದ್ದರಿಂದ ಅಂದಿನ ಬಿಜೆಪಿ ಸರ್ಕಾರ ಪ್ಲೋರೈಡ್ ಪೀಡಿತ 70 ಗ್ರಾಮಗಳಿಗೆ ಅರಸೀಕೆರೆ ತಾಲೂಕಿಗೆ ಹತ್ತಿರವಿರುವ ಯಗಚಿ ಜಲಾಶಯದಿಂದ ನೀರನ್ನು ಸರಬರಾಜು ಮಾಡುವ ಯೋಜನೆ ಕಾಮಗಾರಿ ಪ್ರಾರಂಭಿಸಿತ್ತು.
55 ಕಿ.ಮೀ. ಉದ್ದದ ಪೈಪ್ಲೈನ್: ಅರಸೀಕೆರೆ ಮತ್ತು ಬೇಲೂರು ಮಧ್ಯೆ 60 ಕಿ.ಮೀ. ದೂರವಿದ್ದು ಯಗಚಿ ಜಲಾಶಯದಿಂದ ಕೇವಲ 5 ಕಿ.ಮೀ ಮಾತ್ರ ನೀರನ್ನು ವಿದ್ಯುತ್ ಮೋಟಾರ್ನಿಂದ ಪಂಪ್ ಮಾಡಲಾಗುತ್ತಿದೆ. ಉಳಿದ 55 ಕಿ.ಮೀ. ನೀರು ಗುರುತ್ವಾಕರ್ಷಣೆ ಮೂಲಕ ನೀರು ಹರಿಯುತ್ತಿದೆ. ಅರಸೀಕೆರೆ ಪಟ್ಟಣದ ಸಮೀಪದ ಸಂಕೋಂಡನಹಳ್ಳಿ ಪಕ್ಕದ 80 ಅಡಿ ಎತ್ತರದ ಬೆಟ್ಟದಲ್ಲಿರುವ ನೀರು ಸಂಗ್ರಹಣಾ ತೊಟ್ಟಿಗೆ ಸರಬರಾಜಾಗುತ್ತಿತ್ತು.
ಈಗ ನೀರು ಪೂರೈಕೆ ಮಾಡುತ್ತಿದ್ದ ಪೈಪ್ಗೆ ಅಕ್ರಮವಾಗಿ ಸಂಪರ್ಕ ಕಲ್ಪಿಸಿಕೊಂಡಿರುವುದರಿಂದ ನೀರಿಗೆ ತೀವ್ರ ತೊಂದರೆಯಾಗಿದೆ ಎಂದು ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.