ಇಬ್ಬರು ನಾಪತ್ತೆ
ಜಾವಗಲ್: ಜಾವಗಲ್ ಹೋಬಳಿಯಲ್ಲಿ ಓರ್ವ ಬಾಲಕಿ ಹಾಗೂ ಯುವತಿಯೊಬ್ಬಳು ನಾಪತ್ತೆಯಾಗಿರುವ ಘಟನೆ ಇತ್ತೀಚೆಗೆ ನಡೆದಿದೆ.
ಜಾವಗಲ್ ಹೋಬಳಿ ರಾಮಕೃಷ್ಣಪುರದ ಹನುಮಂತಯ್ಯ ಎಂಬುವವರ ಮಗಳು ಸುಷ್ಮಿತಾ (19) ಎಂಬ ವಿದ್ಯಾರ್ಥಿನಿ ಚಿಕ್ಕಮಗಳೂರು ಆಶ್ರಯ ನರ್ಸಿಂಗ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ನರ್ಸಿಂಗ್ ಡಿಪ್ಲೋಮೊ ವ್ಯಾಸಂಗ ಮಡುತ್ತಿದ್ದು, ನ. 25ರಂದು ನಾಪತ್ತೆಯಾಗಿದ್ದಾರೆ.
ಅಂದು ಊರಿನಿಂದ ತನ್ನ ತಮ್ಮ ನಿತ್ಯಪ್ರಸಾದ್ ಜೊತೆ ಜಾವಗಲ್ಗೆ ಬಂದು ಬೆಳಗ್ಗೆ 7.30ರ ಸುಮಾರಿಗೆ ಚಿಕ್ಕಮಗಳೂರು ಬಸ್ಸಿಗೆ ಕಾಲೇಜಿಗೆ ಹೋಗುತ್ತೇನೆಂದು ಹೇಳಿ ಬಸ್ನಲ್ಲಿ ಹೋದವರು, ಇದುವರೆಗೂ ಪತ್ತೆಯಾಗಿಲ್ಲ. ಕಾಲೇಜಿಗೂ ಹೋಗದೆ, ಹಾಸ್ಟಲ್ಗೂ ಹೋಗದೇ ಇರುವ ಸುಷ್ಮಿತಾ ಇತ್ತ, ಊರಿಗೂ ವಾಪಸ್ ಬಂದಿಲ್ಲ.
ಈ ಬಗ್ಗೆ ವಿದ್ಯಾರ್ಥಿನಿಯ ತಂದೆ ಹನುಮಂತಯ್ಯ ತಡವಾಗಿ ಜಾವಗಲಲ್ಪೋಲೀಸರಿಗೆ ದೂರುನೀಡಿದ್ದು ಜಾವಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಜಾವಗಲ್ ಹೋಬಳಿ ಅರಕೆರೆ ಗ್ರಾಮದ ಕುಮಾರ ನಾಯ್ಕ ಎಂಬವರ ಪುತ್ರಿ ಶ್ರೀದೇವಿ (15) 10ನೇ ತರಗತಿ ಓದುತ್ತಿದ್ದು, ನಾಪತ್ತೆಯಾಗಿದ್ದಾರೆ.
ಅದೇ ಊರಿನ ಪಕ್ಕದ ಮನೆಯ ಕಾಳಿಯಪ್ಪನ ಮಗ ಮೂರ್ತಿ ಎಂಬಾತ ನ. 23ರಂದು ರಾತ್ರಿ ಅಪಹರಿಸಿಕೊಂಡು ಹೋಗಿದ್ದಾನೆ ಎಂದು ಆರೋಪಿಸಲಾಗಿದೆ. ಅರಕೆರೆ ಶ್ರೀ ಬಸವೇಶ್ವರ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕಿ ಶ್ರೀದೇವಿಯು ಕಾಣೆಯಾಗಿರುವ ಬಗ್ಗೆ ತಂದೆ ಕುಮಾರ ನಾಯ್ಕ ಜಾವಗಲ್ ಪೊಲೀಸರಿಗೆ ದೂರುನೀಡಿದ್ದು ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

