ಹಾಸನ

ಸಂಚಾರ ತೊಂದರೆ ತಪ್ಪಿಸಿ

Published On :

ಹೊಳೆನರಸೀಪುರ ಪಟ್ಟಣದ ಕೋಟೆ ದಾಸಗೌಡರ ಬೀದಿ ಅಗೆದು ತಿಂಗಳು ಕಳೆದರೂ ಇನ್ನೂ ಆ ರಸ್ತೆ ಮುಕ್ತಿ ದೊರಕಿಲ್ಲ. ಕಳೆದ ತಿಂಗಳು ಒಳಚರಂಡಿ ಕಾಮಗಾರಿಗಾಗಿ ಇದ್ದಕ್ಕಿದ್ದಂತೆ ರಸ್ತೆ ಅಗೆದು ಕಾಮಗಾರಿ ಪೂರ್ಣಗೊಳಿಸದೆ ಕಾಲಹರಣ ಮಾಡಿದ್ದರ ಪರಿಣಾಮ ಇಲ್ಲಿನ ನಿವಾಸಿಗಳು ಓಡಾಡಲು ಭಾರಿ ಸಂಕಷ್ಟ ಅನುಭವಿಸಬೇಕಾಗಿದೆ. ಅಪೂರ್ಣ ಕಾಮಗಾರಿ ಗುತ್ತಿಗೆದಾರನ ಮತ್ತು ಪುರಸಭೆ ಅಧಿಕಾರಿಗಳ ಕರ್ತವ್ಯಕ್ಕೆ ಹಿಡಿದ ಕೈಗನ್ನಡಿ ಆಗಿದೆ. ಈಗಲಾದರೂ ಈ ಕಾಮಗಾರಿಯನ್ನೂ ಪೂರ್ಣಗೊಳಿಸಿ ಈ ಭಾಗದ ನಿವಾಸಿಗಳ ಓಡಾಟಕ್ಕೆ ಅನುವು ಮಾಡಿಕೊಡುವಲ್ಲಿ ಪುರಸಭೆ ಮುಖ್ಯಾಧಿಕಾರಿ ಹರೀಶ್ ಕ್ರಮಕೈಗೊಳ್ಳುವರೇ ಎಂಬುದನ್ನು ಕಾದು ನೋಡಬೇಕಿದೆ.
ಟಿ ಮಹೇಶ್ಕುಮಾರ್, ರಾಜು, ದಿನೇಶ್, ಗೀತಮ್ಮ



ಹಾರನಹಳ್ಳಿ; ಕನಕದಾಸ ಜಯಂತ್ಯುತ್ಸವ
ಹಾರನಹಳ್ಳಿ: ಕನಕದಾಸರ ಜಯಂತ್ಯುತ್ಸವವನ್ನು ಹಾರನಹಳ್ಳಿಯ ಗುರು ಸಿದ್ದರಾಮೇಶ್ವರ ದೇವಾಲಯದಲ್ಲಿ ಆಯೋಜಿಸಲಾಗಿತ್ತು.ಗುರು ಸಿದ್ದರಾಮೇಶ್ವರ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಈ ದೇವಾಲಯದಿಂದ ಗುರು ಸಿದ್ದರಾಮೇಶ್ವರ ಹಾಗೂ ಕನಕದಾಸರ ಭಾವಚಿತ್ರವನ್ನು ಇಟ್ಟು ಹಾರನಹಳ್ಳಿಯ ರಾಜಬೀದಿಗಳಲ್ಲಿ ಉತ್ಸವವನ್ನು ಏರ್ಪಡಿಸಲಾಗಿತ್ತು.  ಉತ್ಸವದಲ್ಲಿ ನಾನಾ ಜಾನಪದ ಕಲಾತಂಡಗಳು, ಕರಡೆ ಮಜಲುಗಳು, ಉತ್ಸವಕ್ಕೆ ಮೆರಗು ನೀಡಿದವು. ಈ ಉತ್ಸವದಲ್ಲಿ ಕುರುಬ ಸಮಾಜದ ಮುಖಂಡರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
6ರಂದು ಸಶಸ್ತ್ರ ಪಡೆಗಳ ಧ್ವಜ ದಿನ
ಹಾಸನ: ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯನ್ನು ಡಿ.6ರಂದು ಬೆಳಗ್ಗೆ 11ಕ್ಕೆ ನಗರದ ಯೂತ್ ಹಾಸ್ಟೇಲ್ನಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಆಚರಿಸಲು ನಿರ್ಧರಿಸಲಾಗಿದೆ. ಎಲ್ಲಾ ಮಾಜಿ ಸೈನಿಕರು ಮತ್ತು ಮಾಜಿ ಸೈನಿಕರ ಅವಲಂಬಿತರು ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೋರಲಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.