ಶೌಚಾಲಯ ಸೌಲಭ್ಯ ಬಳಸಿಕೊಳ್ಳಿ'
ಹೊಳೆನರಸೀಪುರ: ಎಲ್ಲ ಮನೆಗಳಿಗೂ ಕಡ್ಡಾಯವಾಗಿ ಶೌಚಾಲಯ ಸೌಕರ್ಯ ನೀಡಿದ್ದು, ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳುವಲ್ಲಿ ಮುಂದಾಗುವಂತೆ ಪುರಸಭೆ ಸದಸ್ಯ ಎಚ್.ಎಸ್. ಸ್ವಾಮಿ ಇಲ್ಲಿ ಕರೆ ನೀಡಿದರು.
ಪಟ್ಟಣದ ಗಾಂಧಿನಗರದಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ನೆಹರು ಯುವಕೇಂದ್ರ ಮತ್ತು ಪ್ರೇಮ ಮಹಿಳಾ ಸಮಾಜದ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಶೌಚಾಲಯ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯದ ವ್ಯವಸ್ಥೆ ಇಲ್ಲದೆ ಬಯಲು ಪ್ರದೇಶಗಳಲ್ಲಿ ಮಲ, ಮೂತ್ರ ವಿಸರ್ಜನೆ ನಡೆಸುವುದರಿಂದ ಪರಿಸರ ಮಾಲಿನ್ಯ ಮತ್ತು ಸಾರ್ವಜನಿಕರ ಮೇಲೆ ಆರೋಗ್ಯದ ದುಷ್ಪರಿಣಾಮ ಬೀರಲಿದೆ ಎಂದು ಸ್ವಾಮಿ ನುಡಿದರು.
ಪ್ರಸ್ತುತ ಪಟ್ಟಣದಲ್ಲಿನ ಗಾಂಧಿನಗರ ಬಡಾವಣೆಯಲ್ಲಿನ ಸುಮಾರು 80 ಮಂದಿಗೆ ಪುರಸಭೆಯಿಂದ ಶೌಚಾಲಯ ನಿರ್ಮಾಣಕ್ಕೆ ಅವಕಾಶ ನೀಡಲಾಗಿದೆ. ಆದರೆ ಇದರಲ್ಲಿ ಕೇವಲ ಮೂವತ್ತರಷ್ಟು ಮಂದಿ ಮಾತ್ರ ಈ ಸವಲತ್ತು ಪಡೆಯುವಲ್ಲಿ ತಮ್ಮ ದಾಖಲೆ ಪತ್ರಗಳನ್ನು ನೀಡಿದ್ದಾರೆ. ಮಿಕ್ಕವರು ದಾಖಲೆ ಪತ್ರಗಳನ್ನು ನೀಡುವಲ್ಲಿ ಇನ್ನು ಮುಂದೆ ಬಂದಿಲ್ಲ ಎಂದು ವಿಷಾದಿಸಿದ ಅವರು, ಈ ಶೌಚಾಲಯ ನಿರ್ಮಾಣದಲ್ಲಿ ಫಲಾನುಭವಿಗಳು ಶೌಚಾಲಯದ ಸಂಪರ್ಕವನ್ನು ಒಳಚರಂಡಿಗೆ ಸಂಪರ್ಕ ನೀಡದ ಪಲಾನುಭವಿಗೆ 15 ಸಾವಿರ ಹಾಗೂ ಫಲಾನುಭವಿ ಮನೆಯ ಹಿಂಭಾಗದಲ್ಲಿನ ನಿವೇಶನದಲ್ಲಿ ಪಿಟ್ ನಿರ್ಮಿಸಿ ಸಂಪರ್ಕ ನೀಡುವ ಫಲಾನುಭವಿಗೆ 20 ಸಾವಿರ ಹಣವನ್ನು ನೀಡುತ್ತಿದೆ.
ಈ ಯೋಜನೆ ಸಫಲತೆ ಕಾಣುವಂತಾಗಲು ಫಲಾನುಭವಿಗಳು ಮುಂದೆ ಬರಬೇಕೆಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರೇಮ ಮಹಿಳಾ ಸಮಾಜದ ಅಧ್ಯಕ್ಷೆ ಪ್ರೇಮಾ ಮಂಜುನಾಥ್ ಮಾತನಾಡಿ, ಗಾಂಧಿನಗರದಲ್ಲಿ ಶೌಚಾಲಯ ನಿರ್ಮಿಸಲು ಅವಕಾಶ ನೀಡಿದ್ದು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವತ್ತ ಹೆಚ್ಚಿನ ಆಸಕ್ತಿ ವಹಿಸಬೇಕೆಂದು ಮನವಿ ಮಾಡಿದರು.
ಪುರಸಭೆಯ ಆರೋಗ್ಯ ನಿರೀಕ್ಷಕ ವಸಂತಕುಮಾರ್ ಮಾತನಾಡಿದರು. ತಾಲೂಕು ಜಾನಪದ ಪರಿಷತ್ನ ಅಧ್ಯಕ್ಷ ಬಾ.ರಾ. ಸುಬ್ಬರಾಯ ಮಾತನಾಡಿದರು. ಶಾಲೆಯ ಮುಖ್ಯ ಶಿಕ್ಷಕಿ ಕೆ. ಪ್ರಭಾಮಣಿ ಹಾಜರಿದ್ದರು. ಕುಸುಮಾ ಸ್ವಾಗತಿಸಿದರು. ಪುಷ್ಪಾಮಲ್ಲೇಶ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

