ಹಾರನಳ್ಳಿಯಲ್ಲಿ ಇಂದು ಉತ್ಸವ
ಹಾರನಹಳ್ಳಿ: ಇಲ್ಲಿನ ಶ್ರೀ ಸಿದ್ಧರಾಮೇಶ್ವರ ಮಠದಲ್ಲಿ ಡಿ.3 ರಂದು ಮಧ್ಯಾಹ್ನ 2 ಕ್ಕೆ ಶ್ರೀ ನಿರಂಜನಾನಂದ ಪುರಿ ಮಹಾಸ್ವಾಮಿಗಳು ಕನಕಗುರು ಪೀಠ ಶ್ರೀ ಕ್ಷೇತ್ರ ಕಾಗಿನೆಲೆ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರು ಕನಕ ಗುರುಪೀಠ ಕೆ.ಆರ್.ನಗರ ಗುರುಗಳಿಗೆ ಪಾದಪೂಜೆ ಹಾಗೂ ಹಾರನಹಳ್ಳಿಯಲ್ಲಿ ಉತ್ಸವ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವಂತೆ ಕೋರಿದೆ.
ಪ್ರಥಮ ಸ್ಥಾನ
ಅರಸೀಕೆರೆ: ಅರಸೀಕೆರೆಯ ವಂದೇ ಮಾತರಂ ಕಲಾ ತಂಡಕ್ಕೆ ಅಖಿಲ ಭಾರತ ನಾಟಕೋತ್ಸವದಲ್ಲಿ ಪ್ರಥಮ ಸ್ಥಾನ ಪಡೆದಿದೆ. ಅರಸೀಕೆರೆಯ ಸಂಸ್ಕಾರ ಭಾರತಿ ಹಾಗೂ ವಂದೇ ಮಾತರಂ ಕಲಾ ರಂಗದ ಹವ್ಯಾಸಿ ಕಲಾವಿದರು ಉತ್ತರ ಪ್ರದೇಶದ ಅಲಹಾಬಾದ್ನಲ್ಲಿ ಅಲಹಾಬಾದ್ ನಾಟ್ಯ ಸಂಘ ಹಾಗೂ ಉತ್ತರ ಪ್ರದೇಶ ಸರ್ಕಾರ ಸಂಯುಕ್ತವಾಗಿ ಆಯೋಜಿಸಿದ್ದ ಅಖಿಲ ಭಾರತೀಯ ನಾಟಕೋತ್ಸವದಲ್ಲಿ ಸಂಸ್ಕಾರ ಭಾರತಿಯ ದಕ್ಷಿಣ ಭಾರತ ಸಂಚಾಲಕರಾದ ಹಿರೇಮಗಳೂರು ಚಕ್ರವರ್ತಿ ತಿರುಮಗನ್ ಮಾರ್ಗದರ್ಶನದಲ್ಲಿ ದಿಬ್ಬೂರು ರಮೇಶ್ ವಿರಚಿತ ಖಡ್ಗ ಸಮಾಧಿ(ಅಶೋಕ ಚಕ್ರವರ್ತಿಯ ಮನಃ ಪರಿವರ್ತನೆ) ಎಂಬ ಚಾರಿತ್ರಿಕ ನಾಟಕವನ್ನು ರಂಗಕರ್ಮಿ ಕೆ.ಎಲ್. ಹರೀಶ್ಕುಮಾರ್ ನಿರ್ದೇಶನದಲ್ಲಿ ಪ್ರದರ್ಶಿಸಿ ಕನ್ನಡ ಭಾಷಾ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದು ಕೀರ್ತಿ ತಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

